ರಾಕೆಟ್ ವೇಗದಲ್ಲಿ ಮಿಂಚಲು ಬಂದ ಹೊಸ ಕವಾಸಕಿ ನಿಂಜಾ 1100SX ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ನಿಂಜಾ 1100SX ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 1100SX ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.49 ಲಕ್ಷವಾಗಿದೆ. ಈ ಹೊಸ ಕವಾಸಕಿ ನಿಂಜಾ 1100SX (Kawasaki Ninja 1100SX) ಬೈಕ್ ಮಾದರಿಯು ಅತ್ಯುತ್ತಮವಾದ ಪರ್ಫಾಮೆನ್ಸ್, ಸಾಟಿಯಿಲ್ಲದ ಸೌಕರ್ಯ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಹೊಸ ಕವಾಸಕಿ ಸ್ಪೋರ್ಟ್-ಟೂರರ್ ಬೈಕ್ ಅನ್ನು ಬಯಸುವ ಸವಾರರಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಹೊಸ ಬೈಕಿನ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ವ್ಯತ್ಯಾಸಗಳು: ಹೊಸ ಕವಾಸಕಿ ನಿಂಜಾ 1100SX ಬೈಕಿನ ಚಾಸಿಸ್ ನಿಂಜಾ 1000SX ಗೆ ಬಹುತೇಕ ಹೋಲುತ್ತವೆ. ಒಂದೇ ವ್ಯತ್ಯಾಸವೆಂದರೆ ಸ್ವಲ್ಪ ದೊಡ್ಡದಾದ ಹಿಂಬದಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಈ ಹೊಸ ಕವಾಸಕಿ ನಿಂಜಾ 1100SX ಬೈಕಿನಲ್ಲಿ ಪವರ್ ಮೋಡ್‌ಗಳು, ರೈಡಿಂಗ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್, ಬೈಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಮುಂದಕ್ಕೆ ಸಾಗಿಸಲಾಗಿದೆ.

Kawasaki Ninja 1100SX

ಈ ಹೊಸ ಬೈಕಿನ ಗೇರ್‌ಬಾಕ್ಸ್ ಗಮನಾರ್ಹ ಸುಧಾರಣೆಗಳನ್ನು ಕಂಡಿದ್ದು, ಇದು 5ನೇ ಮತ್ತು 6ನೇ ಗೇರ್‌ಗಳನ್ನು ಪಡೆದುಕೊಂಡಿವೆ. ಇದು ಕಡಿಮೆ ರಿವ್ ಮಿತಿಯೊಂದಿಗೆ ಎಂಜಿನ್ ಪವರ್ ಮತ್ತು ಉತ್ತಮ ಮೈಲೇಜ್ ಅನ್ನು ಒದಗಿಸುತ್ತದೆ. ಈ ಕವಾಸಕಿ ನಿಂಜಾ 1100SX ಬೈಕ್ ವಿನ್ಯಾಸವು ಫಾಸ್ಟ್ ಥ್ರಿಲ್‌ನಲ್ಲಿ ರಾಜಿ ಮಾಡಿಕೊಳ್ಳದೆ ಹೆಚ್ಚು ಆಹ್ಲಾದಕರ ಮತ್ತು ಉತ್ತಮ ಮೈಲೇಜ್ ಅನ್ನು ನೀಡುತ್ತದೆ.

ಎಂಜಿನ್: ಹೊಸ ಕವಾಸಕಿ ನಿಂಜಾ 1100SX ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್, 1,099cc, ಇನ್‌ಲೈನ್-ಫೋರ್ ಮಿಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000rpm ನಲ್ಲಿ 136hp ಮತ್ತು 7,600rpm ನಲ್ಲಿ 113Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ನಿಂಜಾ 1000SX ಮಾದರಿಗೆ ಹೋಲಿಸಿದರೆ 6 hp ಪವರ್ ಕಡಿಮೆಯಾಗಿದ್ದರೆ, 2 Nm ಟಾರ್ಕ್ ಹೆಚ್ಚಳವಾಗಿದೆ. ಇನ್ನು ಈ ಬೈಕ್ ಉತ್ತಮ ಮೈಲೇಜ್ ಅನ್ನು ಒದಗಿರುತ್ತದೆ.

