TVS Jupiter 110: ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಮನೆಗೆ ತರಬೇಕೇ.. ಈ ವಿವರಗಳು ಖಂಡಿತ ಗೊತ್ತಿರಬೇಕು!
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಗುರುತಿಸಿಕೊಂಡಿದೆ. ಇತ್ತೀಚೆಗೆ ನವೀಕರಿಸಿದ 2024ರ ಹೊಚ್ಚ ಹೊಸ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಬಿಡುಗಡೆ ಮಾಡಿತ್ತು. ಈ ಸ್ಕೂಟರ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್, ಡ್ರಮ್ ಅಲಾಯ್, ಡ್ರಮ್ ಎಸ್‌ಎಕ್ಸ್‌ಸಿ ಹಾಗೂ ಡಿಸ್ಕ್ ಎಸ್‌ಎಕ್ಸ್‌ಸಿ ಎಂಬ 4 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಕೂಡ ಖರೀದಿಗೆ ದೊರೆಯುತ್ತದೆ. ಬನ್ನಿ.. ಪ್ರತಿಯೊಂದು ರೂಪಾಂತರಗಳ ವಿಶೇಷತೆ ಕುರಿತಂತೆ ಸಂಪೂರ್ಣವಾದ ವಿವರ ತಿಳಿಯೋಣ.
ಟಿವಿಎಸ್ ಜುಪಿಟರ್ 110 ಡ್ರಮ್ (TVS Jupiter 110 Drum): ಇದು ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಆಗಿದ್ದು, ರೂ.73,700 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡ್ರಮ್ ಬ್ರೇಕ್‍ಗಳು, ಸ್ಟೀಲ್ ವೀಲ್‌ಗಳು ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೆಟಿಯರ್ ರೆಡ್ ಗ್ಲಾಸ್, ಟೈಟಾನಿಯಂ ಗ್ರೇ ಮ್ಯಾಟ್ ಹಾಗೂ ಲೂನಾರ್ ವೈಟ್ ಗ್ಲೋಸ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಟಿವಿಎಸ್ ಜುಪಿಟರ್ 110 ಡ್ರಮ್ ಅಲಾಯ್ (TVS Jupiter 110 Drum Alloy): ಈ ರೂಪಾಂತರವು ಆರಂಭಿಕ ಶ್ರೇಣಿ ರೂಪಾಂತರದಂತೆ ಇದ್ದು, ಆ ರೀತಿಯೇ ಬಣ್ಣ (ಕಲರ್) ಹಾಗೂ ವೈಶಿಷ್ಟ್ಯಗಳನ್ನು (ಫೀಚರ್) ಹೊಂದಿದೆ. ರೂ.79,200 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಆದಾಗ್ಯೂ ಸ್ಟೀಲ್ ವೀಲ್‌ಗಳ ಬದಲಾಗಿ 12-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದ್ದು, ಸ್ಟಾರ್‌ಲೈಟ್ ಬ್ಲೂ ಗ್ಲೋಸ್ ಬಣ್ಣವನ್ನು ಒಳಗೊಂಡಿದೆ.
ಟಿವಿಎಸ್ ಜುಪಿಟರ್ 110 ಡ್ರಮ್ ಎಸ್‌ಎಕ್ಸ್‌ಸಿ (TVS Jupiter 110 Drum SXC): ಇದನ್ನು ಮಧ್ಯಮ ಶ್ರೇಣಿ ರೂಪಾಂತರ (ಮಿಡ್ ಲೆವೆಲ್ ವೇರಿಯೆಂಟ್) ಎಂದು ಹೆಸರಿಸಬಹುದು. ರೂ.83,250 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಫುಲ್ ಕಲರ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಇನ್ಫಿನಿಟಿ ಎಲ್ಇಡಿ ಲೈಟ್ ಬಾರ್‌ನ್ನು ಪಡೆದಿದೆ. ಡಾನ್ ಬ್ಲೂ ಮ್ಯಾಟ್, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ ಸೇರಿದಂತೆ ವಿವಿಧ ಬಣ್ಣಗಳನ್ನು ಹೊಂದಿದೆ.

ಟಿವಿಎಸ್ ಜುಪಿಟರ್ 110 ಡಿಸ್ಕ್ ಎಸ್‌ಎಕ್ಸ್‌ಸಿ (TVS Jupiter 110 Disc SXC): ಇದೊಂದು ಗರಿಷ್ಠ ಶ್ರೇಣಿ ರೂಪಾಂತರ (ಹೈ-ಎಂಡ್ ಲೆವೆಲ್ ವೇರಿಯೆಂಟ್) ರೂಪಾಂತರ ಆಗಿದ್ದು, ರೂ.87,250 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. ಮುಂಭಾಗ (ಫ್ರಂಟ್) 220 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಡ್ರಮ್ ಎಸ್‌ಎಕ್ಸ್‌ಸಿ ರೂಪಾಂತರದಂತೆ ಬಣ್ಣ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಟಿವಿಎಸ್ ಜುಪಿಟರ್ 110 ಸ್ಕೂಟರ್‌ನ ಎಲ್ಲ ರೂಪಾಂತರಗಳು ಎಲ್ಇಡಿ ಲೈಟಿಂಗ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಂಜಿನ್ ಕಿಲ್ ಸ್ವಿಚ್, 2-ಲೀಟರ್ ಗ್ಲೋವ್ ಬಾಕ್ಸ್ ಮತ್ತು 33-ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್‌ನಂತಹ ಸಾಮಾನ್ಯ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಅಂಡರ್ ಸೀಟ್ ಸ್ಟೋರೇಜ್‌ನಲ್ಲಿ 2 ಹೆಲ್ಮೆಟ್‌ಗಳನ್ನು ಸುಲಭವಾಗಿ ಸಾಗಿಸಬಹುದು.

ಜೊತೆಗೆ ಇವೆಲ್ಲ ರೂಪಾಂತರಗಳು ಒಂದೇ ರೀತಿಯ ಪವರ್‌ಟ್ರೇನ್‌ನ್ನು ಹೊಂದಿವೆ. 113 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.91 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 9.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿವೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡಬಲ್ಲವು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








