ಹೊಸ iVOOMi ಸ್ಕೂಟರ್‌ಗೆ 3-ವರ್ಷ ವಾರಂಟಿ: ಬೆಲೆ ಕೇವಲ 55,999 ರೂ., EMI 1,499
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅಬ್ಬರ ಜೋರಾಗಿದೆ, ಸ್ವದೇಶಿ ಇವಿ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತೈಯಾರಕ ಕಂಪನಿಯಾದ iVOOMi, ತನ್ನ ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ. 54,999 (ಎಕ್ಸ್ ಶೋರೂಂ) ರಿಂದ ಆರಂಭವಾಗಲಿದ್ದು, ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. ಅವುಗಳನ್ನು ನೋಡುವುದಾದ್ರೆ ಗ್ರ್ಯಾಫೀನ್ ಅಯಾನ್ ಮತ್ತು ಲಿಥಿಯಂ ಅಯಾನ್ ಎಂಬ ಎರಡು ಬ್ಯಾಟರಿಗಳಾಗಿದ್ದು, ಕ್ರಮವಾಗಿ 54,999 ರೂ. ಹಾಗೂ 64,999 ರೂ. ಬೆಲೆಯಿದೆ.
ಗ್ರ್ಯಾಫೀನ್ ಅಯಾನ್ ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 75+ ಕಿ.ಮೀ ರೇಂಜ್ ನೀಡುತ್ತದೆ, ಇದು 45 ಕಿ.ಮೀ ಗರಿಷ್ಟ ವೇಗವನ್ನು ಹೊಂದಿದೆ. ಹಾಗೆಯೇ ಲಿಥಿಯಂ ಅಯಾನ್ ಸಿಂಗಲ್ ಚಾರ್ಜ್‌ನಲ್ಲಿ 85+ ಕಿ.ಮೀ ರೇಂಜ್ ನೀಡುತ್ತದೆ, ಇದು 55 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸಬಲ್ಲದು.

ಗ್ರ್ಯಾಫೀನ್ ರೂಪಾಂತರವು 3 ಗಂಟೆಗಳಲ್ಲಿ ಶೇ50 ರಷ್ಟು ಚಾರ್ಜ್ ಆಗುತ್ತದೆ. ಲಿಥಿಯಂ ರೂಪಾಂತರವು ಕೇವಲ 1.5 ಗಂಟೆಗಳಲ್ಲಿ ಶೇ50 ರಷ್ಟು ಮತ್ತು ಕೇವಲ 3 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗಬಲ್ಲದು. ಕಂಪನಿಯು ಈ ಎರಡೂ ಸ್ಕೂಟರ್‌ಗಳ ಮೇಲೆ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತಿದೆ.
iVOOMi S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಭಾರತದ ಹಗುರವಾದ ಚಾರ್ಜರ್ ಮತ್ತು ಜಲ-ನಿರೋಧಕ (Water-resistant) IP67 ಬ್ಯಾಟರಿಯನ್ನು ಅಳವಡಿಸಲಾಗಿದೆ. ಹೆಚ್ಚಿನ ಪರ್ಫಾಮೆನ್ಸ್ ಮತ್ತು ವಿಶ್ವಾಸಾರ್ಹತೆಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದೆ. ಇದರ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಬಳಕೆದಾರರಿಗೆ ತೆಗೆಯುವಿಕೆ ಮತ್ತು ಮರುಹೊಂದಿಸಲು ಅನುಕೂಲವಾಗಲಿದೆ ಎಂದು iVOOMi ತಿಳಿಸಿದೆ.

ವೈಶಿಷ್ಟ್ಯಗಳು: S1 Lite ಸ್ಕೂಟರ್‌ನಲ್ಲಿ 18 ಲೀಟರ್‌ಗಳ ಅಂಡರ್ ಸೀಟ್ ಸ್ಟೋರೇಜ್, 12 ಮತ್ತು 10 ಇಂಚಿನ ವೀಲ್‌ಗಳು ಲಭ್ಯವಿದೆ. ಮೊಬೈಲ್ ಚಾರ್ಜಿಂಗ್‌ಗಾಗಿ USB ಪೋರ್ಟ್ (5V, 1A) ಮತ್ತು LED ಡಿಸ್‌ಪ್ಲೇ ಸ್ಪೀಡೋಮೀಟರ್‌ನಂತಹ ಅಗತ್ಯ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ERW 1 ದರ್ಜೆಯ ಚಾಸಿಸ್‌ನೊಂದಿಗೆ ನಿರ್ಮಿಸಲಾದ ಈ ಸ್ಕೂಟರ್, 170mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.
ಬಣ್ಣಗಳು: ಹೊಸ S1 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಪರ್ಲ್ ವೈಟ್, ಟ್ರೂ ರೆಡ್, ಮೂನ್ ಗ್ರೇ, ಸ್ಕಾರ್ಲೆಟ್ ರೆಡ್, ಮಿಡ್‌ನೈಟ್ ಬ್ಲೂ ಮತ್ತು ಪೀಕಾಕ್ ಬ್ಲೂ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರಲ್ಲಿ ಸುರಕ್ಷತೆ ಮತ್ತು ಭರವಸೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

iVOOMi ಕಂಪನಿಯು ತನ್ನ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ರೂ. 1,499 ರಿಂದ ಪ್ರಾರಂಭವಾಗುವ ಅನುಕೂಲಕರ EMI ಆಯ್ಕೆಗಳನ್ನು ಒದಗಿಸುತ್ತಿದೆ. ಈ ಹೊಸ ಇ-ಸ್ಕೂಟರ್ ಖರೀದಿಗೆ ಮುಂದಾಗುವ ಗ್ರಾಹಕರಿಗೆ ತೊಂದರೆಯಿಲ್ಲದಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. S1 ಲೈಟ್ ಸ್ಕೂಟರ್‌ಗಾಗಿ ಬುಕಿಂಗ್‌ಗಳು ಈಗಾಗಲೇ ಆರಂಭವಾಗಿವೆ ಎಂದು ಕಂಪನಿ ತಿಳಿಸಿದೆ.
iVOOMi ಕಂಪನಿಯು S1 ಸರಣಿಯಲ್ಲಿ, ಈಗಾಗಲೇ S1 ಮತ್ತು S1 2.0 ಎಂಬ ಎರಡು ರೂಪಾಂತರಗಳನ್ನು ಸಹ ನೀಡುತ್ತಿದೆ. ಇವುಗಳ ಬೆಲೆಯು ರೂ 74,999 ನಿಂದ ಆರಂಭವಾಗುತ್ತದೆ. ಇವು ಹೆಚ್ಚಿನ ಸಾಮರ್ಥ್ಯದ Li-ion ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿವೆ. ಈ ರೂಪಾಂತರಗಳು ಒಂದೇ ಚಾರ್ಜ್‌ನಲ್ಲಿ 120 ಕಿ.ಮೀಗಿಂತ ಹೆಚ್ಚು ಮೈಲೇಜ್ ಹಾಗೂ 58 ಕಿ.ಮೀ ಗಂ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು.


Click it and Unblock the Notifications








