ಇತಿಹಾಸದ ಪುಟ ಸೇರಿದ ಯುವಕರ ನೆಚ್ಚಿನ ಕವಾಸಕಿ ನಿಂಜಾ 400 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ (Kawasaki) ತನ್ನ ನಿಂಜಾ 400 ಬೈಕನ್ನು 2018ರ ಭಾರತದಲ್ಲಿ 2018 ರಲ್ಲಿ 4.69 ಲಕ್ಷ ರೂ (ಎಕ್ಸ್-ಶೋರೂಮ್) ಬೆಲೆಯಲ್ಲಿ ಬಿಡುಗಡೆ ಮಾಡಿದ್ದರು. ಈ ಮಾದರಿಯು ಅನೇಕ ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಗಿತಗೊಂಡಿದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು.
ಭಾರತದಲ್ಲಿ 2020 ರಲ್ಲಿ BS6 ಹೊರಸೂಸುವಿಕೆಯ ಮಾನದಂಡಗಳು ಜಾರಿಯಾದಗ ಮತ್ತು 2022 ರಲ್ಲಿ ಹಿಂತಿರುಗಿದಾಗ ನಿಂಜಾ 400 ಸುಮಾರು ಎರಡು ವರ್ಷಗಳವರೆಗೆ ಮಾರಾಟವಾಗಲಿಲ್ಲ. ಇದೀಗ ಕವಾಸಕಿ ಕಂಪನಿಯು ಭಾರತದಲ್ಲಿ ಈ ಕವಾಸಕಿ ನಿಂಜಾ 400 (Kawasaki Ninja 400) ಬೈಕನ್ನು ಸ್ಥಗಿತಗೊಳಿಸಲಾಗಿದೆ. ಹೊಸದಾಗಿ ಬಿಡುಗಡೆಯಾದ ಕವಾಸಕಿ ನಿಂಜಾ 500 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ನಿಂಜಾ 400 ಸ್ಥಾನವನ್ನು ಪಡೆದುಕೊಳ್ಳುತ್ತದೆ.

ಕವಾಸಕಿ ನಿಂಜಾ ಎಚ್2 ನಿಂದ ಕೆಲವು ಸ್ಟೈಲಿಂಗ್ ಬಿಟ್‌ಗಳನ್ನು ಎರವಲು ಪಡೆಯಲಾಗಿದೆ.ಈ ಬೈಕಿನಲ್ಲಿ ಸ್ಲಿಮ್ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸ್ಲೀಕ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ. ಇದರೊಂದಿಗೆ ಫ್ರಂಟ್ ಕೌಲ್-ಮೌಂಟೆಡ್ ಫಂಕಿ ರಿಯರ್ ವ್ಯೂ ಮಿರರ್‌ಗಳು, ಕಡಿಮೆ-ಸೆಟ್, ಅಗಲವಾದ ಹ್ಯಾಂಡಲ್‌ಬಾರ್, ಸ್ಕಪಲಟಡ್ ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್-ಸೀಟ್ ವಿನ್ಯಾಸ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.
ಕವಾಸಕಿ ನಿಂಜಾ 400 ಗಾಗಿ ಬಣ್ಣದ ಆಯ್ಕೆಗಳಲ್ಲಿ ಲೈಮ್ ಗ್ರೀನ್ ಮತ್ತು ಮೆಟಾಲಿಕ್ ಕಾರ್ಬನ್ ಗ್ರೇ ಸೇರಿವೆ. ಈ ಎರಡೂ ಬಣ್ಣದ ಥೀಮ್‌ಗಳು ಸಮಾನವಾಗಿ ಆಕರ್ಷಕವಾಗಿವೆ.ಈ ಬೈಕ್ ಹೆಚ್ಚು ಅಗ್ರೇಸಿವ್, ಪ್ರಾಬಲ್ಯ ಮತ್ತು ರೋಡ್ ಗ್ರಿಪ್ ಅನ್ನು ಹೊಂದಿದೆ. ಎರಡೂ ಬಣ್ಣಗಳ ರೂಪಾಂತರಗಳು ಉತ್ಸಾಹಭರಿತ ಗ್ರಾಫಿಕ್ಸ್ ಅನ್ನು ಹೊಂದಿದ್ದು ಅದು ಹೆಚ್ಚುವರಿ ಸ್ಪೋರ್ಟಿನೆಸ್ ಅನ್ನು ಹೊಂದಿದೆ.