Kawasaki Ninja 1100SX

ತಂತ್ರಜ್ಞಾನ: ಹೊಸ ಕವಾಸಕಿ ಬೈಕಿನ ಹ್ಯಾಂಡಲ್‌ಬಾರ್‌ನಲ್ಲಿ ಹೆಚ್ಚುವರಿ USB ಟೈಪ್-ಸಿ ಔಟ್‌ಲೆಟ್ ಮತ್ತು ಕವಾಸಕಿಯ ರೈಡಿಯಾಲಜಿ ದ ಆಪ್ ಮೂಲಕ ವಾಯ್ಸ್ ಕಮಾಂಡ್ ಸಾಮರ್ಥ್ಯಗಳು ಸವಾರರಿಗೆ ಅನುಕೂಲವನ್ನು ಹೆಚ್ಚಿಸುತ್ತದೆ, ಚಲಿಸುತ್ತಿರುವಾಗಲೂ ಅವರು ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ. ಇನ್ನು ರೈಡಿಂಗ್ ಅನುಭವವನ್ನು ಅತ್ಯುತ್ತಮವಾಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿ, ನಿಂಜಾ 1100SX ಕಡಿಮೆ ವೇಗದಲ್ಲಿ ಸುಗಮ ಗೇರ್ ಶಿಫ್ಟ್‌ಗಳಿಗಾಗಿ ಬೈ ಡ್ರೈರಕ್ಷನ್ ಕ್ವಿಕ್ ಶಿಫ್ಟರ್ (KQS) ಅನ್ನು ಸಂಯೋಜಿಸುತ್ತದೆ.

ಬ್ರೇಕಿಂಗ್ ಸಿಸ್ಟಂ: ಹೆಚ್ಚಿನ ಪವರ್ ಅನ್ನು ಹೊಂದಿಸಲು ಮತ್ತು ರೈಡರ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನಿಂಜಾ 1100SX ಅನ್ನು ನವೀಕರಿಸಿದ ಬ್ರೇಕ್‌ಗಳೊಂದಿಗೆ ಅಳವಡಿಸಲಾಗಿದೆ. ಈ ಬೈಕ್ ಮುಂಭಾಗವು 4-ಪಿಸ್ಟನ್ ರೇಡಿಯಲ್-ಮೌಂಟ್ ಮೊನೊಬ್ಲಾಕ್ ಕ್ಯಾಲಿಪರ್‌ಗಳೊಂದಿಗೆ ದೊಡ್ಡ 300 ಎಂಎಂ ಡಿಸ್ಕ್‌ಗಳನ್ನು ಹೊಂದಿದೆ, ಆದರೆ ಹಿಂಭಾಗದ ಬ್ರೇಕ್ ಡಿಸ್ಕ್ ಅನ್ನು 250 ಎಂಎಂ ನಿಂದ 260 ಎಂಎಂಗೆ ವಿಸ್ತರಿಸಲಾಗಿದೆ.

Kawasaki Ninja 1100SX

ಬಣ್ಣಗಳ ಆಯ್ಕೆ: ಹೊಸ ಕವಾಸಕಿ ನಿಂಜಾ 1100SX ಬೈಕ್ ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ / ಮೆಟಾಲಿಕ್ ಡಯಾಬ್ಲೊ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13,49,000 ಆಗಿದೆ. ಇದು ನಿಂಜಾ ಸ್ಪೋರ್ಟ್ ಟೂರಿಂಗ್ ಪ್ಲಾಟ್‌ಫಾರ್ಮ್‌ನ 5ನೇ ಜನರೇಷನ್ ಅನ್ನು ಪ್ರತಿನಿಧಿಸುತ್ತದೆ. ಲಾಂಗ್ ರೈಡ್ ಹೋಗಲು ಅತ್ಯುತ್ತಮ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 20, 2024, 11:42 [IST]
English summary
New kawasaki ninja 1100sx top things details
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+