ರಾಯಲ್ ಎನ್‌ಫೀಲ್ಡ್ ಬತ್ತಳಿಕೆಗೆ ಹೊಸ ಬ್ರಹ್ಮಾಸ್ತ್ರ: ಹೊಸ ಬೇರ್ 650 ಬೈಕ್ ವಿಶೇಷತೆಗಳೇನು?
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಬೇರ್ 650 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. 650 ಟ್ವಿನ್ ಪ್ಲಾಟ್‌ಫಾರ್ಮ್ ಆಧಾರಿಸಿರುವ ಹೊಸ ಬೇರ್ ಮಾದರಿಯು ಐದನೇ 650 cc ಬೈಕ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಆಕರ್ಷಕ ವಿನ್ಯಾಸ ಮತ್ತು ಆತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.
ಬೆಲೆ ಮತ್ತು ಬಣ್ಣಗಳ ಆಯ್ಕೆ: ಹೊಸ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಬೆಲೆಯು ನವದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.3.39 ಲಕ್ಷವಾಗಿದೆ. ಇದು ಭಾರೀ ದುಬಾರಿ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಆಕರ್ಷಕ ವಿನ್ಯಾಸ ಎಂದು ಹೇಳಬಹುದು. ಈ ಹೊಸ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಬ್ರಾಡ್‌ವಾಕ್ ವೈಟ್, ಪೆಟ್ರೋಲ್ ಗ್ರೀನ್ ಮತ್ತು ಗೋಲ್ಡನ್ ಶ್ಯಾಡೋ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ವಿನ್ಯಾಸ: ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬೇರ್ 650 (Royal Enfield Bear 650) ಬೈಕ್ ಅತ್ಯಾಧುನಿಕವಾಗಿರುವ ವಿನ್ಯಾಸ ಹೊಂದಿದೆ. ಒಂದಷ್ಟು ಅಂಶಗಳು ಇಂಟರ್‌ಸೆಪ್ಟರ್ 650 ಹಾಗೂ ಸ್ಕ್ರಾಂಬ್ಲರ್ ಮೋಟಾರ್‌ಸೈಕಲ್‌ಗೂ ಹೋಲಿಕೆಯಾಗುತ್ತವೆ. ಆದರೆ, ಅವುಗಳಿಂದಂತೆ ಭಿನ್ನ ಎಂದು ತೋರಿಸಲು ಉತ್ತಮವಾಗಿರುವ ಸರ್ಕ್ಯುಲರ್ ಎಲ್ಇಡಿ ಹೆಡ್‌ಲೈಟ್, ಟೈಲ್‌ಲ್ಯಾಂಪ್ ಮತ್ತು ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದೆ.
ಫೀಚರ್ಸ್: ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಹಲವು ವಿನೂತನವಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕಿನಲ್ಲಿ ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್‌ನಂತಹ ಫೀಚರ್ಸ್ ಗಳನ್ನು ಹೊಂದಿದೆ. ಇದರೊಟ್ಟಿಗೆ ಮುಂಭಾಗ (ಫ್ರಂಟ್) 19-ಇಂಚು ಹಾಗೂ ಹಿಂಭಾಗ (ರೇರ್) 17-ಇಂಚಿನ ಸ್ಪೋಕ್ ವೀಲ್‌ಗಳನ್ನು ಪಡೆದಿದ್ದು, ಎಂಆರ್‌ಎಫ್ ಕಂಪನಿಯ ನೈಲೋರೆಕ್ಸ್ ಟೈರ್‌ಗಳನ್ನು ಒಳಗೊಂಡಿದೆ.

ಎಂಜಿನ್: ಈ ನೂತನ ಬೈಕ್ 648cc ಟ್ವಿನ್-ಸಿಲಿಂಡರ್ ಆಯಿಲ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 7,250 ಆರ್‌ಪಿಎಂನಲ್ಲಿ 46 ಬಿಹೆಚ್‍ಪಿ ಪವರ್ ಮತ್ತು 5,150 ಆರ್‌ಪಿಎಂನಲ್ಲಿ 56.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್: ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುಆಡರೆ, ಮುಂಭಾಗ ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ರಕ್ಷಣೆಗಾಗಿ ಬೈಕಿನ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದ್ದು, ಹೆಚ್ಚಿನ ಸುರಕ್ಷತೆಗಾಗಿ ಡುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಒಟ್ಟಾರೆಯಾಗಿ ಹೊಸ ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕ್ ಸಾಕಷ್ಟು ಅತ್ಯಾಧುನಿಕವಾಗಿದೆ. ಇದು ಪ್ರೀಮಿಯಂ ಮೋಟಾರ್‌ಸೈಕಲ್ ಕೊಂಡುಕೊಳ್ಳಬೇಕೆಂದು ಆಸೆಪಡುವ ಗ್ರಾಹಕರಿಗೆ ಹೆಚ್ಚು ಸೂಕ್ತವಾಗಲಿದ್ದು, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








