ಹೊಸ ಬಜಾಜ್ ಚೇತಕ್ vs ಟಿವಿಎಸ್ ಐಕ್ಯೂಬ್: ಬೆಲೆ, ಫೀಚರ್ಸ್ ಹೋಲಿಕೆ... ಯಾವುದು ಬೆಸ್ಟ್?

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ ಆಟೋ ಇತ್ತೀಚೆಗೆ ಚೇತಕ್ 35 ಸೀರಿಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಸದ್ಯ ಮಾರಾಟದಲ್ಲಿರುವ 32 ಸೀರಿಸ್ ಮಾಡಲ್‌ಗಳಿಗಿಂತ ಗಮನಾರ್ಹ ನವೀಕರಣವನ್ನು ಪಡೆದಿದೆ. ಹೊಸ ಚೇತಕ್ ತನ್ನ ಮೂರು ವೇರಿಯೆಂಟ್‌ಗಳಲ್ಲಿ, ಟಾಪ್-ಸ್ಪೆಕ್ ಚೇತಕ್ 3501 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಈ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತದೆ, ಟಿವಿಎಸ್ ಐಕ್ಯೂಬ್ ಎಸ್‌ನಂತಹ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತದೆ. ಇವುಗಳ ಬ್ಯಾಟರಿ ಕಾರ್ಯಕ್ಷಮತೆ, ವೈಶಿಷ್ಟ್ಯಗಳು ಮತ್ತು ಬೆಲೆಯ ವಿಷಯದಲ್ಲಿ ಚೇತಕ್ 3501 ಮತ್ತು ಐಕ್ಯೂಬ್ ಎಸ್ ಹೋಲಿಕೆ ಇಲ್ಲಿದೆ.

ಚೇತಕ್ 3501 ಬೆಲೆ: ನೂತನ ಬಜಾಜ್ ಚೇತಕ್ 35 ಸೀರೀಸ್ (Bajaj Chetak 35 Series) ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ರೂ.1.20 ಲಕ್ಷದಿಂದ ರೂ.1.27 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿವೆ. 3501 ಹಾಗೂ 3502 ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿವೆ.

new-bajaj-chetak-vs-tvs-iqube-price-features-comparison-which-is-best

ಟಿವಿಎಸ್ ಐಕ್ಯೂಬ್ ಬೆಲೆ: ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ (TVS iQube), 2 ಆಕರ್ಷಕ ರೂಪಾಂತರ (Variants)ಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಸಾಮಾನ್ಯ ಐಕ್ಯೂಬ್ (iQube) ರೂಪಾಂತರ ರೂ.1,47,968 ಹಾಗೂ ಐಕ್ಯೂಬ್ ಎಸ್ (iQube S) ರೂಪಾಂತರ ರೂ.1,53,909 ಆನ್ - ರೋಡ್ (ಬೆಂಗಳೂರು) ಬೆಲೆಯನ್ನು ಹೊಂದಿದೆ.

ಚೇತಕ್ ಕಾರ್ಯಕ್ಷಮತೆ: ಈ ಬಜಾಜ್ ಚೇತಕ್ 35 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು, 3.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಅನ್ನು ಪಡೆದಿವೆ. ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ಓಡುತ್ತವೆ. 73 - ಟಾಪ್ ಸ್ಪೀಡ್‌ನ್ನು ಹೊಂದಿವೆ. ಇವುಗಳಲ್ಲಿ ಉಪಯೋಗಿಸಿರುವ ಬ್ಯಾಟರಿಯು ಕೇವಲ 3 ಗಂಟೆಗಳಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಿ ಬಿಡುತ್ತದೆ.

new-bajaj-chetak-vs-tvs-iqube-price-features-comparison-which-is-best

ನೂತನ ಚೇತಕ್ 35 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಟಿಎಎಫ್‌ಟಿ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಮ್ಯೂಸಿಕ್ ಕಂಟ್ರೋಲ್, ಆನ್‌ಬೋರ್ಡ್ ಚಾರ್ಜಿಂಗ್ ಮತ್ತು ಇಂಟಿಗ್ರೇಟೆಡ್ ಮ್ಯಾಪ್ಸ್ ಒಳಗೊಂಡನಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿವೆ. ಇದರೊಟ್ಟಿಗೆ ಬೃಹತ್ ಗಾತ್ರದ 35-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿವೆ.

ಟಿವಿಎಸ್ ಐಕ್ಯೂಬ್ ಕಾರ್ಯಕ್ಷಮತೆ: ಎರಡು ರೂಪಾಂತರಗಳು, 3.04 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. 140 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ 4.4 kW ಹಬ್ - ಮೌಂಟೆಡ್ BLDC ಮೋಟಾರ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 km ರೇಂಜ್ ನೀಡಲಿವೆ. 75 km/h ಟಾಪ್ ಸ್ಪೀಡ್, 4 ಗಂಟೆ 30 ನಿಮಿಷದಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ.

ಮೊಬೈಲ್ ಚಾರ್ಜ್ ಮಾಡಲು ಯುಎಸ್‌‍ಬಿ ಸಾಕೆಟ್, 32 ಲೀಟರ್ ಸಾಮರ್ಥ್ಯದ ಸ್ಟೋರೇಜ್, ಇಕೋ, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಸ್ಕೂಟರ್ ಒಳಗೊಂಡಿದೆ. ಸ್ಪೋರ್ಟ್ ಮೋಡ್‌ನಲ್ಲಿ ಕೇವಲ 4.2 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದೆ. ಸದ್ಯ, ಗರಿಷ್ಠ ರೇಂಜ್ (145 ಕಿ.ಮೀ) ರೇಂಜ್ ನೀಡುವ ಟಿವಿಎಸ್ ಐಕ್ಯೂಬ್ ಎಸ್‌ಟಿ ರೂಪಾಂತರದ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 26, 2024, 10:36 [IST]
English summary
New bajaj chetak vs tvs iqube price features comparison which is best
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+