ಹೊಸ 2024 ನವೀಕೃತ ಹೀರೋ ಎಕ್ಸ್‌ಟ್ರೀಮ್ 160ಆರ್ 2ವಿ ವಿಶೇಷತೆಗಳು

ಭಾರತದಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಜನಪ್ರಿಯತೆ ಪಡೆದಿರುವ ಹೀರೋ ಮೋಟೋಕಾರ್ಪ್, ತನ್ನ ಹೊಸ ನವೀಕೃತ ಎಕ್ಸ್‌ಟ್ರೀಮ್ 160ಆರ್ 2ವಿ (Xtreme 160R 2V) ಮೋಟಾರ್‌ಸೈಕಲ್ ಅನ್ನು ರೂ.1,11,111 (ಸಿಂಗಲ್ ಡಿಸ್ಕ್)ಕ್ಕೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಮೋಟಾರ್‌ಸೈಕಲ್ ಸಿಂಗಲ್ ಡಿಸ್ಕ್ ರೂಪಾಂತರದೊಂದಿಗೆ ಸ್ಟೆಲ್ತ್ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಹೊಸ ಪ್ರೀಮಿಯಂ ಟೈಲ್ ಲ್ಯಾಂಪ್ ವಿನ್ಯಾಸವು ಎಂದಿಗಿಂತಲೂ ಸ್ಲೀಕರ್ ಆಗಿ ಡಿಸೈನ್ ಮಾಡಲಾಗಿದ್ದು, ಸಿಗ್ನೇಚರ್ "H" ಗುರುತು ಹೊಸ ಹೀರೋ ಲೈನ್ ಅಪ್ ಅನ್ನು ಪ್ರತಿನಿಧಿಸುತ್ತದೆ. ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೀರೋ ಎಕ್ಸ್ ಟ್ರೀಮ್ 160ಆರ್ 2ವಿ ಬೈಕಿನ ಬೆಲೆಯು ರೂ.1.11 ಲಕ್ಷಗಳಾಗಿದ್ದು, ಹೀರೋ 4ವಿ ಬೈಕಿಗಿಂತ ರೂ.28,000 ಹೆಚ್ಚು ಬೆಲೆಯನ್ನು ಹೊಂದಿದೆ. ಕೆಲವು ತಿಂಗಳ ಹಿಂದೆ ಹೀರೋ ಎಕ್ಸ್ ಟ್ರೀಮ್ 160ಆರ್ 4ವಿ ಬೈಕನ್ನು ಅಪ್ ಡೇಟ್ ಮಾಡಿದ ನಂತರ, ಹೀರೋ ಕಂಪನಿಯು ಎಕ್ಸ್ ಟ್ರೀಮ್ 160ಆರ್ 2ವಿ ಬೈಕಿನಲ್ಲಿ ಕೆಲವನ್ನು ಫಿಲ್ಟರ್ ಮಾಡಿದೆ. ಹಾಗಾಗಿಯೇ ಈಗ ಹೊಸ ನವೀಕರಣಗಳೊಂದಿಗೆ ಇದರ ಬೆಲೆಯು ತುಸು ಹೆಚ್ಚಾಗಿದೆ.

new-hero-xtreme-160r-2v-2024-edition-price-features-details

ಎಕ್ಸ್ ಟ್ರೀಮ್ 160ಆರ್ 2ವಿ ಬೈಕ್‌ಗೆ ಬಜಾಜ್ ಪಲ್ಸರ್ ಎನ್150 (ರೂ.1.25 ಲಕ್ಷ) ಮತ್ತು ಯಮಹಾ ಎಫ್‌ಝಡ್ ಸರಣಿಯ ಬೈಕುಗಳು (ರೂ.1.17 ಲಕ್ಷದಿಂದ ರೂ.1.30 ಲಕ್ಷ) ಪೈಪೋಟಿಯನ್ನು ನೀಡುತ್ತವೆ. ಈ ಮೋಟಾರ್‌ಸೈಕಲ್‌ಗಳಿಗೆ ಪೈಪೋಟಿ ನೀಡಲು ಹೊಸ ಎಕ್ಸ್‌ಟ್ರೀಂನಲ್ಲಿ ವಿಶೆಷವಾಗಿ ಅಪ್‌ಡೇಟ್ ಮಾಡಲಾದ ವಿಷಯಗಳು ಕೆಳಗಿನಂತಿವೆ.

