ದುಬಾರಿ ಬೆಲೆಯ ಹೊಸ ಬಿಎಂಡಬ್ಲ್ಯು S 1000 XR ಬೈಕ್ ವಿಶೇಷತೆಗಳೇನು?

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ (BMW Motorrad India) ತನ್ನ ಹೊಸ ಬಿಎಂಡಬ್ಲ್ಯು S 1000 XR ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಬಿಎಂಡಬ್ಲ್ಯು S 1000 XR (BMW S 1000 XR) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.22.50 ಲಕ್ಷವಾಗಿದೆ.

ವಿನ್ಯಾಸ: ಹೊಸ ಬಿಎಂಡಬ್ಲ್ಯು S 1000 XR ಬೈಕ್ ಪ್ರಾಯೋಗಿಕತೆ ಮತ್ತು ಸ್ಪೋರ್ಟಿ ವಿನ್ಯಾಸದ ಸಂಪೂರ್ಣ ಮಿಶ್ರಣವಾಗಿದೆ. ಅದರ ಸೂಪರ್‌ಸ್ಪೋರ್ಟ್ ಒಡಹುಟ್ಟಿದ S 1000 RR ನಿಂದ ಸ್ಫೂರ್ತಿ ಪಡೆದುಕೊಂಡಿದೆ. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು S 1000 XR ಬೈಕ್ ಸ್ಪ್ಲಿಟ್ LED ಹೆಡ್‌ಲೈಟ್ ಅನ್ನು ಚೂಪಾದ ಫಾಸಿಕವನ್ನು ಸಂಯೋಜಿಸಲಾಗಿದೆ.

BMW S 1000 XR

ಈ ಹೊಸ ದುಬಾರಿ ಬೈಕ್ ಒಟ್ಟಾರೆಯಾಗಿ ಚಿಸೆಲ್ಡ್ ಬಾಡಿವರ್ಕ್ ಅನ್ನು ಪಡೆಯುತ್ತದೆ. ಈ ಬಿಎಂಡಬ್ಲ್ಯು ಬೈಕಿನಲ್ಲಿ ಟೂರರ್ ಉದ್ದೇಶದಿಂದಾಗಿ, ಎತ್ತರದ ನಿಲುವು ಮತ್ತು ನೇರವಾದ ಇನ್ನೂ ಕಮಾಂಡಿಂಗ್ ರೈಡಿಂಗ್ ಭಂಗಿಯನ್ನು ಪಡೆಯುತ್ತದೆ. ಒಟ್ಟಾರೆಯಾಗಿ ಈ ಬೈಕ್ ಅಗ್ರೇಸಿವ್ ಮತ್ತು ಯುವಕರನ್ನು ಸೆಳೆಯುವಂತ ಆಕರ್ಷಕ ಡಿಸೈ ಅನ್ನು ಹೊಂದಿದೆ.

ಎಂಜಿನ್: ಹೊಸ ಬಿಎಂಡಬ್ಲ್ಯು S 1000 XR ಬೈಕಿನಲ್ಲಿ 999cc ಇನ್‌ಲೈನ್ ನಾಲ್ಕು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 170 bhp ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ S 1000 XR ಮೋಟಾರ್ ಅನ್ನು S 1000 RR ನಿಂದ ಎರವಲು ಪಡೆದರೂ, ಅದು ಡಿಟ್ಯೂನ್ ಆಗುತ್ತದೆ ಮತ್ತು ಪವರ್ ಕಡಿಮೆಯಾಗುತ್ತದೆ.

BMW S 1000 XR

ಫೀಚರ್ಸ್: ಹೊಸ ಬಿಎಂಡಬ್ಲ್ಯು S 1000 XR ಬೈಕ್ ಫೈರ್‌ಪವರ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕಲರ್ TFT, ರೈಡಿಂಗ್ ಮೋಡ್‌ಗಳು, ABS, ಟ್ರ್ಯಾಕ್ಷನ್ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ಸ್ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಬೈಕಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿವೆ.

ಸಸ್ಪೆಕ್ಷನ್ ಮತ್ತು ಬ್ರೇಕಿಂಗ್: ಹೊಸ ಬಿಎಂಡಬ್ಲ್ಯು S 1000 XR ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಈ ಬೈಕ್ ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಸ್ಟೆಬಿಲೈಸರ್‌ನೊಂದಿಗೆ ಸಜ್ಜುಗೊಳಿಸಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡ್ಯುಯಲ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

BMW S 1000 XR

ಬಣ್ಣಗಳ ಆಯ್ಕೆ: ಹೊಸ ಬಿಎಂಡಬ್ಲ್ಯು S 1000 XR ಬೈಕ್ ಲೈಟ್ ವೈಟ್, ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್ 2 ಮತ್ತು ಗ್ರಾವಿಟಿ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಬಿಎಂಡಬ್ಲ್ಯು S 1000 XR ಬೈಕ್ ಪ್ಯಾನಿಯರ್‌ಗಳು, ಟಾಪ್ ಬಾಕ್ಸ್, ಕಾರ್ಬನ್ ಫೈಬರ್ ಕ್ರ್ಯಾಶ್ ಬಾರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಲಗೇಜ್‌ಗಾಗಿ ಆಯ್ಕೆಯ ಅಕ್ಸೆಸರೀಸ್ ಸಹ ನೀಡುತ್ತದೆ.

ಪರ್ಫಾಮೆನ್ಸ್: ಹೊಸ ಬಿಎಂಡಬ್ಕ್ಯು S 1000 XR ಬೈಕ್ 3.25 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಸೂಪರ್ ಬೈಕ್ 253 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಬೈಕ್ ಅನ್ನು ಟ್ರ್ಯಾಕ್ ರೈಡಿಂಗ್ ಮತ್ತು ಟ್ರೂವಲ್ ಸೂಕ್ತವಾಗಿಸಲು ಸೀಟನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಇದು ಈಗ 850 ಎಂಎಂ ಎತ್ತರದಲ್ಲಿದೆ ಮತ್ತು ಕಡಿಮೆ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, May 23, 2024, 11:41 [IST]
English summary
New bmw s 1000 xr top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+