ಈ ಬೈಕ್ ಖರೀದಿಗಾಗಿ ಶಬರಿಯಂತೆ ಕಾಯುತ್ತಿದ್ದ ಯುವಕರಿಗೆ ಗುಡ್ ನ್ಯೂಸ್... ಅಂತಹದ್ದೇನಿದೆ?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles) ತನ್ನ ಡೇಟೋನಾ 660 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಟ್ರಯಂಫ್ ಡೇಟೋನಾ 660 (Triumph Daytona 660) ಬೈಕ್ ನಾಳೆ (ಆಗಸ್ಟ್ 29) ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಟ್ರಯಂಫ್ ಡೇಟೋನಾ 660 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಬೈಕ್ ಅನ್ನು ಖರೀದಿಸಲು ಈಗ ಪ್ರಾರಂಭಿಕ ಟೋಕನ್ ರೂ. 25,000 ಆಗಿದೆ. ಈ ಬೈಕ್ ಈಗಾಗಲೇ ಅಧಿಕೃತ ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ.

ಹೊಸ ಟ್ರಯಂಫ್ ಡೇಟೋನ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 650 ಮಾದರಿಗೆ ಪೈಪೋಟಿ ನೀಡುತ್ತದೆ. ಹೊಸ ಬೈಕಿನಲ್ಲಿ TFT LCD ಡಿಸ್ಪ್ಲೇ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದ್ದು ಅದು ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಮ್ ಅನ್ನು ಆಯ್ಕೆಯ ವೈಶಿಷ್ಟ್ಯವಾಗಿ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ರೈಡ್-ಬೈ-ವೈರ್ ಥ್ರೊಟಲ್, ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಟ್ರಾಕ್ಷನ್ ಕಂಟ್ರೋಲ್ ಇತ್ಯಾದಿಗಳನ್ನು ಒಳಗೊಂಡಿದೆ.

Triumph Daytona 660

ಟ್ರಯಂಫ್ ಟ್ರೈಡೆಂಟ್ 660 ಮತ್ತು ಟೈಗರ್ ಸ್ಪೋರ್ಟ್‌ನಂತಹ ಇತರ 660 ಸಿಸಿ ಟ್ರಿಪಲ್‌ಗಳೊಂದಿಗೆ ಟ್ರಯಂಫ್ ಡೇಟೋನಾ 660 ಹಲವಾರು ಹೋಲಿಕೆಗಳನ್ನು ಹೊಂದಿದೆ. ಈ ಟ್ರಯಂಫ್ ಡೇಟೋನ್ 660 ಸ್ನೋಡೋನಿಯಾ ವೈಟ್/ಸಫೈರ್ ಬ್ಲ್ಯಾಕ್, ಸ್ಯಾಟಿನ್ ಗ್ರಾನೈಟ್/ಸ್ಯಾಟಿನ್ ಜೆಟ್ ಬ್ಲಾಕ್ ಮತ್ತು ಕಾರ್ನಿವಲ್ ರೆಡ್/ಸಫೈರ್ ಬ್ಲ್ಯಾಕ್ ಎಂಬ ಮೂರು ಪೇಂಟ್ ಸ್ಕೀಮ್‌ಗಳಲ್ಲಿ ಮಾರಾಟವಾಗಲಿದೆ. ಟ್ರಯಂಫ್ ಡೇಟೋನ್ 660 ಬೈಕಿನಲ್ಲಿ ಪರಿಚಿತ 660 cc ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 11,250 rpm ನಲ್ಲಿ 95 PS ಪವರ್ ಮತ್ತು 69 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನಂತೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕ್ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯುತ್ತದೆ. ಈ ಹೊಸ ಬೈಕನ್ನು ಟ್ರೈಡೆಂಟ್ 660 ಮೇಲಿನ ಸ್ಥಾನದಲ್ಲಿ ಇರಿಸಲಾಗಿದೆ.

Triumph Daytona 660

ಟ್ರಯಂಫ್ ಡೇಟೋನಾ 660 ಬೈಕ್ ಸ್ಟೀಲ್ ಪರಿಮಿಟರ್ ಚಾಸಿಸ್ ಅನ್ನು ಹೊಂದಿದೆ. ಟ್ರಯಂಫ್ ಡೇಟೋನ್ 660 ಹೊಸ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಫೇರ್ಡ್ ಸೂಪರ್‌ಸ್ಪೋರ್ಟ್ ಬೈಕ್‌ನಲ್ಲಿ ಮುಂಭಾಗದಲ್ಲಿ ಶೋವಾ ಮೂಲದ 41 ಎಂಎಂ ಅಪ್ ಸೈಡ್ ಡೌನ್ ದೊಡ್ಡ ಪಿಸ್ಟನ್ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದ ಪ್ರಿ ಲೋಡ್-ಹೊಂದಾಣಿಕೆ ಮೊನೊಶಾಕ್ ಸಸ್ಪೆನ್ಶನ್ ಅನ್ನು ಅಳವಡಿಸಲಾಗಿದೆ.

ಇನ್ನು ಪ್ರಮುಖವಾಗಿಈ ಹೊಸ ಟ್ರಯಂಫ್ ಡೇಟೋನ್ 660 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಮುಂಭಾಗದಲ್ಲಿ ಟ್ವಿನ್ 310 ಎಂಎಂ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್‌ ಅನ್ನು ನೀಡಲಾಗಿದೆ.

Triumph Daytona 660

ಹೊಸ ಟ್ರಯಂಫ್ ಡೇಟೋನ್ 660 ಬೈಕಿನಲ್ಲಿ17-ಇಂಚಿನ Y-ಆಕಾರದ ಕ್ಯಾಸ್ಟ್ ಅಲ್ಯೂಮಿನಿಯಂ ಐದು-ಸ್ಪೋಕ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳಲ್ಲಿ ಮುಂಭಾಗ 120/70 ಮತ್ತು ಹಿಂಭಾಗ 180/55 ರಬ್ಬರ್‌ನಲ್ಲಿ ಸುತ್ತುತ್ತದೆ. ಈ ಬೈಕ್ 810 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಟ್ರಯಂಫ್ ಡೇಟೋನಾ 660 ಹಳೆಯ ಡೇಟೋನಾ 675 ನಿಂದ ಸಾಕಷ್ಟು ಸ್ಫೂರ್ತಿ ಪಡೆಯುತ್ತದೆ ಮತ್ತು ಅದರ 660 cc ಕೌಂಟರ್‌ಪಾರ್ಟ್‌ಗಳಿಗಿಂತ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 28, 2024, 18:09 [IST]
English summary
New triumph daytona 660 india launch tomorrow
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+