ಪಿಲಿಯನ್ ಸೀಟ್: ಸುಧಾರಿತ ಸ್ಥಾನ ಮತ್ತು ಹಿಂಭಾಗದ ಹಿಡಿತವು ಈಗ ವಿಭಾಗದಲ್ಲಿ ಅತಿ ದೊಡ್ಡದಾಗಿದೆ, ಇದು ಪಿಲಿಯನ್‌ಗೆ ಹೆಚ್ಚಿನ ಸೌಕರ್ಯ ಒದಗಿಸುತ್ತದೆ. ವಿವರವಾಗಿ ಹೇಳುವುದಾದ್ರೆ ಪಿಲಿಯನ್ ಸೀಟ್ ಎತ್ತರದ ಮಟ್ಟವನ್ನು ಮೊದಲಿಗಿಂತ ಗಮನಾರ್ಹವಾಗಿ ಕಡಿಮೆ ಮಾಡುವುದರೊಂದಿಗೆ ಒಟ್ಟಾರೆ ಸೌಕರ್ಯವನ್ನು ಸುಧಾರಿಸುವ ಫ್ಲಾಟರ್ ಸೀಟ್ ಪ್ರೊಫೈಲ್ ನೀಡಲಾಗಿದೆ ಎಂದು ಹೀರೋ ತಿಳಿಸಿದೆ.

new-hero-xtreme-160r-2v-2024-edition-price-features-details

ಡ್ರ್ಯಾಗ್ ರೇಸ್ ಟೈಮರ್: ಹೊಸ ಮೊದಲ ಇನ್ ಸೆಗ್ಮೆಂಟ್ ಡ್ರ್ಯಾಗ್ ರೇಸ್ ಟೈಮರ್ ಈಗ Xtreme 160R 2V ಜೊತೆಗೆ D1 ಮೋಡ್‌ನೊಂದಿಗೆ 0-60km/h (ಆಕ್ಸಿಲರೇಶನ್ ಟೈಮಿಂಗ್) ಮತ್ತು ಕ್ವಾರ್ಟರ್ ಮೈಲ್ (402m) ಟೈಮಿಂಗ್‌ಗಾಗಿ D2 ಮೋಡ್‌ನೊಂದಿಗೆ ಲಭ್ಯವಿರುವುದಾಗಿ ಕಂಪನಿ ತಿಳಿಸಿದೆ.

ಮೋಟಾರ್‌ಸೈಕಲ್‌ನ ಮುಂಭಾಗದಲ್ಲಿ 100/80-17 ಮತ್ತು ಹಿಂಭಾಗದಲ್ಲಿ 130/70-ಆರ್ 17 ಟೈರ್ ಅನ್ನು ಹೊಂದಿದೆ. ಸೀಟ್ ಎತ್ತರವನ್ನು 795 ಎಂಎಂ ಮತ್ತು ಎಕ್ಸ್ ಟ್ರೀಮ್ 145 ಕೆ.ಜಿ ತೂಕವನ್ನು ಹೊಂದಿದೆ. ಹಾಗೆಯೇ 12 ಲೀಟರ್ ಟ್ಯಾಂಕ್ ಅನ್ನು ನೀಡಲಾಗಿದೆ. ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ನೀಡಲಾಗಿದ್ದು, ಟೈರ್ ಗಾತ್ರದ ವಿಷಯಕ್ಕೆ ಬಂದರೆ ಹಳೆಯ ಎಕ್ಸ್ ಟ್ರೀಮ್ 160 ಆರ್ 4ವಿ ನಂತೆಯೇ ನೀಡಲಾಗಿದೆ.

new-hero-xtreme-160r-2v-2024-edition-price-features-details

ಎಕ್ಸ್ ಟ್ರೀಮ್ 160ಆರ್ 2ವಿ ಬೈಕ್ 163.2ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 15 ಬಿಹೆಚ್‌ಪಿ ಪವರ್ ಮತ್ತು 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಕ್ಸ್ ಟ್ರೀಮ್ 160ಆರ್ 2ವಿ ಬೈಕ್ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರುವುದರಿಂದ ಸಿಂಗಲ್-ಚಾನೆಲ್ ಎಬಿಎಸ್ ನೊಂದಿಗೆ ಕಪ್ಪು ಬಣ್ಣದಲ್ಲಿ ಬಿಡುಗಡೆಯಾದ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 11, 2024, 16:02 [IST]
English summary
New hero xtreme 160r 2v 2024 edition price features details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+