ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಶಕ್ತಿಶಾಲಿ ಕವಾಸಕಿ ನಿಂಜಾ ZX-6R ಬೈಕ್: ಬೆಲೆ ರೂ.11.09 ಲಕ್ಷ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ 2024ರ ಕವಾಸಕಿ ನಿಂಜಾ ZX-6R (Kawasaki Ninja ZX-6R) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2024ರ ಕವಾಸಕಿ ನಿಂಜಾ ZX-6R ಬೈಕನ್ನು 2023ರ EICMA ರಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದ ಕೇವಲ ಒಂದು ತಿಂಗಳ ನಂತರ ಡಿಸೆಂಬರ್‌ನಲ್ಲಿ 2023ರ ಇಂಡಿಯಾ ಬೈಕ್ ವೀಕ್ ನಲ್ಲಿ ಪ್ರದರ್ಶಿಸಿದ್ದರು.
2024ರ ಕವಾಸಕಿ ನಿಂಜಾ ZX-6R ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.09 ಲಕ್ಷವಾಗಿದೆ. ಈ ಕವಾಸಕಿ ನಿಂಜಾ ZX-6R ಬೈಕ್ ನವೀಕರಿಸಿದ ವಿನ್ಯಾಸ, ಹೊಸ ತಂತ್ರಜ್ಞಾನ ಮತ್ತು ಹೊರಸೂಸುವಿಕೆ-ಕಂಪ್ಲೈಂಟ್ ಎಂಜಿನ್ ರೂಪದಲ್ಲಿ ಕೆಲವು ನವೀಕರಣಗಳನ್ನು ತರುತ್ತದೆ. ವಿನ್ಯಾಸ ಬದಲಾವಣೆಗಳು ಹೊಸ ಫ್ರಂಟ್ ಕೌಲ್, LED ಹೆಡ್‌ಲೈಟ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ಮತ್ತು ನವೀಕರಿಸಿದ ಫೇರಿಂಗ್‌ನೊಂದಿಗೆ ನವೀಕರಿಸಿದ ಮುಂಭಾಗದ ಫಾಸಿಕ ರೂಪದಲ್ಲಿ ಬರುತ್ತವೆ.

ಹೊಸ ಕವಾಸಕಿ ನಿಂಜಾ ZX-6R ಬೈಕಿನ ಟೆಕ್ ಅಪ್‌ಗ್ರೇಡ್‌ಗಳು ಹೊಸ 4.3-ಇಂಚಿನ TFT ಫುಲ್ ಕಲರ್ ಡಿಸ್‌ಪ್ಲೇ ರೂಪದಲ್ಲಿ ಬರುತ್ತವೆ, ಇದು ರೈಡಿಯಾಲಜಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕವನ್ನು ನೀಡುತ್ತದೆ. ಡಿಸ್‌ಪ್ಲೇ ನೀವು ರೈಡಿಂಗ್ ಮೋಡ್‌ಗಳು ಮತ್ತು ಸಂಪೂರ್ಣ ಸಲಕರಣೆಗಳ ಬದಲಾವಣೆಯನ್ನು ನೋಡಬಹುದಾಗಿದೆ.
2024ರ ಕವಾಸಕಿ ನಿಂಜಾ ZX-6R ಬೈಕಿನಲ್ಲಿ 636cc, ಇನ್‌ಲೈನ್ ನಾಲ್ಕು ಸಿಲಿಂಡರ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000rpm ನಲ್ಲಿ 127.6bhp ಮತ್ತು 11,000rpm ನಲ್ಲಿ 69Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. BS-VI ಎಮಿಷನ್ ನಾರ್ಮ್ಸ್-ಕಂಪ್ಲೈಂಟ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ನಿಂಜಾ ZX-6R ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಜೊತೆಗೆ ಕ್ವಿಕ್-ಶಿಫ್ಟರ್ ಅನ್ನು ಹೊಂದಿದೆ, ಇದು ಅಲ್ಟ್ರಾ-ಕ್ವಿಕ್, ಫುಲ್ ಪವರ್ ಅಪ್‌ಶಿಫ್ಟ್‌ಗಳು ಮತ್ತು ತಡೆರಹಿತ ಆಕ್ಸೆಲೇರೆಷನ್ ಅನುಮತಿಸುತ್ತದೆ ಎಂದು ಕವಾಸಕಿ ಹೇಳುತ್ತದೆ. ಹೊಸ ನಿಂಜಾ ZX-6R ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (KTRC) ಸಿಸ್ಟಂ ಸಹ ಹೊಂದಿದೆ.
ಕವಾಸಕಿ ನಿಂಜಾ ZX-6R ಬೈಕಿನಲ್ಲಿಸ್ಪೋರ್ಟ್, ರೋಡ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಶೋವಾ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದ್ದು, ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ.

ಹೊಸ 2024ರ ಕವಾಸಕಿ ನಿಂಜಾ ZX-6R 17-ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ ಪೈರೆಲ್ಲಿಯ ಡಯಾಬ್ಲೊ ರೊಸ್ಸೊ IV ಟೈರ್‌ಗಳೊಂದಿಗೆ ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಈ ಸ್ಪೋರ್ಟಿ ಟೈರ್‌ಗಳು - 120/70 (ಮುಂಭಾಗ) ಮತ್ತು 180/55 (ಹಿಂಭಾಗ) ನಲ್ಲಿ ಬರುತ್ತವೆ. 2024ರ ಕವಾಸಕಿ ನಿಂಜಾ ZX-6R ಬೈಕ್ ಲೈಮ್ ಗ್ರೀನ್ ಮತ್ತು ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.
2024ರ ಕವಾಸಕಿ ನಿಂಜಾ ZX-6R 17 ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಡ್ಯುಯಲ್ ರೇಡಿಯಲ್-ಮೌಂಟೆಡ್ 4-ಪಿಸ್ಟನ್ ಮೊನೊಬ್ಲಾಕ್ ಕ್ಯಾಲಿಪರ್‌ಗಳಿಂದ ಕೆಳಗೆ ಜೋಡಿಸಲಾದ ಮುಂಭಾಗದಲ್ಲಿ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನಿಂದ ಕ್ಲ್ಯಾಂಪ್ ಮಾಡಲಾದ 220 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರ ಜೊತೆ ಹೆಚ್ಚಿನ ಸುರಕ್ಷತೆಗಾಗಿ ನವೀಕರಿಸಿದ ಡ್ಯುಯಲ್-ಚಾನೆಲ್ ABS ಸಿಸ್ಟಮ್ ಅನ್ನು ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








