ಯುವಕರಿಗೆ ಸಿಹಿಸುದ್ದಿ: ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹೀರೋ ಅಡ್ವೆಂಚರ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಹೀರೋ ಎಕ್ಸ್‌ಪಲ್ಸ್‌ನಂತಹ ದೈತ್ಯ ಕಂಪನಿಗಳ ಮಾರಾಟವೇ ಇದಕ್ಕೆ ಸಾಕ್ಷಿ. ಅಡ್ವೆಂಚರ್ ಬೈಕ್‌ಗಳನ್ನು ಹಿಟ್ ಮಾಡಿದ್ದು ಎನ್‌ಫೀಲ್ಡ್ ಆಗಿದ್ದರೂ, ಹೀರೋ ಈ ವಿಭಾಗವನ್ನು ಹೆಚ್ಚು ಜನಪ್ರಿಯಗೊಳಿಸಿತು ಎಂದು ಹೇಳಬೇಕು. ಕಡಿಮೆ ಬೆಲೆಯಲ್ಲಿ ಹೀರೋ ಕಂಪನಿಯು ಅಡ್ವೆಂಚರ್ ವಿಭಾಗದಲ್ಲಿ ಎಕ್ಸ್‌ಪಲ್ಸ್ ಎಂಬ ಬೈಕ್ ಅನ್ನು ಬಿಡುಗಡೆಗೊಳಿಸಿ ಹೊಸ ಸಂಚಲನವನ್ನು ಸೃಷ್ಟಿಸಿತು. ಇದೀಗ ಹೀರೋ ಕಂಪನಿಯು ತನ್ನ ಹೊಸ ಎಕ್ಸ್‌ಪಲ್ಸ್‌ನ 210 ಸಿಸಿ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೀರೊ ಮೋಟೊಕಾರ್ಪ್ ಕಂಪನಿಯು ಇಟಲಿಯ ಮಿಲನ್‌ನಲ್ಲಿ ಮುಂಬರುವ 2024 EICMA ಮೋಟೋಶೋದಲ್ಲಿ ಅನಾವರಣಗೊಳಿಸಲಿದೆ. ಇದು ಎಕ್ಸ್‌ಪಲ್ಸ್‌ನ 210 ಸಿಸಿ ಆವೃತ್ತಿಯಾಗಲಿದೆ. ಈ ಹೊಸ ಬೈಕ್ ಅಡ್ವೆಂಚರ್ ಟೂರರ್ ಆಗಲಿದೆ ಎಂದು ಕಂಪನಿಯೂ ಖಚಿತಪಡಿಸಿದೆ. ಇದನ್ನು ಮೊದಲು EICMA ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗುತ್ತದೆ. ಇದಾದ ಬಳಿಕ ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Hero XPulse

ಮುಂಬರುವ ಈ ಅಡ್ವೆಂಚರ್ ಬೈಕ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಲಿದ್ದು, ಈ ಟೀಸರ್ ಎಕ್ಸಾಸ್ಟ್ ನೋಟ್ ಅನ್ನು ಸ್ಪಷ್ಟವಾಗಿ ಕಾಣಬಹುದು. ಟೀಸರ್‌ನಲ್ಲಿ ಪ್ರಮುಖ ಹೈಲೈಟ್ ಮಾಡೆಲ್‌ನ ಹೆಡ್‌ಲೈಟ್ ಆಗಿದೆ. ಮುಂಭಾಗದಲ್ಲಿ ಟಾಪ್ ಶೈಲಿಯ ಮಡ್‌ಗಾರ್ಡ್ ಅನ್ನು ಕಾಣಬಹುದು ಜೊತೆಗೆ LED ಹೆಡ್‌ಲ್ಯಾಂಪ್ ಅನ್ನು ಗ್ರಿಲ್‌ನಿಂದ ರಕ್ಷಿಸಲಾಗಿದೆ, ಇದು ಆಫ್-ರೋಡಿಂಗ್ ಸಮಯದಲ್ಲಿ ಸೂಕ್ತವಾಗಿದೆ.

ಟೀಸರ್‌ನಲ್ಲಿ ಪ್ರಮುಖ ಹೈಲೈಟ್ ಮಾಡೆಲ್‌ನ ಹೆಡ್‌ಲೈಟ್ ಆಗಿದೆ. ಮುಂಭಾಗದಲ್ಲಿ ಉನ್ನತ-ಹೆಡ್ ಲ್ಯಾಂಪ್ ಮೇಲೆ ನಂಬರ್ ಪ್ಲೇಟ್ ಹಾಕಲಾಗಿದೆ. ಟರ್ನ್ ಇಂಡಿಕೇಟರ್‌ಗಳು ಹ್ಯಾಲೊಜೆನ್ ಯೂನಿಟ್‌ಗಳು ಎಂದು ಸಹ ಖಚಿತವಾಗಿದೆ. ಮುಂಬರುವ ಎಕ್ಸ್‌ಪಲ್ಸ್‌ನ 210 ಅಡ್ವೆಂಚರ್ ಬೈಕ್‌ನ ಎಕ್ಸಾಸ್ಟ್ ನೋಟ್ ಕೂಡ ಟೀಸರ್‌ನಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ.

ಹೊಸ ಹೀರೊ ಎಕ್ಸ್‌ಪಲ್ಸ್ 210 (Hero XPulse) ಬೈಕ್ ಇತ್ತೀಚೆಗೆ ಲಡಾಖ್‌ನ ಖರ್ದುಂಗ್ ಲಾ ಬಳಿ ಕಾಣಿಸಿಕೊಂಡಿದೆ. ಕರಿಷ್ಮಾ XMR 210 ಸ್ಪೋರ್ಟ್ಸ್ ಬೈಕ್‌ನಿಂದ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಎರವಲು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಡ್ಯುಯಲ್ ಉದ್ದೇಶದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ. ಈ ಬೈಕಿನಲ್ಲಿ ಕರಿಷ್ಮಾವು 210cc ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ.

ಈ ಎಂಜಿನ್ 25 bhp ಪವರ್ ಮತ್ತು 20.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸದ್ಯ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್‌ಪಲ್ಸ್ ಬೈಕಿನಲ್ಲಿ 199.6 cc 4V ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 6.1 bhp ಪವರ್ ಮತ್ತು 3.1 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಅಡ್ವೆಂಚರ್ ಬೈಕಿನಲಿ ಬ್ಲೂಟೂತ್ ಕನೆಕ್ಟಿವಿಟೀ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಸಂಪೂರ್ಟ್ ಮಾಡುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೊಂದಿಗೆ ಬರಲಿದೆ. ಸ್ವಿಚ್ ಮಾಡಬಹುದಾದ ಡ್ಯುಯಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಸಹ ಹೊಂದಿದೆ. ಇತರ ಯಾಂತ್ರಿಕ ಅಂಶಗಳಿಗೆ ಬರುವುದಾದರೆ, ಹೊಸ ಹೀರೋ ಎಕ್ಸ್‌ಪಲ್ಸ್‌ನ ಸಸ್ಪೆಕ್ಷನ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 23, 2024, 17:31 [IST]
English summary
New hero xpulse teased ahead of eicma debut details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+