ಬಡವರ ಬಂಗಾರವಾಗಲಿದೆ ಹೊಸ ಬಜಾಜ್ CNG ಬೈಕ್: 100 ಕಿ.ಮೀ ಓಡಿಸಲು 80 ರೂ. ಸಾಕು!

ಭಾರತದಲ್ಲಿ ಬಹುನಿರೀಕ್ಷಿತ ಬಜಾಜ್ CNG ಬೈಕ್ ಬಿಡುಗಡೆಯಾಗಿದೆ, ಎಲ್ಲರ ನಿರೀಕ್ಷೆಗಳನ್ನು ಮೀರಿ ಬಜಾಜ್ ತನ್ನ ಹೊಸ ಬೈಕ್‌ನ ವಿಶೇಷತೆಗಳನ್ನು ಪರಿಚಯಿಸಿದೆ. ಬಜಾಜ್ ಕಂಪನಿ ಹೊಸ CNG ಮೋಟಾರ್‌ಸೈಕಲ್‌ಗೆ ಫ್ರೀಡಂ 125 (bajaj freedom 125 cng) ಎಂದು ನಾಮಕರಣ ಮಾಡಿದೆ. ಈ ಬೈಕ್ ದ್ವಿಚಕ್ರ ವಾಹನ ವಲಯದಲ್ಲಿ ಗೇಮ್ ಚೇಂಜರ್ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಏಕೆಂದರೆ ಇದರ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್, ಆಕರ್ಷಕ ಡಿಸೈನ್ ಸೇರಿದಂತೆ ಈ ಬೈಕ್ CNG ಮಾತ್ರವಲ್ಲದೇ ಪೆಟ್ರೋಲ್‌ನಲ್ಲೂ ಓಡಿಸಬಹುದಾದ ಆಯ್ಕೆಯನ್ನು ಹೊಂದಿದೆ. ಈ ಲೇಖನದಲ್ಲಿ ಬೈಕ್ ಕುರಿತ ಸಂಪೂರ್ಣ ಮಾಹಿತಿ ತಿಳಿಯೋಣ.

ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 95,000 ದಿಂದ ರೂ.1,10,000 ಗಳಾಗಿದೆ. ಇದು ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಎಲ್ಲವೂ 125 ಸಿಸಿ ಏರ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿವೆ. ಇದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಬೈಕ್ ಅನ್ನು ಓಡಿಸಬಹುದಾಗಿದೆ.

new-bajaj-freedom-125-cng-bike-price-mileage-features-details

ಬಜಾಜ್ ಫ್ರೀಡಂ 125 ಮೈಲೇಜ್: ಕಂಪನಿಯ ಪ್ರಕಾರ ಬಜಾಜ್ ಫ್ರೀಡಂ 125 ಬೈಕ್, ಪ್ರತಿ ಕೆ.ಜಿ ಸಿಎನ್‌ಜಿಗೆ 102 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದರಲ್ಲಿ ಪೆಟ್ರೋಲ್ ಆಯ್ಕೆ ಕೂಡ ಇದ್ದು, ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ 65 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಬಜಾಜ್ ಹೇಳಿಕೊಂಡಿದೆ.

ಈ ಹೊಸ ಬಜಾಜ್ ಫ್ರೀಡಂ 125 ಬೈಕ್‌ನಲ್ಲಿ 2 ಕೆ.ಜಿ ಸಿಎನ್‌ಜಿ ಟ್ಯಾಂಕ್ ಮತ್ತು 2 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಒಮ್ಮೆ ಪೆಟ್ರೋಲ್ ಹಾಗೂ ಸಿಎನ್‌ಜಿ ಟ್ಯಾಂಕ್‌ಗಳನ್ನು ಪೂರ್ಣ ತುಂಬಿಸಿದರೆ ಸುಮಾರು 330 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

new-bajaj-freedom-125-cng-bike-price-mileage-features-details

ಬೈಕ್‌ನಲ್ಲಿ ಸಿಎನ್‌ಜಿ ಖಾಲಿಯಾದರೆ ಪೆಟ್ರೋಲ್ ಅನ್ನು ಸಹಾಯಕ ಇಂಧನವಾಗಿ ಬಳಸಬಹುದು. ಅಲ್ಲಿಗೆ ವಾಸ್ತವಿಕವಾಗಿ ಈ ಬೈಕ್ ಸುಮಾರು 200 ಕಿ.ಮೀ ಮಾತ್ರ ಸಿಎನ್‌ಜಿ ಮೂಲಕ ಮೈಲೇಜ್ ಪಡೆಯಬಹುದು. ಹಾಗೆಯೇ 2 ಲೀಟರ್ ಪೆಟ್ರೋಲ್‌ನಿಂದ 130 ಕಿ.ಮೀ ಮೈಲೇಜ್ ಪಡೆಯಬಹುದು ಎಂಬುದನ್ನು ಗಮನಿಸಬೇಕು.

ಬಜಾಜ್ ಫ್ರೀಡಂ 125 ನಿರ್ವಹಣಾ ವೆಚ್ಚ: ಬೆಂಗಳೂರಿನಲ್ಲಿ ಪ್ರಸ್ತುತ ಸಿಎನ್‌ಜಿ ಬೆಲೆಯು ಪ್ರತಿ ಕೆ.ಜಿ.ಗೆ 82.5 ರೂ. ಇದ್ದು, ಪ್ರತಿ ಕೆ.ಜಿ.ಗೆ 102 ಕಿ.ಮೀ ಮೈಲೇಜ್ ಪರಿಗಣಿಸಿದರೆ, ಚಾಲನೆಯ ವೆಚ್ಚವು ಪ್ರತಿ ಕಿ.ಮೀ.ಗೆ ಸುಮಾರು 78 ಪೈಸೆ ಬೀಳುತ್ತದೆ. ನಿಮ್ಮ ಸರಾಸರಿ ಮಾಸಿಕ ಓಡಾಟವು 1000 ಕಿ.ಮೀ ಆಗಿದ್ದರೆ, ಪ್ರತಿ ತಿಂಗಳು ಸಿಎನ್‌ಜಿಗಾಗಿ ನಿಮಗೆ 780 ರೂ. ಖರ್ಚಾಗಬಹುದು.

new-bajaj-freedom-125-cng-bike-price-mileage-features-details

CNG ಬೈಕ್ ಸವಾಲುಗಳು: ಫ್ರೀಡಂ 125 ನೊಂದಿಗೆ, ನೀವು ಪ್ರತಿ 200 ಕಿ.ಮೀ.ಗೆ ಸಿಎನ್‌ಜಿ ತುಂಬಿಸಲು ಬಂಕ್‌ಗೆ ಹೋದರೆ ಕಾಯುವ ಸಮಯ ಮತ್ತು ದೀರ್ಘ ಸರತಿ ಸಾಲುಗಳನ್ನು ಎದುರಿಸಬೇಕು. ಆದರೆ ಸಾಮಾನ್ಯ 125 ಸಿಸಿ ಪೆಟ್ರೋಲ್ ಬೈಕ್‌ಗಳಿಗೆ ಕಾಯುವ ಸಮಯ ಹಚ್ಚಿರುವುದಿಲ್ಲ. ಒಟ್ಟಾರೆ ಇದಕ್ಕೆ ಪರಿಹಾರವೆಂದರೆ ಸಿಎನ್‌ಜಿ ಮೂಲಸೌಕರ್ಯ ಬೆಳೆಯುವುದೊಂದೆ ಮಾರ್ಗವಾಗಿದೆ. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 6, 2024, 14:20 [IST]
English summary
New bajaj freedom 125 cng bike price mileage features details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+