ರಿವರ್ಸ್ ಗೇರ್‌ ಹೊಂದಿರುವ ಹೊಸ ಎಬ್ಲು ಫಿಯೊ ಎಕ್ಸ್‌ ಇವಿ ಸ್ಕೂಟರ್ ವಿಶೇಷತೆಗಳು!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ, ದೇಶಿಯವಾಗಿ ನಿರ್ಮಾಣವಾಗುತ್ತಿರುವ ಹೊಸ ಇವಿಗಳು ಸದ್ಯ ಭಾರೀ ಸದ್ದು ಮಾಡುತ್ತಿವೆ. ಇತ್ತೀಚೆಗೆ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್, ಫ್ಯಾಮಿಲಿ ಇ-ಸ್ಕೂಟರ್ ಎಬ್ಲು ಫಿಯೊ ಎಕ್ಸ್‌ (Eblu Feo X)ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದ್ರೆ 110 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿದೆ. ಸ್ಕೂಟರ್‌ನಲ್ಲಿ 2.36 kW Li-ion ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದನ್ನು ಚಾರ್ಜ್‌ ಮಾಡಲು 60V ಸಾಮರ್ಥ್ಯದ ಹೋಮ್ ಚಾರ್ಜರ್ ಅನ್ನು ನೀಡಲಾಗುತ್ತದೆ.

ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 99,999 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಸ್ಕೂಟರ್ ಮೇಲೆ 3 ವರ್ಷಗಳು ಅಥವಾ 30,000 ಕಿ.ಮೀ ವಾರಂಟಿ ನೀಡುತ್ತಿರುವುದಾಗಿ ಘೋಷಿಸಿದೆ. ಈ ಸ್ಕೂಟರ್ 2.36 kW ಬ್ಯಾಟರಿ ಹೊಂದಿದ್ದು, ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಒಮ್ಮೆ ಚಾರ್ಜ್‌ ಮಾಡಿದ್ರೆ 110 ಕಿ.ಮೀ ಓಡಿಸಬಹುದು.

new-eblu-feo-x-electric-scooter-price-features-range-details

ಹೊಸ ಸ್ಕೂಟರ್‌ನಲ್ಲಿ 7.4 ಇಂಚುಗಳ ಡಿಜಿಟಲ್ ಕಲರ್ ಡಿಸ್ಪ್ಲೇ ನೀಡಿದ್ದು, ಇದರಲ್ಲಿ ವಾಹನದ ಮಾಹಿತಿಯೊಂದಿಗೆ ನ್ಯಾವಿಗೇಷನ್ ಅಸಿಸ್ಟೆಂಟ್, ಇನ್‌ಕಮಿಂಗ್ ಮೆಸೇಜ್ ಅಲರ್ಟ್, ಸರ್ವೀಸ್ ಅಲರ್ಟ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಬ್ಲೂಟೂತ್ ಕನೆಕ್ಟಿವಿಟಿ, ಕಾಲ್ ಅಲರ್ಟ್, ಬ್ಯಾಟರಿ SOC ಇಂಡಿಕೇಟರ್, ಮೋಡ್‌ನ ಡಿಸ್ಪ್ಲೇ, ರಿವರ್ಸ್ ಇಂಡಿಕೇಟರ್, ಥ್ರೊಟಲ್ ಫಾಲ್ಟ್ ಸೆನ್ಸರ್, ಮೋಟಾರ್ ಫಾಲ್ಟ್ ಸೆನ್ಸರ್‌ನಂತಹ ಮಾಹಿತಿಯನ್ನು ಪಡೆಯಬಹುದು.

ಸೀಟ್ ಸ್ಟೋರೇಜ್ ಜಾಗದ ಅಡಿಯಲ್ಲಿ 28 ಲೀಟರ್ ಶೇಕರಣಾ ಸ್ಥಳ, ನ್ಯಾವಿಗೇಶನ್‌ಗಾಗಿ ಬ್ಲೂಟೂತ್ ಸಂಪರ್ಕ, ವಿಶ್ರಾಂತಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಆರಾಮವಾದ ಸೀಟ್, ಅನುಕೂಲಕರ ಪೆಟ್ಟಿಗೆಯೊಂದಿಗೆ ಸಂಗ್ರಹಣೆಯ ಜಾಗ, ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸಲು ಸಾಕಷ್ಟು ವಿಶಾಲವಾದ ಫ್ಲೋರ್ಬೋರ್ಡ್ ಅನ್ನು ಸ್ಕೂಟರ್ ಹೊಂದಿದೆ.

new-eblu-feo-x-electric-scooter-price-features-range-details

ಬ್ಯಾಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಡ್ರೈವಿಂಗ್ ರೇಂಜ್ ಹೆಚ್ಚಿಸಲು ಪುನರುತ್ಪಾದಕ ಬ್ರೇಕಿಂಗ್ (regenerative braking) ವ್ಯವಸ್ಥೆಯನ್ನು ನೀಡಲಾಗಿದೆ. ಹಾಗೆಯೇ ಸ್ಕೂಟರ್‌ನಲ್ಲಿ ಎಕಾನಮಿ, ನಾರ್ಮಲ್ ಮತ್ತು ಪವರ್ ಎಂಬ ಮೂರು ರೈಡ್ ಮೋಡ್‌ಗಳನ್ನು ಸಹ ನೀಡಲಾಗಿದ್ದು, 60 ಕಿ.ಮೀ ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಎಬ್ಲು ಫಿಯೊ ಎಕ್ಸ್‌ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ಟ್ಯೂಬ್ ಟ್ವಿನ್ ಶಾಕರ್ ನೀಡಲಾಗಿದೆ. ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಬಿಎಸ್ ಡಿಸ್ಕ್ ಬ್ರೇಕ್ ಸಹ ನೀಡಲಾಗಿದೆ. ಬಣ್ಣಗಳ ವಿಷಯಕ್ಕೆ ಬಂದರೆ ಜೆಟ್ ಬ್ಲಾಕ್, ಟೆಲಿ ಗ್ರೇ, ಸಯಾನ್ ಬ್ಲೂ, ವೈನ್ ರೆಡ್, ಟ್ರಾಫಿಕ್ ವೈಟ್ ಎಂಬ ಐದು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ.

new-eblu-feo-x-electric-scooter-price-features-range-details

ಹೊಸ ಎಬ್ಲು ಫಿಯೊ ಸ್ಕೂಟರ್ ರಾತ್ರಿ ಚಾಲನೆಗಾಗಿ ಹೈ - ರೆಸಲ್ಯೂಶನ್ AHO LED ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್ ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ 12 - ಇಂಚಿನ ಬದಲಾಯಿಸಬಹುದಾದ ಟ್ಯೂಬ್‌ಲೆಸ್ ಟೈರ್‌ಗಳು, ಸೈಡ್ ಸ್ಟ್ಯಾಂಡ್ ಸೆನ್ಸಾರ್ ಇಂಡಿಕೇಟರ್ ಸಹ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 2, 2024, 17:19 [IST]
English summary
New eblu feo x electric scooter price features range details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+