150 ಕಿ.ಮೀ ರೇಂಜ್, ಕೈಗೆಟುಕುವ ಬೆಲೆಯ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಇ-ಬೈಕ್ ವಿಶೇಷತೆಗಳು

ಭಾರತದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric Two Wheelers) ಭಾರೀ ಜನಪ್ರಿಯತೆ ಗಳಿಸುತ್ತಿವೆ. ಬಹುತೇಕ ಗ್ರಾಹಕರು ಇ-ಸ್ಕೂಟರ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಿದ್ದು, ಮೋಟಾರ್‌ಸೈಕಲ್‌ಗಳ ಕೊರತೆ ಎದ್ದು ಕಾಣುತ್ತಿದೆ. ಅದನ್ನು ನೀಗಿಸಲು ಹರಿಯಾಣ ಮೂಲದ ರಿವೋಲ್ಟ್ ಮೋಟಾರ್ (Revolt Motors) ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು.

ರಿವೋಲ್ಟ್ ಕಂಪನಿ, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುವ ಆರ್‌ವಿ400 (RV400) ಬೈಕ್‌ನ ಹೊಸ ರೂಪಾಂತರ (New Variant), ಆರ್‌ವಿ400 ಬಿಆರ್‌ಝಡ್ (RV400 BRZ) ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್, ರೂ.1.34 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಬೈಕ್ ಲೂನಾರ್ ಗ್ರೀನ್, ಪೆಸಿಫಿಕ್ ಬ್ಲೂ, ಡಾರ್ಕ್ ಸಿಲ್ವರ್, ರೆಬೆಲ್ ರೆಡ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

Revolt RV400 BRZ

ಬ್ಯಾಟರಿ ಪ್ಯಾಕ್: ಈ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, 72ವಿ 3.24 ಕೆಡಬ್ಲ್ಯೂಹೆಚ್ ಲಿಥಿಯಂ - ಐಯಾನ್ (Lithium - Ion) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇಕೋ (Eco), ನಾರ್ಮಲ್ (Normal), ಸ್ಪೋರ್ಟ್ (Sport) ಎಂಬ ರೈಡಿಂಗ್ ಮೋಡ್ ಒಳಗೊಂಡಿದ್ದು, ಅದಕ್ಕೆ ತಕ್ಕಂತೆ ಕ್ರಮವಾಗಿ ಸಂಪೂರ್ಣ ಚಾರ್ಜ್ ನಲ್ಲಿ 150 ಕಿ.ಮೀ, 100 ಕಿ.ಮೀ & 80 ಕಿ.ಮೀ ರೇಂಜ್ ಕೊಡುತ್ತದೆ.

ಚಾಜಿಂಗ್: ಈ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ, ಕೇವಲ 3 ಗಂಟೆಗಳಲ್ಲಿ ಶೇಕಡ 0 - 75% ಚಾರ್ಜ್ ಆಗುತ್ತದೆ. ಪೂರ್ತಿ ಚಾರ್ಜ್ ಆಗಲು 4.5 ಗಂಟೆ ತೆಗೆದುಕೊಳ್ಳುತ್ತದೆ. 3 ಕೆಡಬ್ಲ್ಯೂಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 150 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಜೊತೆಗೆ ಗಂಟೆಗೆ 85 ಕಿ.ಮೀ ವೇಗವನ್ನು ಪಡೆಯಲಿವೆ.

Revolt RV400 BRZ

ಫೀಚರ್ಸ್: ವಿಶೇಷವಾಗಿ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, ಕಾಂಬಿ ಬ್ರೇಕಿಂಗ್ ಸಿಸ್ಟಮ್ ಪಡೆದಿದೆ. ಜೊತೆಗೆ ಸೈಡ್-ಸ್ಟ್ಯಾಂಡ್ ಕಟ್ - ಆಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ. ಹೊಸ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಬಗ್ಗೆ ಕಂಪನಿಯ ಪ್ರಮುಖ ಅಧಿಕಾರಿ ಅಂಜಲಿ ರತ್ತನ್ (Anjali Rattan) ಮಾತನಾಡಿದ್ದಾರೆ.

'ದ್ವಿಚಕ್ರ ವಾಹನ ಚಾಲಕರ ಅಗತ್ಯತೆಗಳ ಕುರಿತು ಆಳವಾದ ಅಧ್ಯಯನ ನಡೆಸಿ, ಈ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಓಡಿಸುವಾಗ ಚಾಲಕರಿಗೆ ಅತ್ಯುತ್ತಮವಾದ ಅನುಭವ ಸಿಗುತ್ತದೆ' ಎಂದು ಹೇಳಿದ್ದಾರೆ. ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಸಾಮಾನ್ಯ ರಿವೋಲ್ಟ್ ಆರ್‌ವಿ400 ಮಾದರಿಗಳು ರೂ.1.27 ಲಕ್ಷದಿಂದ ರೂ.1.38 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ.

Revolt RV400 BRZ

ಹೊಸ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ (Revolt RV400 BRZ) ಇ-ಬೈಕ್, ಕಡಿಮೆ ಖರ್ಚಿನಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಲಿದೆ. ಈ ಬೈಕ್ ಆಕರ್ಷಕ ವೈಶಿಷ್ಟ್ಯ ಹಾಗೂ ಬಣ್ಣಗಳೊಂದಿಗೆ ಲಭ್ಯವಿರುವುದರಿಂದ ಹೆಚ್ಚಿನ ಗ್ರಾಹಕರು, ಇದನ್ನು ಖರೀದಿಸಲು ಆಸಕ್ತಿ ತೋರಿಸಬಹುದು. ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಬೇಡಿಕೆ ಪಡೆಯಲಿದೆ ಎಂಬುದು ಗೊತ್ತಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, January 28, 2024, 14:00 [IST]
English summary
New revolt rv400 brz electric bike top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+