ಸದ್ದಿಲ್ಲದೆ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಬಿಡುಗಡೆ: ಅಗ್ಗದ ಬೆಲೆ, ಪ್ರತಿಸ್ಪರ್ಧಿಗಳಿಗೆ ಶಾಕ್!

ಭಾರತದ ಜನಪ್ರಿಯ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ರಾಯಲ್‌ ಎನ್‌ಫೀಲ್ಡ್‌ ಕೊನೆಗೂ ತನ್ನ ಗೆರಿಲ್ಲಾ 450 ಬೈಕ್ ಅನ್ನು ಇಂದು ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಇದನ್ನು ಅನಲಾಗ್, ಡ್ಯಾಶ್, ಫ್ಲ್ಯಾಶ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.39 ಲಕ್ಷದಿಂದ ಆರಂಭವಾಗಿ ರೂ.2.54 ಲಕ್ಷಗಳಾಗಿದೆ. ಬಹುಶಃ 450 ಸಿಸಿ ಬೈಕ್ ಇಷ್ಟು ಅಗ್ಗದ ಬೆಲೆಗೆ ಬಿಡುಗಡೆಯಾಗಿರುವುದು ಇದೇ ಮೊದಲು. ಬೈಕ್‌ನ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ವೇರಿಯೆಂಟ್‌ವಾರು ಬೆಲೆ: ಅನಲಾಗ್ ವೇರಿಯೆಂಟ್ ಬೆಲೆಯು (ಎಕ್ಸ್‌ ಶೋರೂಂ) ರೂ.2.39 ಲಕ್ಷ, ಡ್ಯಾಶ್ ವೇರಿಯೆಂಟ್ ಬೆಲೆ (ಎಕ್ಸ್‌ ಶೋರೂಂ) ರೂ.2.49 ಲಕ್ಷ, ಫ್ಲ್ಯಾಶ್ ವೇರಿಯೆಂಟ್ ಬೆಲೆಯು (ಎಕ್ಸ್‌ ಶೋರೂಂ) ರೂ.2.54 ಲಕ್ಷಗಳಾಗಿದೆ. ಹೊಸ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕ್‌ಗೆ ರೂಪಾಂತರವಾರು ವಿವಿಧ ಬಣ್ಣಗಳ ಆಯ್ಕೆಯನ್ನು ಸಹ ನೀಡಲಾಗಿದೆ.

new-royal-enfield-guerrilla-450-launched-in-india-price-scpecs-details

ವಿನ್ಯಾಸ: ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450, ಆಧುನಿಕ-ರೆಟ್ರೊ ವಿನ್ಯಾಸವನ್ನು ಪಡೆದುಕೊಂಡಿದೆ. ನೇಕೆಡ್ ಬೈಕ್ ರೌಂಡ್ ಹೆಡ್ ಲೈಟ್, ವೃತ್ತಾಕಾರದ ಇನ್ಸ್‌ಟ್ರೂಮೆಂಟ್ ಡಿಸ್‌ಪ್ಲೇ, ಇದು ಹಿಮಾಲಯನ್ 450 ಬೈಕಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಕಣ್ಣೀರಿನ ಹನಿ (ಟಿಯರ್ ಡ್ರಾಪ್) ಆಕಾರದ ಫ್ಯೂಯಲ್ ಟ್ಯಾಂಕ್ (11 ಲೀಟರ್ ಸಾಮರ್ಥ್ಯ), ಉದ್ದನೆಯ ಸಿಂಗಲ್ ಸೀಟ್ ಮತ್ತು ಹಿಂಭಾಗದಲ್ಲಿ ಸಣ್ಣ ಎಲ್‌ಇಡಿ ಟೇಲ್ ಲೈಟ್ ನೀಡಲಾಗಿದೆ.

ಬಣ್ಣಗಳು: ಗೆರಿಲ್ಲಾ 450 ಬೈಕಿನ ಅನಲಾಗ್ ರೂಪಾಂತರವು ಸ್ಮೋಕ್ ಮತ್ತು ಪ್ಲೇಯಾ ಬ್ಲ್ಯಾಕ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಎರಡನೆಯ ಈ ಪ್ಲೇಯಾ ಬ್ಲ್ಯಾಕ್ ಬಣ್ಣವನ್ನು ಡ್ಯಾಶ್ ವೇರಿಯೆಂಟ್‌ನಲ್ಲೂ ನೀಡಲಾಗುತ್ತದೆ. ಇದು ಗೋಲ್ಡ್ ಡಿಪ್ ಬಣ್ಣದಲ್ಲಿ ಬರುತ್ತದೆ. ಫ್ಲ್ಯಾಶ್ ರೂಪಾಂತರವು ಬ್ರಾವಾ ಬ್ಲೂ ಮತ್ತು ಯೆಲ್ಲೋ ರಿಬ್ಬನ್ ಎಂಬ ಎರಡು ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

new-royal-enfield-guerrilla-450-launched-in-india-price-scpecs-details

ಎಂಜಿನ್: ಹೊಸ ರಿಯಾಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕಿನಲ್ಲಿ ಶೆರ್ಪಾ 452 ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 RPMನಲ್ಲಿ 39.50 Bhp ಪವರ್ ಮತ್ತು 5,500 RPMನಲ್ಲಿ 40 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗೆರಿಲ್ಲಾ 450 ಬೈಕ್ ಸ್ಟೀಲ್ ಟ್ಯೂಬ್ಲಾರ್ ಫ್ರೇಮ್ ಹೊಂದಿದ್ದು, ಎಂಜಿನ್ ಒತ್ತಡವನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಸಸ್ಪೆನ್ಷನ್ & ಬ್ರೇಕಿಂಗ್: ಹಿಮಾಲಯನ್ 450 ಬೈಕಿಗೆ ಹೋಲಿಸಿದರೆ ಗೆರಿಲ್ಲಾ 450 ಬೈಕ್ ವಿಭಿನ್ನ ಹಿಂಭಾಗದ ಸಬ್ ಫ್ರೇಮ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಗೆರಿಲ್ಲಾ 450 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹೊಂದಿದ್ದು, ಹಿಂಭಾಗದಲ್ಲಿ ಇದು ಪ್ರಿಲೋಡ್ ಅಡ್ಜಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

new-royal-enfield-guerrilla-450-launched-in-india-price-scpecs-details

ಗೆರಿಲ್ಲಾ 450 ಬೈಕ್ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದು, ಸಿಯೆಟ್ ಗ್ರಿಪ್ ಎಕ್ಸ್‌ಎಲ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. 120/70 ಆರ್ 17 (ಮುಂಭಾಗ) ಮತ್ತು 160/60-ಆರ್ 17 (ಹಿಂಭಾಗ). ಹೊಸ ಗೆರಿಲ್ಲಾ 450 ಬೈಕ್ 185 ಕೆ.ಜಿ ತೂಕವನ್ನು ಹೊಂದಿದ್ದು, ಹಿಮಾಲಯನ್ 450 ಬೈಕಿಗಿಂತ 11 ಕೆ.ಜಿ ಹಗುರವಾಗಿದೆ. ಹಾಗೆಯೇ ಇದು 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 17, 2024, 8:12 [IST]
English summary
New royal enfield guerrilla 450 launched in india price scpecs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+