ರಾಯಲ್ ಎನ್‌ಫೀಲ್ಡ್ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ: ಈ ಹೊಸ ಬೈಕಿಗೆ ಯುವಕರು ಫಿದಾ!

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇರುವ ಬೇಡಿಕೆ ವಿಭಿನ್ನವಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸರಣಿಯಲ್ಲಿ ಹಲವಾರು ವಿಭಿನ್ನ ರೀತಿಯ ಬೈಕ್‌ಗಳಿವೆ. ಬುಲೆಟ್ ನಿಂದ ಹಿಡಿದು ಸೂಪರ್ ಮೆಟಿಯರ್ ವರೆಗಿನ ಸಣ್ಣ ಸರಣಿಯ ಬೈಕ್ ಗಳಿವೆ. ಇದರೊಂದಿಗೆ ಹಂಟರ್, ಕ್ಲಾಸಿಕ್, ಹಿಮಾಲಯನ್, ಗೆರಿಲ್ಲಾ, ಇಂಟರ್‌ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಶಾಟ್‌ಗನ್ ನಂತಹ ಅಧ್ಬುತ ಬೈಕುಗಳಿವೆ. ಆದರೆ 650 ಸಿಸಿ ವಿಭಾಗದಲ್ಲಿ ಇನ್ನಷ್ಟು ರಾಯಲ್ ಎನ್‌ಫೀಲ್ಡ್ ಬೈಕ್ ಗಳು ಬಿಡುಗಡೆಯಾಗಲಿವೆ ಎಂದು ವರದಿಯಾಗಿದೆ.

ರಾಯಲ್ ಎನ್‌ಫೀಲ್ಡ್‌ನ ಹೊಸ 650 ಸಿಸಿ ಬೈಕಿನ ಚಿತ್ರಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಇಟಲಿಯ ಮಿಲನ್‌ನಲ್ಲಿ 2024ರ EICMA ಮೋಟಾರು ಶೋನಲ್ಲಿ ಪ್ರೊಡಕ್ಷನ್-ಸ್ಪೆಕ್ ಬೇರ್ 650 ಮಾದರಿಯ ಚಿತ್ರಗಳು ವೈರಲ್ ಆಗಿದೆ. ಈ ಬೈಕ್‌ನ ಅಧಿಕೃತ ಹೆಸರು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಬೇರ್ 650 (Royal Enfield Interceptor Bear 650) ಆಗಿದೆ.

Royal Enfield Interceptor Bear 650

ನಿರೀಕ್ಷಿಸಿದಂತೆ ಬೇರ್ ಎನ್‌ಫೀಲ್ಡ್‌ನ ಪ್ರಸ್ತುತ 650cc ಸರಣಿಯ ಇತರ ಮಾದರಿಗಳೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿದೆ. ಆದರೆ ಸ್ಟೈಲಿಂಗ್ ತನ್ನದೇ ಆದ ಗುರುತನ್ನು ಕಾಪಾಡಿಕೊಳ್ಳುವುದರೊಂದಿಗೆ ಬರುತ್ತದೆ. ಇದು ಇಂಟರ್‌ಸೆಪ್ಟರ್ 650 ಅನ್ನು ಆಧರಿಸಿರುವುದರಿಂದ, ಅದರಿಂದ ಹೆಚ್ಚು ಸಾಲ ಪಡೆಯುವ ಸಾಧ್ಯತೆಯಿದೆ. ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಇಂಟರ್‌ಸೆಪ್ಟರ್‌ಗಿಂತ ಹೆಚ್ಚು ಪ್ರಾಯೋಗಿಕವಾಗಿ ಸ್ಕ್ರ್ಯಾಂಬ್ಲರ್ ನಿಲುವನ್ನು ಹೊಂದಿದೆ.

