ಯುವಕರ ಹೃದಯ ಕದಿಯಲು ಕಡಿಮೆ ಬೆಲೆಯಲ್ಲಿ ಬರುವ ಕವಾಸಕಿ ಬೈಕ್ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ಕವಾಸಕಿ KLX 230 ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಕವಾಸಕಿ KLX 230 ಎಂಬ ಡ್ಯುಯಲ್ ಸ್ಪೋರ್ಟ್ ಬೈಕ್ ಅನ್ನು ಸ್ಥಳೀಯವಾಗಿ ಅಸೆಂಬ್ಲಿ ಮಾಡುವ ಸಾಧ್ಯತೆಯಿದೆ. ಇದರಿಂದ ಈ ಹೊಸ ಕವಾಸಕಿ ಡ್ಯುಯಲ್ ಸ್ಪೋರ್ಟ್ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುತ್ತದೆ. ಕವಾಸಕಿ ತನ್ನ ಕವಾಸಕಿ KLX 230 (Kawasaki KLX 230) ಬೈಕ್ ಅನ್ನ್ನು ಇಂಡಿಯಾ ಬೈಕ್ ವೀಕ್ 2024 ನಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.
2024ರ ಡಿಸೆಂಬರ್ ತಿಂಗಳಿನ ಬಿಡುಗಡೆಗೆ ಮುಂಚಿತವಾಗಿ, ಈ ಕವಾಸಕಿಯು ಹೊಚ್ಚ ಹೊಸ KLX 230 ಡ್ಯುಯಲ್ ಸ್ಪೋರ್ಟ್ ಮಾದರಿಯ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ.5,000 ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದು.ಕವಾಸಕಿಯ W 175 ಪ್ರಸ್ತುತ ಭಾರತದಲ್ಲಿ ಬ್ರಾಂಡ್‌ನ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಇದರ ಆರಂಭಿಕ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ. 1.22 ಲಕ್ಷವಾಗಿದೆ.

ವಿನ್ಯಾಸ: ಕವಾಸಕಿ KLX 230 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿರುವ ಡ್ಯುಯಲ್ ಸ್ಪೋರ್ಟ್ ಬೈಕ್ ಆಗಿದೆ. ಕವಾಸಕಿ KLX 230 ಬೈಕ್ ಬಾಡಿ ಪ್ಯಾನೆಲ್‌ಗಳಿದ್ದು, ಆಫ್-ರೋಡ್ ಸವಾರಿ ಮಾಡುವಾಗ ಬೈಕ್ ಬಿದ್ದರೆ ಮತ್ತು ಅದು ಕಡಿಮೆ ಹಾನಿಯಾಗುತ್ತದೆ. ಇನ್ನು ಸಣ್ಣ ಹೆಡ್‌ಲೈಟ್ ಕೌಲ್ ಅನ್ನು ಹೊಂದಿದೆ. ಈ ಡ್ಯುಯಲ್ ಸ್ಪೋರ್ಟ್ ಎತ್ತರದ ಮಡ್‌ಗಾರ್ಡ್, ಸಣ್ಣ ಇಂಧನ ಟ್ಯಾಂಕ್ ಮತ್ತು ಮೊಂಡು ಟೀಲ್ ಅನ್ನು ಹೊಂದಿದೆ.
ಎಂಜಿನ್: ಕವಾಸಕಿ KLX 230 ಬೈಕ್ 233cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 18.1bhp ಮತ್ತು 6,400rpm ನಲ್ಲಿ 18.3Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ 6-ಸ್ಪೀಡ್ ಗೇರ್‌ಬಾಕ್ಸ್ ಹೆದ್ದಾರಿಯಲ್ಲಿ ಪ್ರಯಾಣಿಸಲು ಸುಲಭವಾಗುತ್ತದೆ.

ಸಸ್ಪೆಕ್ಷನ್ ಸೆಟಪ್: ಹೊಸ ಕವಾಸಕಿ KLX 230 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 37mm ಟೆಲಿಸ್ಕೋಪಿಕ್ ಫೋರ್ಕ್‌ನೊಂದಿಗೆ ಸ್ಟೀಲ್ ಫ್ರೆಮ್ ಅನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್‌ನೊಂದಿಗೆ ಲಿಂಕ್-ಟೈಪ್ ಮೊನೊ-ಶಾಕ್ ಅನ್ನು ಹೊಂದಿದೆ. ಇನ್ನು ಕವಾಸಕಿಯು ಮುಂಭಾಗದಲ್ಲಿ ಟ್ರ್ಯಾವೆಲ್ 240 ಎಂಎಂ ಆಗಿದ್ದರೆ ಹಿಂಭಾಗದಲ್ಲಿ ವ್ಹೀಲ್ ಟ್ರ್ಯಾವೆಲ್ 250 ಎಂಎಂ ಆಗಿದೆ.
ಬ್ರೇಕಿಂಗ್ ಸಿಸ್ಟಂ: ಕವಾಸಕಿಯ ಡ್ಯುಯಲ್ ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 265 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸ್ವಿಚ್ ಮಾಡಬಹುದಾದ ABS ಅನ್ನು ಕೂಡ ನೀಡಲಾಗುತ್ತದೆ. ಇನ್ನು ಆಫ್-ರೋಡ್ ಸವಾರಿ ಮಾಡುವಾಗ ಹಿಂಭಾಗವನ್ನು ಲಾಕ್ ಮಾಡಲು ಮತ್ತು ಬೈಕ್ ಸ್ಲೈಡ್ ಮಾಡಲು ಇದು ಅನುವು ಮಾಡಿಕೊಡುತ್ತದೆ.

ಈ ಹೊಸ ಕವಾಸಕಿ KLX 230 ಬೈಕ್ 21-ಇಂಚಿನ ಮುಂಭಾಗದ ವ್ಹೀಲ್ ಮತ್ತು 18-ಇಂಚಿನ ಹಿಂಭಾಗದ ವ್ಹೀಲ್ MRF ಟೈರ್‌ಗಳೊಂದಿಗೆ ಸವಾರಿ ಮಾಡುತ್ತದೆ. ಈ ಡ್ಯುಯಲ್ ಸ್ಪೋರ್ಟ್ ಬೈಕ್ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 139kg ಹಗುರವಾಗಿದೆ. ಆಫ್-ರೋಡ್ ಸವಾರಿ ಮಾಡುವಾಗ ಬೈಕು ನಿಭಾಯಿಸಲು ಇದು ಸುಲಭವಾಗುತ್ತದೆ. ಇನ್ನು ಈ ಡ್ಯುಯಲ್ ಸ್ಪೋರ್ಟ್ ಬೈಕ್ 880 ಎಂಎಂ ಎತ್ತರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