ಈ ಕವಾಸಕಿ ನಿಂಜಾ 400 ಹೈಬ್ರಿಡ್ ಕಾಕ್‌ಪಿಟ್ ಅನ್ನು ಹೊಂದಿದ್ದು, ಮಧ್ಯದಲ್ಲಿ ದೊಡ್ಡ ಅನಲಾಗ್ ಟ್ಯಾಕೋಮೀಟರ್ ಅನ್ನು ಹೊಂದಿದೆ. ಎಡಭಾಗದಲ್ಲಿ ವಾರ್ನಿಂಗ್ ಲ್ಯಾಂಪ್ ಗಳಿವೆ, ಆದರೆ ಬಲಭಾಗದಲ್ಲಿ ಮಲ್ಟಿ-ಫಂಕ್ಷನ್ ಎಲ್ಸಿಡಿ ಸ್ಕ್ರೀನ್ ಹೊಂದಿದೆ. ಸುಲಭವಾದ ವೀಕ್ಷಣೆಗಾಗಿ ಗೇರ್ ಸ್ಥಾನ ಫೋಷಿಸನ್ ಸೆಂಟ್ರಲ್ ಅಲ್ಲಿ ಇರಿಸಿದೆ. ಕವಾಸಕಿ ನಿಂಜಾ 400 ಬೈಕಿನಲ್ಲಿ 399ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್, DOCH, 8 ವಾಲ್ವ್ ಮೋಟಾರ್ ಅನ್ನು ಹೊಂದಿದೆ.
ಈ ಎಂಜಿನ್ 10,000 ಆರ್‌ಪಿಎಂನಲ್ಲಿ 45 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಹಿಂಭಾಗದಲ್ಲಿ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ಗ್ಯಾಸ್ ಚಾರ್ಜ್ಡ್ ಮೊನೊಶಾಕ್ ಸಸ್ಪೆಂಕ್ಷನ್ ಅನ್ನು ಹೊಂದಿದೆ.

ಇನ್ನು ಹೊಸದಾಗಿ ಬಂದ ಕವಾಸಕಿ ನಿಂಜಾ 500 ಬೈಕಿನಲ್ಲಿ ಹೊಸ ಲಿಕ್ವಿಡ್ ಕೂಲ್ಡ್, 451cc, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000rpm ನಲ್ಲಿ 45 bhp ಮತ್ತು 6,000rpm ನಲ್ಲಿ 42.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. . ಈ ಎಂಜಿನ್ ಪರಿಚಿತ ಪವರ್‌ಟ್ರೇನ್ ಆಗಿದೆ ಮತ್ತು ಇದನ್ನು ಎಲಿಮಿನೇಟರ್ 500 ಕ್ರೂಸರ್ ಮತ್ತು ನವೀನ ನಿಂಜಾ 7 ಹೈಬ್ರಿಡ್ ಬೈಕಿನಲ್ಲೂ ಬಳಸಲಾಗಿದೆ.
ಈ ಹೊಸ ಕವಾಸಕಿ ನಿಂಜಾ 500 ಮಾದರಿಯು 171 ಕೆಜಿ ತೂಕವನ್ನು ಹೊಂದಿದ್ದು, ಇದು ನಿಂಜಾ 400 ಬೈಕ್ ಗಿಂತ ತೂಕ ಹೆಚ್ಚಾಗಿದೆ. ಈ ಹೊಸ ನಿಂಜಾ 500 ಬೈಕಿನ ತೂಕವು ಇದರ ಪ್ರತಿಸ್ಪರ್ಧಿಗಳಾದ ಎಪ್ರಿಲಿಯಾ RS 457 ಮತ್ತು KTM RC 390 ಗಿಂತ ಕಡಿಮೆಯಾಗಿದೆ. ಈ ಬೈಕ್ ಡ್ಯುಯಲ್-ಚಾನೆಲ್ ABS ಅನ್ನು ಸಹ ಹೊಂದಿದೆ ಮತ್ತು ಸೀಟ್ ಎತ್ತರವು ಆರಾಮದಾಯಕ 785 mm ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