ಇದರೊಂದಿಗೆ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಬೇರ್ 650 ಬೈಕ್ ರೌಂಡ್ LED ಹೆಡ್‌ಲ್ಯಾಂಪ್‌ಗಳು, ಸಣ್ಣ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಟ್ಯೂಬ್ಯುಲರ್ ಗ್ರಾಬ್ ರೈಲ್ ಮತ್ತು ಮಿನಿಮಲಿಸ್ಟಿಕ್ ಬಾಡಿ ಪ್ಯಾನೆಲ್‌ಗಳು ಹೊಸ ಮಾದರಿಯನ್ನು ನೋಡುಗರ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಬೈಕಿನಲ್ಲಿ ಹೆಡ್‌ಲ್ಯಾಂಪ್‌ನಂತೆ ದುಂಡಾಗಿರುವ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಬದಿಗಳಿಂದ ಹೊರಹೊಮ್ಮುವ ಎಲ್‌ಇಡಿ ಟರ್ನ್ ಇಂಡಿಕೇಟರ್ಸ್ ನೊಂದಿಗೆ ಕ್ರೋಮ್ ಕೇಸಿಂಗ್ ಅದ್ಭುತವಾಗಿದೆ.

Royal Enfield Interceptor Bear 650

ಈ ಎಲ್ಲಾ ಫೀಚರ್ಸ್ ಗಳು ರಾಯಲ್ ಎನ್‌ಫೀಲ್ಡ್ ಕಂಪನಿಯ ಇತರ 650cc ಬೈಕ್‌ಗಳಿಗೆ ಹೋಲುತ್ತವೆ, ಆದರೆ ಇದು ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಇಂಟರ್‌ಸೆಪ್ಟರ್ ಬೇರ್ 650 ಮಾದರಿಯು ಟು-ಟು-ಒನ್ ಎಕ್ಸಾಸ್ಟ್ ಸಿಸ್ಟಮ್‌ನ ಉಪಸ್ಥಿತಿಯಿಂದ ಭಿನ್ನವಾಗಿದೆ, ಇದು ಬೈಕ್ ಅನ್ನು ಹೆಚ್ಚು ಆಫ್-ರೋಡ್ ಸ್ನೇಹಿಯನ್ನಾಗಿ ಮಾಡುತ್ತದೆ. ಕಾಂಟ್ರಾಸ್ಟ್ ಬಾಡಿ ಗ್ರಾಫಿಕ್ಸ್ ಮತ್ತು ಫಿನಿಶ್‌ಗಳು ಸ್ಟ್ರೀಟ್-ಸ್ಟೈಲ್ ಬೈಕ್‌ನ ಒಟ್ಟಾರೆ ನೋಟವನ್ನು ನೀಡುತ್ತದೆ.

ಈ ರಾಯಲ್ ಎನ್‌ಫೀಲ್ಡ್ ಬೇರ್ 650 ಮಾದರಿಯು ಟ್ವಿನ್ ಫ್ರೇಮ್ ಮೇಲೆ ಸ್ಪಷ್ಟವಾದ ಮಾರ್ಪಾಡುಗಳೊಂದಿಗೆ ನಿರ್ಮಿಸಲ್ಪಟ್ಟಿದೆ. ಇತರ ಫೀಚರ್ಸ್ ಗಳು, ಬ್ಲೂಟೂತ್ ಸಂಪರ್ಕದೊಂದಿಗೆ ಫ್ಲೋಟಿಂಗ್ ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿವೆ. ಮೆಕ್ಯಾನಿಕಲ್ ಅಂಶಗಳನ್ನು ನೋಡುವುದಾದರೆ, ಮೊದಲಿಗೆ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳು ನಿರ್ವಹಿಸುತ್ತವೆ.

Royal Enfield Interceptor Bear 650

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ನೀಡಲಾಗಿದೆ. ಆದ್ದರಿಂದ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಬ್ಲಾಕ್ ಪ್ಯಾಟರ್ನ್ ಡ್ಯುಯಲ್-ಪರ್ಪಸ್ ಟೈರ್‌ಗಳೊಂದಿಗೆ ವೈರ್-ಸ್ಪೋಕ್ಡ್ ವೀಲ್‌ಗಳೊಂದಿಗೆ ಮೋಟಾರ್‌ಸೈಕಲ್ ಆಗಮಿಸಲಿದೆ.

ರಾಯಲ್ ಎನ್‌ಫೀಲ್ಡ್ ಬೇರ್ 650 ಬೈಕಿನಲ್ಲಿ 648 cc ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 47 ಬಿಹೆಚ್‍ಪಿ ಪವರ್ ಮತ್ತು 52 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಸಹ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Article Published On: Wednesday, October 16, 2024, 11:00 [IST]
English summary
New royal enfield interceptor bear 650 scrambler leaked ahead of debut details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+