ಅಗ್ಗದ ಬೆಲೆಯ ಹೊಸ ಫ್ಯೂಜಿಯಾಮಾ ಕ್ಲಾಸಿಕ್ ಇವಿ ಸ್ಕೂಟರ್ ವಿಶೇಷತೆಗಳು

ಫ್ಯೂಜಿಯಾಮಾ ಇವಿ (Fujiyama EV) ಕಂಪನಿಯು ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ 'ಕ್ಲಾಸಿಕ್' ಇವಿಯನ್ನು ಬಿಡುಗಡೆ ಮಾಡಿದೆ. ಕಸ್ಟಮೈಸ್ ಮಾಡಬಹುದಾದ ರೈಡ್‌ ಮೋಡ್‌ಗಳೊಂದಿಗೆ ಈ ಹೊಸ ಇವಿ ಸ್ಕೂಟರ್ 79,999 ಎಕ್ಸ್ ಶೋರೂಂ ಬೆಲೆಗೆ ಖರೀದಿಗೆ ಲಭ್ಯವಿದ್ದು, ಕೇವಲ 1,999 ರೂ.ಗಳ ಬುಕಿಂಗ್ ಶುಲ್ಕದೊಂದಿಗೆ ಬುಕ್‌ ಮಾಡಿಕೊಳ್ಳಬಹುದು.

ಫ್ಯೂಜಿಯಾಮಾ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್ ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದ್ದು, ಸ್ಕೂಟರ್ ಓಡಿಸುವವರು ಉತ್ಸಾಹಭರಿತ ಸವಾರಿ ಅನುಭವ ಪಡೆಯಬಹುದಾಗಿದೆ. ನಗರ ಪ್ರಯಾಣಕ್ಕೆ ಅತ್ಯುತ್ತಮ ಆಯ್ಕೆಯಾಗಿರುವ ಸ್ಕೂಟರ್, ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಭಿನ್ನವಾಗಿದ್ದು, ಅತ್ಯುತ್ತಮ ಪ್ರಯಾಣ ಅನುಭವವನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

new-fujiyama-classic-ev-scooter-price-features-details

ಇದರಲ್ಲಿರುವ ದೃಢವಾದ 3000 - ವ್ಯಾಟ್ ಪೀಕ್ ಪವರ್‌ ಮೋಟರ್ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಸ್ಕೂಟರ್ 60 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 110 ಕಿ.ಮೀ ವರೆಗೆ ರೇಂಜ್ ಅನ್ನು ಪಡೆಯಬಹುದು. ಹಾಗೆಯೇ ಸ್ಕೂಟರ್ ಅನ್ನು ಸಂಪೂರ್ಣ ಚಾರ್ಜ್ ಮಾಡಲು ನಾಲ್ಕು ಗಂಟೆ ಸಮಯ ತೆದುಕೊಳ್ಳುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ವಿಶೇಷತೆಗಳು: ಟ್ವಿನ್ - ಬ್ಯಾರೆಲ್ ಎಲ್ಇಡಿ ಲೈಟ್‌ಗಳು ಮತ್ತು ಸುರಕ್ಷಿತ ಮತ್ತು ಸ್ಪಂದಿಸುವ ಬ್ರೇಕಿಂಗ್ ಸಿಸ್ಟಮ್‌ಗಾಗಿ ಕಾಂಬಿ-ಡ್ರಮ್ ಬ್ರೇಕ್‌ಗಳನ್ನು ಹೊಂದಿರುವ ಫ್ಯುಜಿಯಾಮಾ ಇವಿ ಕ್ಲಾಸಿಕ್, ಪ್ರತಿ ಸವಾರಿಯಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಜೊತೆಗೆ, ಕೇವಲ 4 ಗಂಟೆಗಳ ತ್ವರಿತ ಚಾರ್ಜಿಂಗ್ ಸಮಯದೊಂದಿಗೆ, ಸವಾರರು ರಸ್ತೆಯಲ್ಲಿ ಹೆಚ್ಚು ಸಮಯ ಕಳೆಯಬಹುದು ಎಂದು ಕಂಪನಿ ತಿಳಿಸಿದೆ.

ಹೊಸ ಫ್ಯೂಜಿಯಾದ ಕ್ಲಾಸಿಕ್ ಎಲೆಕ್ಟ್ರಿಕ್ ಸ್ಕೂಟರ್, ಐಒಟಿ - ಸಕ್ರಿಯಗೊಳಿಸಿದ ಲಿಥಿಯಂ ಐರನ್ ಫಾಸ್ಫೇಟ್ (ಎಲ್ಎಲ್‌ಪಿ) ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯು ಧೀರ್ಘ ಬ್ಯಾಟರಿ ಪವರ್ ಅನ್ನು ನೀಡಲಿದ್ದು, ಸವಾರರು ರೀಚಾರ್ಜ್ ಬಗ್ಗೆ ಚಿಂತಿಸದೆ ದೀರ್ಘ ಪ್ರಯಾಣವನ್ನು ಆನಂದಿಸಬಹುದು ಎಂದು ಫ್ಯೂಜಿಯಾಮಾ ಹೇಳಿಕೊಂಡಿದೆ.

ಫ್ಯುಜಿಯಾಮಾ ಪವರ್ ಗ್ರೂಪ್‌ನ ಸಿಇಒ ಉದಿತ್ ಅಗರ್ ವಾಲ್ ಮಾತನಾಡಿ, ಹೊಸ ಕ್ಲಾಸಿಕ್‌ನ ಪರಿಚಯವು ಹಣದ ಮೌಲ್ಯಕ್ಕೆ ಆದ್ಯತೆ ನೀಡುವ ಭಾರತೀಯ ಗ್ರಾಹಕರ ಕಾಳಜಿಗಳನ್ನು ಪರಿಹರಿಸುವ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಗುಣಮಟ್ಟದ ಉತ್ಪನ್ನಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಸಿರು ಭಾರತಕ್ಕೆ ಕೊಡುಗೆ ನೀಡುವುದು ನಮ್ಮ ದೃಷ್ಟಿಕೋನವಾಗಿದೆ, ಈ ಭರವಸೆಯನ್ನು ಕ್ಲಾಸಿಕ್ ಮೂಲಕ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗಿದೆಯಾದ್ರೂ ಸದ್ಯ ಹೈಸ್ಪೀಡ್ ಇವಿಗಳ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ 20 ರಿಂದ 30 ಸಾವಿರ ರೂ. ಬೆಲೆ ಏರಿಗೆಯಾಗಿರುವುದರಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಫ್ಯೂಜಿಯಾಮಾ ಕಡಿಮೆ ಬೆಲೆಯಲ್ಲಿ ಕ್ಲಾಸಿಕ್ ಇವಿ ಸ್ಕೂಟರ್ ಬಿಡುಗಡೆಯು ಗ್ರಾಹಕರನ್ನು ಸೆಳೆಯಲಿದೆ ಎಂದು ಉದಿತ್ ಅಗರ್ ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 21, 2024, 8:30 [IST]
English summary
New fujiyama classic ev scooter price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+