ಯುವಕರ ಹೃದಯ ಕದಿಯಲು ಬಂದ ಆಕರ್ಷಕ ಬೆಲೆಯ ಹೊಸ ಟ್ರಯಂಫ್ ಬೈಕಿನ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಇಂಡಿಯಾ ತನ್ನ ಸ್ಪೀಡ್ 400 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.4 ಲಕ್ಷವಾಗಿದೆ. ಈ ಹೊಸ ಮಾದರಿಯು ಅದರ ಹಿಂದಿನ ಮಾದರಿಗಿಂತ ಸರಿಸುಮಾರು 15,000 ರೂ. ದುಬಾರಿಯಾಗಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ತಾಜಾ ಬಣ್ಣಗಳು ಮತ್ತು ಸಣ್ಣ ನವೀಕರಣಗಳನ್ನು ಒಳಗೊಂಡಿವೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಎಂಜಿನ್: ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಅದೇ 399cc, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5 bhp ಪವರ್ ಮತ್ತು 6,500rpm ನಲ್ಲಿ 39 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಿಂಗಲ್-ಸಿಲಿಂಡರ್ ಮೋಟರ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ನವೀಕರಣ: ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ ದೂರದ ಸವಾರಿಯನ್ನು ಸುಧಾರಿಸಲು ಸೀಟಿನ ಮೇಲೆ ದಪ್ಪವಾದ ಫೋಮ್ ಅನ್ನು ಪಡೆಯುತ್ತದೆ. ಇದು ವ್ರೆಡೆಸ್ಟೈನ್‌ನಿಂದ ಉನ್ನತ-ಪ್ರೊಫೈಲ್ ರೇಡಿಯಲ್ ಟೈರ್‌ಗಳನ್ನು ಸಹ ಪಡೆಯುತ್ತದೆ. ಬೈಕ್ ಹೊಂದಾಣಿಕೆ ಮಾಡಬಹುದಾದ ಬ್ರೇಕ್‌ಗಳು ಮತ್ತು ಕ್ಲಚ್ ಲಿವರ್‌ಗಳನ್ನು ಸಹ ಪಡೆಯುತ್ತದೆ.
ಫೀಚರ್ಸ್: ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಟ್ಟೆಗೆ ಎಂಟ್ರಿ ಕೊಟ್ಟ ಟ್ರಯಂಫ್ ಸ್ಪೀಡ್ 400 ಬೈಕಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ರೈಡ್-ಬೈ-ವೈರ್ ಥ್ರೊಟಲ್, ಫುಲ್ ಎಲ್‌ಇಡಿ ಲೈಟಿಂಗ್, ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಬಣ್ಣಗಳ ಆಯ್ಕೆ: ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಯೆಲ್ಲೋ, ಫ್ಯಾಂಟಮ್ ಬ್ಲಾಕ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ರೇಸಿಂಗ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇನ್ನು ಅವುಗಳಲ್ಲಿ ಕೆಲವು ಹಿಂದೆ ನೀಡದ ಎಕ್ಸಾಸ್ಟ್ ಸಿಸ್ಟಂನಲ್ಲಿ ಬ್ಲ್ಯಾಕ್ಡ್-ಔಟ್ ಫಿನಿಶ್ ಅನ್ನು ಒಳಗೊಂಡಿವೆ. ಒಟ್ಟಾರೆಯಾಗಿ ಹೊಸ ಬಣ್ಣಗಳೊಂದಿಗೆ ಈ ಬೈಕ್ ಮತ್ತಷ್ಟು ಕಲರ್ ಪುಲ್ ಆಗಿದೆ.
ಟೈರ್‌ಗಳು: ಅತ್ಯಂತ ಮಹತ್ವದ ಬದಲಾವಣೆಯೆಂದರೆ ಟೈರ್‌ಗಳಲ್ಲಿ ಆಗಿದೆ. ಟ್ರಯಂಫ್ ಸ್ಪೀಡ್ 400 ಈಗ ವ್ರೆಡೆಸ್ಟೀನ್ ಟೈರ್‌ಗಳೊಂದಿಗೆ ಬರುತ್ತದೆ, ಅದು ಮೊದಲಿಗಿಂತ ದಪ್ಪವಾದ ಸೈಡ್‌ವಾಲ್‌ಗಳನ್ನು ಹೊಂದಿದೆ. ಅವರು ಹಿಂದಿನ 110/70 R17 ಮತ್ತು 150/60 R17 ಗೆ ವಿರುದ್ಧವಾಗಿ 110/80 R17 ಮತ್ತು 150/70 R17 ಅನ್ನು ಹೊಂದಿದೆ. ಇದು ಸೀಟಿನ ಎತ್ತರ ಮತ್ತು ಗ್ರೌಂಡ್ ಕ್ಲಿಯರೆನ್ಸ್‌ಗೆ ಸ್ವಲ್ಪ ಹೆಚ್ಚಳಕ್ಕೆ ಕಾರಣವಾಗಿದ್ದು, ಬೈಕ್‌ಗೆ ಸ್ವಲ್ಪ ಎತ್ತರದ ನಿಲುವು ನೀಡುತ್ತದೆ.

ಹೊಸ ಟ್ರಯಂಫ್ ಸ್ಪೀಡ್ 400 ಬೈಕ್‌ನ್ನು ಆಕರ್ಷಕ ಬೆಲೆಗೆ ಪರಿಚಯಿಸಲಾಗಿದೆ. ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ, ನೂತನ ಮೋಟಾರ್‌ಸೈಕಲ್‌ನ್ನು ಕಾಯ್ದಿರಿಬಹುದು. ಇನ್ನು ಕೆಲವೇ ದಿನಗಳಲ್ಲಿ ಈ ಬೈಕಿನ ವಿತರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








