ರಾಯಲ್ ಎನ್‌ಫೀಲ್ಡ್ ಬತ್ತಳಿಕೆಗೆ ಹೊಸ ಬ್ರಹ್ಮಾಸ್ತ್ರ: ಈ ಆಕರ್ಷಕ ಬೈಕಿಗೆ ಯುವಕರು ಫಿದಾ

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇರುವ ಬೇಡಿಕೆ ವಿಭಿನ್ನವಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸರಣಿಯಲ್ಲಿ ಹಲವಾರು ವಿಭಿನ್ನ ರೀತಿಯ ಬೈಕ್‌ಗಳಿವೆ. ಬುಲೆಟ್ ನಿಂದ ಹಿಡಿದು ಸೂಪರ್ ಮೆಟಿಯರ್ ವರೆಗಿನ ಸಣ್ಣ ಸರಣಿಯ ಬೈಕ್ ಗಳಿವೆ. ಇದರೊಂದಿಗೆ ಹಂಟರ್, ಕ್ಲಾಸಿಕ್, ಹಿಮಾಲಯನ್, ಗೆರಿಲ್ಲಾ, ಇಂಟರ್‌ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಶಾಟ್‌ಗನ್ ನಂತಹ ಅಧ್ಬುತ ಬೈಕುಗಳಿವೆ. ಇದೀಗ ರಾಯಲ್ ಎನ್‌ಫೀಲ್ಡ್ ಮತ್ತೊಂದು ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಇಟಲಿಯಲ್ಲಿ EICMA 2024 ರಲ್ಲಿ ಅಧಿಕೃತ ಚೊಚ್ಚಲ ಪ್ರವೇಶಕ್ಕೆ ಮುಂಚಿತವಾಗಿ ತನ್ನ ಬೇರ್ 650 ಸ್ಕ್ರ್ಯಾಂಬ್ಲರ್ ಬೈಕ್ ಫಸ್ಟ್ ಲುಕ್ ಬಿಡುಗಡೆಗೊಳಿಸಿದೆ. ಇಂಟರ್‌ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಆವೃತ್ತಿಯನ್ನು ಸ್ಕ್ರಾಮ್ 650 ಎಂದು ನಾಮಕರಣ ಮಾಡಲಾಗುವುದು ಎಂದು ಮೊದಲು ಹೇಳಲಾಗುತ್ತಿತ್ತು. ಈ ನಡುವೆ 'ಬೇರ್ 650' ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿತು. ನಂತರ ಇದೇ ಹೆಸರನ್ನೇ ನೀಡಲಾಗಿದೆ.

Royal Enfield Bear 650

ರಾಯಲ್ ಎನ್‌ಫೀಲ್ಡ್ ತನ್ನ ಇತ್ತೀಚಿನ ಕೊಡುಗೆಯನ್ನು 'ಗೆರಿಲ್ಲಾ' ಎಂದು ಕರೆಯಲು ಆಯ್ಕೆ ಮಾಡಿದೆ. ಆದ್ದರಿಂದ ಸ್ಕ್ರ್ಯಾಂಬ್ಲರ್ 650 ಅನ್ನು 'ಬೇರ್' ಎಂಬ ಹೆಸರು ನೀಡಿತು. ರಾಯಲ್ ಎನ್‌ಫೀಲ್ಡ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೊವು ಬೇರ್ 650 ಬೈಕಿನಲ್ಲಿ ಗೋಲ್ಡನ್ ಬಣ್ಣದ ಅಪ್ ಸೈಡ್ ಡೌನ್ USD) ಮುಂಭಾಗದ ಫೋರ್ಕ್‌ಗಳನ್ನು ತೋರಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಬೇರ್ 650 (Royal Enfield Bear 650) ಬೈಕ್ ಸಸ್ಪೆಕ್ಷನ್ ಸೆಟಪ್ ಅನ್ನು ಒಳಗೊಂಡಿರುವ ಈ ಪ್ಲಾಟ್‌ಫಾರ್ಮ್ ಆಧಾರಿತ ಮೊದಲ 650 ಸಿಸಿ ಬೈಕ್ ಎಂದು ಹೇಳಬೇಕಾಗಿಲ್ಲ. ಇನ್ನು ಹಿಂಭಾಗದಲ್ಲಿ, ಇದು ಟ್ವಿನ್-ಶಾಕ್ ಸಸ್ಪೆಕ್ಷನ್ ಸೆಟಪ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇನ್ನು ಮುಂಬರುವ ಹಿಮಾಲಯನ್ 650 ಮೊನೊ-ಶಾಕ್ ಹಿಂಭಾಗದ ಸಸ್ಪೆನ್ಷನ್‌ನೊಂದಿಗೆ ಬರುವ ಮೊದಲ ರಾಯಲ್ ಎನ್‌ಫೀಲ್ಡ್ ಆಗಲಿದೆ ಎಂದು ಹೇಳಲಾಗುತ್ತಿದೆ.

Royal Enfield Bear 650

ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಡ್ಯುಯಲ್ ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಬಣ್ಣದ ಯೋಜನೆಗಳನ್ನು ಸಹ ತೋರಿಸುತ್ತದೆ. ಒಟ್ಟಾರೆ ತೂಕವನ್ನು ನಿಯಂತ್ರಣದಲ್ಲಿಡಲು ಕಂಪನಿಯು ಸಿಂಗಲ್ ಎಕ್ಸಾಸ್ಟ್ ಪೈಪ್ ಅನ್ನು ಬಳಸಿದೆ. ಇನ್ನು ಈ ಕಾರಿನಲ್ಲಿ 5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಸಹ ನೋಡಬಹುದು. ಇದನ್ನು ಟ್ರಿಪ್ಪರ್ ಡ್ಯಾಶ್ ಎಂದು ಹೇಳಲಾಗುತ್ತಿದೆ. ಇದನ್ನು ಸಂಯೋಜಿತ Google ಮ್ಯಾಪ್ ಮತ್ತು ಮ್ಯೂಸಿಕ್ ಫಂಕ್ಷನ್ ಗಳೊಂದಿಗೆ ನೀಡಲಾಗುತ್ತದೆ.

ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಅನ್ನು ಕೆಲವು ಆಫ್-ರೋಡಿಂಗ್‌ಗಾಗಿ ಕೂಡ ಬಳಸಬಹುದು. ಈ ಬೈಕಿನಲ್ಲಿ 648cc ಪ್ಯಾರಲಲ್-ಟ್ವಿನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 47 bhp ಪವರ್ ಮತ್ತು 52 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ.

Royal Enfield Bear 650

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ನೀಡಲಾಗಿದೆ. ಆದ್ದರಿಂದ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಬ್ಲಾಕ್ ಪ್ಯಾಟರ್ನ್ ಡ್ಯುಯಲ್-ಪರ್ಪಸ್ ಟೈರ್‌ಗಳೊಂದಿಗೆ ವೈರ್-ಸ್ಪೋಕ್ಡ್ ವೀಲ್‌ಗಳೊಂದಿಗೆ ಆಗಮಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 28, 2024, 16:17 [IST]
English summary
New royal enfield bear 650 image out details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+