ಹೊಸ ಲೆಕ್ಟ್ರಿಕ್ಸ್ ಇವಿ 3.0 ಸ್ಕೂಟರ್ ಅನಾವರಣ: ಸಿಂಗಲ್ ಚಾರ್ಜ್‌ನಲ್ಲಿ 130 ಕಿ.ಮೀ ರೇಂಜ್
ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಗಮನ ಹೆಚ್ಚುತ್ತಲೇ ಇದೆ. ಇದೀಗ ಲೆಕ್ಟ್ರಿಕ್ಸ್ ಇವಿ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇಂಧನ ಚಾಲಿತ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಇದರ ನಿರ್ವಹಣಾ ವೆಚ್ಚ ತೀರಾ ಕಡಿಮೆ. ಈಗಾಗಲೇ ಬಿಡುಗಡೆ ಮಾಡಿದ್ದ ಹಳೆಯ ಆವೃತ್ತಿಗೆ ಹೊಸ ಅಪ್‌ಡೇಟ್‌ಗಳು ಹಾಗೂ ಬ್ಯಾಟರಿ ಕೆಪ್ಯಾಸಿಟಿಯನ್ನು ಹೆಚ್ಚಿಸಿ ಈ ಸ್ಕೂಟರ್ ಅನ್ನು ಅನಾವರಣಗೊಳಿಸಲಾಗಿದೆ. ಗ್ರಾಹಕರ ಬೇಡಿಕೆಯಂತೆ ಈ ಅಪ್‌ಡೇಟ್‌ಗಳೊಂದಿಗೆ ಹೊಸ ಲೆಕ್ಟ್ರಿಕ್ಸ್ ಇವಿ ಸ್ಕೂಟರ್ ಅನ್ನು ಹೊರತಂದಿದ್ದು, ಇದರ ವಿಶೇಷತೆಗಳು ಹಾಗೂ ಬ್ಯಾಟರಿ ರೇಂಜ್ ಅನ್ನು ಇಲ್ಲಿ ತಿಳಿಯೋಣ.
SAR ಗ್ರೂಪ್‌ನ ಎಲೆಕ್ಟ್ರಿಕ್ ಮೊಬಿಲಿಟಿ ವಿಭಾಗವಾದ ಲೆಕ್ಟ್ರಿಕ್ಸ್ ಇವಿ ಈ ಹಿಂದೆ ಬಿಡುಗಡೆ ಮಾಡಿದ್ದ LXS 2.0 ಯಶಸ್ಸಿನ ನಂತರ LXS 3.0 ಸ್ಕೂಟರ್ ಅನ್ನು ಪರಿಚಯಿಸಿದೆ. 3 ಕಿಲೋವ್ಯಾಟ್ ಲಿ-ಐಯಾನ್ LFP ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ LXS 3.0 ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಹೊಸ LXS 3.0 ಸ್ಕೂಟರ್ ಆಗಸ್ಟ್ 1, 2024 ರಿಂದ ವಿತರಣೆಗೆ ಲಭ್ಯವಿರುತ್ತದೆ. LXS 3.0 ಎಲೆಕ್ಟ್ರಿಕ್ ಸ್ಕೂಟರ್ 1200 ವ್ಯಾಟ್ ಮೋಟರ್ ಮತ್ತು ಡಿಜಿಟಲ್ ಸ್ಪೀಡೋಮೀಟರ್ ಅನ್ನು ಹೊಂದಿದ್ದು, ಗಂಟೆಗೆ 54 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಸಹ ಒಳಗೊಂಡಿದೆ.
ಹೆಚ್ಚಿನ ಪಿಕಪ್ ಪವರ್ ಕೂಡ ಇದ್ದು, 10.5 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ದೃಢವಾದ ಕಾರ್ಯಕ್ಷಮತೆಯ ಸಾಮರ್ಥ್ಯಗಳ ಹೊರತಾಗಿಯೂ, ವಾಹನವು ತುಂಬಾ ಹಗುರವಾಗಿರುತ್ತದೆ. ಸುಧಾರಿತ ವೈಶಿಷ್ಟ್ಯಗಳು ಆಧುನಿಕ ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಸವಾರಿಯನ್ನು ಖಚಿತಪಡಿಸುತ್ತದೆ ಎಂದು ಕಂಪನಿ ಹೇಳಿದೆ.
ಭಾರತೀಯ ರಸ್ತೆ ಪರಿಸ್ಥಿತಿಗಳಲ್ಲಿ ಹೊಂದಿಕೊಳ್ಳಲಿದೆಯೇ ಎಂಬುದನ್ನು ತಿಳಿಯಲು ಹಾಗೂ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಕೂಟರ್ ಅನ್ನು ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಲೆಕ್ಟ್ರಿಕ್ಸ್ ಇವಿ ಪ್ರಕಾರ, ಸ್ಕೂಟರ್ ವಿನ್ಯಾಸವು ಇಂದಿನ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಡಿಸೈನ್, ಆರಾಮ ಮತ್ತು ಬಾಳಿಕೆಯನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.
ಲೆಕ್ಟ್ರಿಕ್ಸ್ ಇವಿಯ ಇವಿ ಅಧ್ಯಕ್ಷ ಪ್ರೀತೇಶ್ ತಲ್ವಾರ್ ಮಾತನಾಡಿ, "LXS 3.0 ಬಿಡುಗಡೆಯು ನಮ್ಮ ಉತ್ಪನ್ನ ಸಾಲಿನಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಈ ನವೀಕರಿಸಿದ ಮಾದರಿಯು ನಮ್ಮ ಪೋರ್ಟ್‌ಫೋಲಿಯೊವನ್ನು ಕಡಿಮೆ ಶ್ರೇಣಿಯಿಂದ ಹೆಚ್ಚಿನ ಶ್ರೇಣಿಗೆ ವಿಸ್ತರಿಸುವ ವಿಶ್ವಾಸವಿದೆ. ಇದು ಎಲೆಕ್ಟ್ರಿಕ್ ಚಲನಶೀಲತೆಯಲ್ಲಿ ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ನಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು.
LXS 3.0 ಬೈಕಿನ ಬುಕಿಂಗ್ ಈಗ ತೆರೆದಿದ್ದು, ಸ್ಕೂಟರ್ ಶೀಘ್ರದಲ್ಲೇ ದೇಶಾದ್ಯಂತದ ಎಲ್ಲಾ ಲೆಕ್ಟ್ರಿಕ್ಸ್ ಡೀಲರ್ ಶಿಪ್‌ಗಳಲ್ಲಿ ಲಭ್ಯವಾಗಲಿದೆ. ಸದ್ಯ ಹೆಚ್ಚುತ್ತಿರುವ ಇಂಧನ ಬೆಲೆಗಳು ಗ್ರಾಹಕರನ್ನು ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆಗೆ ಮರಳುವಂತೆ ಮಾಡಿವೆ. ಸದ್ಯ ಪರಿಚಯಿಸಲಾದ LXS 3.0 ಇವಿ ಸ್ಕೂಟರ್ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications