ಆಕರ್ಷಕ ವಿನ್ಯಾಸದಲ್ಲಿ ಹೊಸ ಟ್ರಯಂಫ್ ಬೊನೆವಿಲ್ಲೆ T120 ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಇಂಡಿಯಾ ತನ್ನ 2025ರ ಟ್ರಯಂಫ್ ಬೋನೆವಿಲ್ಲೆ T120 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ 2025ರ ಟ್ರಯಂಫ್ ಬೋನೆವಿಲ್ಲೆ T120 ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.39 ಲಕ್ಷವಾಗಿದೆ. 2025ರ ಟ್ರಯಂಫ್ ಬೋನೆವಿಲ್ಲೆ T120 (Triumph Bonneville T120) ಬೈಕ್ ಒಂದು ರೆಟ್ರೊ ಬ್ರಿಟಿಷ್ ಮೋಟಾರ್ಸೈಕಲ್ ಅನ್ನು ನೆನಪಿಸುವ ಅಧಿಕೃತ ಕ್ಲಾಸಿಕ್ ಶೈಲಿಯನ್ನು ಹೊಂದಿದೆ. ಈ ಬೈಕ್ ವಿನ್ಯಾಸವು ಸ್ವಲ್ಪ ರಿಫ್ರೆಶ್ ಆಗಿ ಇರಿಸಿಕೊಳ್ಳಲು ಟಕ್‌ನೊಂದಿಗೆ ವರ್ಷಗಳಲ್ಲಿ ಹೆಚ್ಚು-ಕಡಿಮೆ ಹೋಲುತ್ತದೆ.

ಹೊಸ ಟ್ರಯಂಫ್ ಬೋನೆವಿಲ್ಲೆ T120 ಬೈಕ್ ಹೆಡ್‌ಲ್ಯಾಂಪ್, ಕರ್ವಿ ಫ್ಯೂಯಲ್ ಟ್ಯಾಂಕ್ ಮತ್ತು ಫ್ಲಾಟ್ ಸೀಟ್ ಕ್ಲಾಸಿಕ್ ಲುಕ್ ಅನ್ನು ಹೆಚ್ಚಿಸುತ್ತದೆ. ಕಾಸ್ಮೆಟಿಕ್ ನವೀಕರಣದ ಹೊರತಾಗಿ, ಮೋಟಾರ್ಸೈಕಲ್ ಬದಲಾಗದೆ ಉಳಿದಿದೆ. ಈ ಟ್ರಯಂಫ್ ಬೋನೆವಿಲ್ಲೆ T120 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ BMW R 9T ಮತ್ತು ಡುಕಾಟಿ ಸ್ಕ್ರ್ಯಾಂಬ್ಲರ್ 1200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Triumph Bonneville T120

ಹೊಸ ಟ್ರಯಂಫ್ ಬೋನೆವಿಲ್ಲೆ T120 ಬೈಕ್ 1,200cc, ಪ್ಯಾರಲಲ್-ಟ್ವಿನ್ ಎಂಜಿನ್ ಆಗಿದ್ದು ಅದು 270-ಡಿಗ್ರಿ ಫೈರಿಂಗ್ ಆರ್ಡರ್ ಅನ್ನು ಪಡೆಯುತ್ತದೆ. ಲಿಕ್ವಿಡ್ ಕೂಲ್ಡ್ ಎಂಜಿನ್ 6,550 ಆರ್‌ಪಿಎಂನಲ್ಲಿ 78.9 ಬಿಎಚ್‌ಪಿ ಮತ್ತು 3,500 ಆರ್‌ಪಿಎಂನಲ್ಲಿ 105 ಎನ್‌ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ಹೊಸ ಟ್ರಯಂಫ್ ಬೈಕ್ ಹೊಸ ಡ್ಯುಯಲ್-ಟೋನ್ ಕ್ರಿಸ್ಟಲ್ ವೈಟ್‌ನಲ್ಲಿ ಕ್ರ್ಯಾನ್‌ಬೆರಿ ರೆಡ್ ಕಲರ್ ಆಯ್ಕೆಯೊಂದಿಗೆ ಲಭ್ಯವಿದೆ. ಈ ಹೊಸ ಡ್ಯುಯಲ್-ಟೋನ್ ಬಣ್ಣದ ಜೊತೆ ಇನ್ನೂ ನಾಲ್ಕು ಬಣ್ಣದ ಆಯ್ಕೆಯನ್ನು ಹೊಂದಿದೆ. ಸಿಲ್ವರ್ ಬ್ಲೂ ಸ್ಟೆಲ್ತ್ ಆವೃತ್ತಿಯೊಂದಿಗೆ ಸಫೈರ್ ಬ್ಲೂನಲ್ಲಿ ಲಭ್ಯವಿದ್ದು, ಈ ಬೈಕ್ ಜೆಟ್ ಬ್ಲಾಕ್, ಕಾರ್ಡೋವನ್ ರೆಡ್ ಸಿಲ್ವರ್ ಐಸ್ ಮತ್ತು ಫ್ಯೂಷನ್ ವೈಟ್ನೊಂದಿಗೆ ಜೆಟ್ ಬ್ಲಾಕ್ ಎಂಬ ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಿದೆ.

Triumph Bonneville T120

ಟ್ರಯಂಫ್ ಇಂಡಿಯಾ ತನ್ನ ಎಂಟ್ರಿ ಲೆವೆಲ್ ಬೈಕ್‌ಗಳಾದ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೆಲೆಗಳನ್ನು ಕಳೆದ ತಿಂಗಳು ಹೆಚ್ಚಿಸಿತು. ಟ್ರಯಂಫ್ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್‌ಗಳು ಬೆಲೆ ಈಗ ಸರಿಸುಮಾರು ರೂ. 1,500 ಹೆಚ್ಚಾಗಿದೆ. ಬೆಲೆ ಏರಿಕೆಯ ಬಳಿಕ, ಟ್ರಯಂಫ್ ಸ್ಪೀಡ್ 400 ಬೆಲೆಯು ರೂ. 2,34,497 ಆದರೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 X ಬೈಕಿನ ಬೆಲೆಯು ರೂ.2,64,496 ಆಗಿದೆ.

ಈ ಎರಡೂ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ನಂತರ ಈ ಬೈಕ್‌ಗಳು ಪಡೆದ ಮೊದಲ ಬೆಲೆ ಏರಿಕೆಯಾಗಿದೆ. ಆದರೆ ಇದು ಸ್ಪೀಡ್ 400 ಬೈಕಿನ ಪರಿಚಯಾತ್ಮಕ ಬೆಲೆಯನ್ನು ಹೊರತುಪಡಿಸಿದೆ. ಈ ಬೈಕುಗಳು ಒಂದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದರೂ, ಅವು ವಿನ್ಯಾಸ ಮತ್ತು ವಿಶೇಷಂಣಗಳು ಭಿನ್ನವಾಗಿದೆ.

Triumph Bonneville T120

ಮೊದಲಿಗೆ ಟ್ರಯಂಫ್ ಸ್ಪೀಡ್ 400 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಇದರೊಂದಿಗೆ ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ.

ಈ ಹೊಸ ಬೈಕ್ ಸಾಕಷ್ಟು ಟ್ರಯಂಫ್ ವಿನ್ಯಾಸದ ಅಂಶಗಳೊಂದಿಗೆ ಆಕಷಕವಾಗಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

More from DriveSpark

Article Published On: Monday, June 3, 2024, 20:47 [IST]
English summary
New triumph bonneville t120 launched details
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+