ಯುವಕರಿಗೆ ಗುಡ್ ನ್ಯೂಸ್: 1 ಕಿ.ಮೀ ಓಡಲು 25 ಪೈಸೆ ಸಾಕು.. ಹೊಸ ಎಲೆಕ್ಟ್ರಿಕ್ ಬೈಕ್ ವಿತರಣೆ ಪ್ರಾರಂಭ

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡೀಕೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ದಿ ಪಡಿಸುತ್ತಿದ್ದಾರೆ. ಇದರ ನಡುವೆ ಹಲವು ಸ್ಟಾರ್ಟ್ಅಪ್ ವಾಹನ ತಯಾರಕ ಕಂಪನಿಗಳು ಪೈಪೋಟಿಗೆ ಬಿದ್ದಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತಿವೆ. ಆದರೆ ಜನರು ಎಲೆಕ್ಟ್ರಿಕ್ ಬೈಕುಗಳಲ್ಲಿ ಗೇರ್ ಇಲ್ಲ, ಸೌಂಡ್ ಇಲ್ಲ ಎಂದು ಕೊರಗುತ್ತಿದ್ದವರೂ ಕೂಡ ಭಿನ್ನವಾಗಿ ಯೋಚಿಸತೊಡಗಿದ್ದಾರೆ. ಇದಕ್ಕೆ ಪರಿಹಾರವಾಗಿ ಅಹಮದಾಬಾದ್ ಮೂಲದ ಮ್ಯಾಟರ್ ಗ್ರೂಪ್ ಗೇರ್ ಬಾಕ್ಸ್ ಹೊಂದಿರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿ ಸಂಚಲನವನ್ನು ಮೂಡಿಸಿತು.

ಮಾರುಕಟ್ಟೆಗೆ ಬಂದು ಬಹಳ ದಿನಗಳಾಗಿದ್ದರೂ ಹಲವು ಜನರಿಗೆ ಈ ವಿಷಯ ತಿಳಿದಿಲ್ಲ. ಆದರೆ ಇದೀಗ ಮ್ಯಾಟರ್ ಗ್ರೂಪ್ Aera ಎಲೆಕ್ಟ್ರಿಕ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ, ಇದನ್ನು ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಾದ 5000 ಮತ್ತು 5000 ಪ್ಲಸ್‌ನಲ್ಲಿ ಪ್ರಸ್ತುತಪಡಿಸಲಾಗಿದೆ. ಬ್ರ್ಯಾಂಡ್‌ನ ಇತ್ತೀಚೆಗೆ ಉದ್ಘಾಟನೆಗೊಂಡ ಅಹಮದಾಬಾದ್ ಅನುಭವ ಕೇಂದ್ರದಿಂದ ಮೊದಲ ಹಂತದ ವಿತರಣೆನ್ನು ಮಾಡಿತು.

Matter Aera 5000 Electric Bike

ಇದಕ್ಕೂ ಮೊದಲು, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳ ವಿತರಣೆಯನ್ನು ಪ್ರಾರಂಭಿಸಲು ಕಂಪನಿಯು ಆರಂಭದಲ್ಲಿ ನಿರ್ಧರಿಸಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬವಾಯ್ತು. ಈ Aera ಮ್ಯಾನ್ಯುವಲ್ ಗೇರ್ ಶಿಫ್ಟಿಂಗ್ ಸಿಸ್ಟಮ್ ಹೊಂದಿರುವ ಏಕೈಕ ಎಲೆಕ್ಟ್ರಿಕ್ ಬೈಕ್ ಆಗಿದೆ. ಎರಡು ವಿಭಿನ್ನ ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಂದಿರುವ ಈ ಮಾದರಿಯು ಕ್ರಮವಾಗಿ 1.74 ಲಕ್ಷ ಮತ್ತು 1.84 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಬರುತ್ತದೆ.

ಮ್ಯಾಟರ್ Aera (Matter Aera) ಬೈಕ್ LED ಡೇಟೈಮ್ ರನ್ನಿಂಗ್ ಲೈಟ್‌ನೊಂದಿಗೆ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಸೈಡ್ ಕೌಲ್‌ಗಳನ್ನು ಬೈಕ್‌ಗೆ ಏರೋಡೈನಾಮಿಕ್ ದಕ್ಷತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಮೋಟಾರ್ ಮತ್ತು ಬ್ಯಾಟರಿಗಾಗಿ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಲಿಕ್ವಿಡ್ ಕೂಲಿಂಗ್ ಸಿಸ್ಟಂ ಸಹ ಪಡೆಯುತ್ತದೆ.

Matter Aera 5000 Electric Bike

ಇನ್ನು ಮ್ಯಾಟರ್ ಕಂಪನಿಯು ಪ್ರಸ್ತುತ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದ್ದಾರೆ. Aera ಅನ್ನು ಮುಂಗಡ ಬುಕ್ ಮಾಡಿದ ಗ್ರಾಹಕರು ಮೊದಲು ಡೆಲಿವರಿಯನ್ನು ಮಾಡುತ್ತಾರೆ. ಮ್ಯಾಟರ್ Aera 5,000 ಮತ್ತು 5,000+ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಎರಡರಲ್ಲೂ ಒಂದೇ ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಇದೆ.

ಪವರ್ ಉತ್ಪಾದನೆಯನ್ನು 10 kW ಎಂದು ರೇಟ್ ಮಾಡಿದೆ. ಈ ಮ್ಯಾಟರ್ ಎಲೆಕ್ಟ್ರಿಕ್ ಬೈಕ್ 6 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಬೈಕ್ 5 kWh ಬ್ಯಾಟರಿ ಪ್ಯಾಕ್‌ನಿಂದ 125 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಮ್ಯಾಟರ್ ಎಲೆಕ್ಟ್ರಿಕ್ ಬೈಕ್ ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಫಾಸ್ಟ್ ಚಾರ್ಜರ್ ಅನ್ನು ಬಳಸುತ್ತಿದ್ದರೆ ಅದನ್ನು ಐದು ಗಂಟೆಗಳಲ್ಲಿ ಮತ್ತು 2 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಇದಲ್ಲದೆ, ಇದು IP67 ರೇಟ್ ಮತ್ತು ಲಿಕ್ವಿಡ್-ಕೂಲ್ಡ್ ಆಗಿದೆ.

Matter Aera 5000 Electric Bike

ಈ ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕ್ ಎರಡೂ ಆವೃತ್ತಿಗಳು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ನಾಲ್ಕು ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತವೆ. ಇನ್ನು ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಮೂಲಕ ನಿರ್ವಹಿಸಲಾಗುತ್ತದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Monday, October 14, 2024, 11:49 [IST]
English summary
New matter aera 5000 electric bike deliveries begin details
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+