ಅಗ್ಗದ ಬೆಲೆಯ ಹೊಸ ರಾಯಲ್ ಎನ್‌ಫೀಲ್ಡ್ ಬೈಕಿಗೆ ಭಾರೀ ಬೇಡಿಕೆ: ಇದಕ್ಕಾಗಿ ಕ್ಯೂ ನಿಲ್ಲಬೇಕು!
ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಭಾರತದಲ್ಲಿ ಬಹು ನಿರೀಕ್ಷಿತ ಗೆರಿಲ್ಲಾ 450 ಅನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಭಾರತೀಯರಲ್ಲಿ ಉತ್ತಮ ಮಾರಾಟ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬ ವರದಿಗಳಿವೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ರಾಯಲ್ ಎನ್ ಫೀಲ್ಡ್ ಗ್ವಾರಿಲ್ಲಾ 450 ಬೈಕಿನ ಕಾಯುವಿಕೆಯ ಅವಧಿಯ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಈ ಬೈಕ್ ಅನ್ನು ಈಗಲೇ ಬುಕ್ ಮಾಡಿದರೆ ಅದು ಯಾವಾಗ ನಿಮ್ಮ ಕೈ ಯಾವಾಗ ಸೇರುತ್ತದೆ ಎಂಬ ವಿವರಗಳು ಹೊರಬಿದ್ದಿವೆ.
ಪ್ರತಿಯೊಂದು ನಗರವು ತನ್ನದೇ ಆದ ಕಾಯುವ ಅವಧಿಯನ್ನು ಹೊಂದಿರುತ್ತದೆ ಲಭ್ಯವಿರುವ ಮಾಹಿತಿಯ ಪ್ರಕಾರ, ಚೆನ್ನೈ, ಮುಂಬೈ ಮತ್ತು ಬೆಂಗಳೂರು ಅತಿ ಹೆಚ್ಚು ಕಾಯುವ ಸಮಯವನ್ನು ಹೊಂದಿವೆ. ಈ ಮೂರು ನಗರಗಳಲ್ಲಿ ಬೈಕ್ 45 ದಿನಗಳ ಕಾಯುವ ಅವಧಿಯನ್ನು ಹೊಂದಿದೆ. ಹಾಗಾಗಿ ಈ ಮೂರು ನಗರದಲ್ಲಿ ಈಗಲೇ ಬುಕ್ ಮಾಡಿದರೆ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಅನ್ನು ಪಡೆಯಲು ಕನಿಷ್ಠ 45 ದಿನಗಳು ಕಾಯಬೇಕಾಗುತ್ತದೆ.

ಇದೇ ವೇಳೆ ಪುಣೆಯಲ್ಲಿ 10 ರಿಂದ 15 ದಿನಗಳ ಕಾಲ ಕಾಯುವ ಅವಧಿಯನ್ನು ಹೊಂದಿದೆ. ಗೆರಿಲ್ಲಾ 450 ರಾಯಲ್ ಎನ್‌ಫೀಲ್ಡ್ ತನ್ನ ಶೆರ್ಪಾ ಪ್ಲಾಟ್‌ಫಾರ್ಮ್‌ನಿಂದ ಅಳವಡಿಸಿಕೊಂಡ ಎರಡನೇ ಮೋಟಾರ್‌ಸೈಕಲ್ ಆಗಿದೆ. ಸದ್ಯ ಈ ಬೈಕ್ ಬುಕ್ಕಿಂಗ್ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ರೂ. 10 ಸಾವಿರ ಟೋಕನ್ ಮೊತ್ತ ಪಾವತಿಸಿ ಬುಕಿಂಗ್ ಮಾಡಬಹುದು.
ಈ ಬೈಕ್‌ನ ವಿತರಣೆಯು ಮೊದಲು ಪುಣೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಆಧುನಿಕ ಮತ್ತು ರೆಟ್ರೋ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾದ ಸ್ಟ್ರೀಟ್ ನೇಕೆಡ್ ಬೈಕ್ ಮೂರು ವಿಭಿನ್ನ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಅನಲಾಗ್, ಡ್ಯಾಶ್ ಮತ್ತು ಫ್ಲ್ಯಾಶ್ ಆಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.39 ಲಕ್ಷದಿಂದ ಆರಂಭವಾಗಿ ರೂ.2.54 ಲಕ್ಷಗಳಾಗಿದೆ.

ಬಹುಶಃ 450 ಸಿಸಿ ಬೈಕ್ ಇಷ್ಟು ಅಗ್ಗದ ಬೆಲೆಗೆ ಬಿಡುಗಡೆಯಾಗಿರುವುದು ಇದೇ ಮೊದಲು. ಹಾಗಾಗಿ ಈ ಬೈಕ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು. ರಾಯಲ್ ಎನ್‌ಫಿಲ್ಡ್ ಹಿಮಾಲಯನ್ 450 ಬೈಕ್‌ನಲ್ಲಿರುವ ಅದೇ ಎಂಜಿನ್ ಅನ್ನು ಈ ಬೈಕ್‌ನಲ್ಲೂ ಕಂಪನಿ ಬಳಸಿದೆ. ಹೊಸ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕಿನಲ್ಲಿ ಶೆರ್ಪಾ 452 ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.
ಈ ಎಂಜಿನ್ 8,000 RPMನಲ್ಲಿ 39.50 Bhp ಪವರ್ ಮತ್ತು 5,500 RPMನಲ್ಲಿ 40 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗೆರಿಲ್ಲಾ 450 ಬೈಕ್ ಸ್ಟೀಲ್ ಟ್ಯೂಬ್ಲಾರ್ ಫ್ರೇಮ್ ಹೊಂದಿದ್ದು, ಎಂಜಿನ್ ಒತ್ತಡವನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಬೈಕಿನ ಮುಂಭಾಗದಲ್ಲಿ ಗೆರಿಲ್ಲಾ 450 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹೊಂದಿದ್ದು, ಹಿಂಭಾಗದಲ್ಲಿ ಇದು ಪ್ರಿಲೋಡ್ ಅಡ್ಜಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ.

ಹಾಗೆಯೇ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಗೆರಿಲ್ಲಾ 450 ಬೈಕ್ ಸಿಯೆಟ್ ಗ್ರಿಪ್ ಎಕ್ಸ್‌ಎಲ್ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದುಕೊಂಡಿದ್ದು, 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಹಾಗೆಯೇ ಇದು 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಹೊಸ ಗೆರಿಲ್ಲಾ 450 ಬೈಕ್ 185 ಕೆ.ಜಿ ತೂಕವನ್ನು ಹೊಂದಿದ್ದು, ಹಿಮಾಲಯನ್ 450 ಬೈಕಿಗಿಂತ 11 ಕೆ.ಜಿ ಹಗುರವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








