ಅತ್ಯಂತ ಅಗ್ಗದ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಬೆಲೆ ಕೇವಲ 36,990 ರೂ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮುಂಬರುವ ದಿನಗಳಲ್ಲಿ ಇನ್ನೂ ಅಗ್ಗವಾಗಿ ಸಿಗಲಿವೆ. ಬ್ಯಾಟರಿ ತಂತ್ರಜ್ಞಾನ ಬೆಳೆದಂತೆ ಭಾರತದಲ್ಲೂ ಇದರ ಮೇಲಿನ ಸಂಶೋಧನೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಮುಂಬರುವ ಇವಿ ವಾಹನಗಳು ಇನ್ನೂ ಕಡಿಮೆ ಬೆಲೆಯಲ್ಲಿ ಸಿಗಲಿವೆ ಎಂಬುದಕ್ಕೆ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಉದಾಹರಣೆಯಾಗಿದೆ.
ನೋಯ್ಡಾ ಮೂಲದ ಇ-ಮೊಬಿಲಿಟಿ ಕಂಪನಿ ನೆಕ್ಸ್‌ಜೆನ್ ಎನರ್ಜಿಯು ಗುರುವಾರ ಕೈಗೆಟುಕುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಉದ್ಯಮಿ - ನಟ ಸುನೀಲ್ ಶೆಟ್ಟಿ ಅನಾವರಣಗೊಳಿಸಿದರು. "ಈ ಸ್ಕೂಟರ್ ಬೆಲೆಯು ಕೇವಲ 36,990 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಭಾರತದ ಅತ್ಯಂತ ಕೈಗೆಟುಕುವ ದ್ವಿಚಕ್ರ ವಾಹನ ಎಂಬ ಖ್ಯಾತಿಯನ್ನು ಇದೀಗ ಪಡೆದುಕೊಂಡಿದೆ. ಇ-ಮೊಬಿಲಿಟಿ ಮುಂದಿನ ಹಣಕಾಸು ವರ್ಷದಲ್ಲಿ ವಿಶ್ವದ ಅತ್ಯಂತ ಕೈಗೆಟುಕುವ ಬೆಲೆಯ ಕಾರನ್ನು ಬಿಡುಗಡೆ ಮಾಡಲು ಕೂಡ ಯೋಜನೆ ರೂಪಿಸಿಕೊಂಡಿದೆ. ಸದ್ಯ ಈಗ ದ್ವಿಚಕ್ರ ವಾಹನಗಳ ಮೇಲೆ ಕೇಂದ್ರೀಕರಿಸಿದೆ.

ಈ ನಿಟ್ಟಿನಲ್ಲಿ ಕಂಪನಿಯು ಈ ಹಣಕಾಸು ವರ್ಷದಲ್ಲಿ 500 ಕೋಟಿ ರೂ.ಗಿಂತ ಹೆಚ್ಚಿನ ಮಾರಾಟವನ್ನು ದಾಟುವ ಗುರಿಯನ್ನು ಹೊಂದಿದೆ. 500 ಕ್ಕೂ ಹೆಚ್ಚು ವಿತರಕರು ಮತ್ತು ಇವಿ ವಲಯದಲ್ಲಿ ಸುಮಾರು 50,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೊರಟಿರುವುದಾಗಿ ಕಂಪನಿ ಹೇಳಿದೆ.
ನೆಕ್ಸ್ ಜೆನ್ ಎನರ್ಜಿಯಾ ಅಧ್ಯಕ್ಷ ಪಿಯೂಷ್ ದ್ವಿವೇದಿ ಮಾತನಾಡಿ, ಮುಂಬರುವ ಪೀಳಿಗೆಗೆ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಹೆಚ್ಚು ಖರೀದಿಸಲು ಮತ್ತು ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಈ ಬಿಡುಗಡೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಪ್ರತಿಯೊಬ್ಬ ಭಾರತೀಯನಿಗೂ ಕಾರ್ಯಸಾಧ್ಯವಾದ ಆಯ್ಕೆಯನ್ನಾಗಿ ಮಾಡುವುದು, ಎಲ್ಲರಿಗೂ ಸ್ವಚ್ಛ ಭವಿಷ್ಯವನ್ನು ಖಾತ್ರಿಪಡಿಸುವುದು ಕಂಪನಿಯ ಗುರಿಯಾಗಿದೆ ಎಂದು ಪಿಯೂಷ್ ದ್ವಿವೇದಿ ಹೇಳಿದರು.
ಕಂಪನಿಯು ಈಗ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿದರೆ, ಅದು 5 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳಾಗಿರಲಿವೆ. ಇದು ಮಧ್ಯಮ ವರ್ಗದ ಜನರಿಗೆ ಕಾರು ಖರೀದಿಸುವುದನ್ನು ಸುಲಭಗೊಳಿಸುತ್ತದೆ. ಹಾಗೆಯೇ ಇದು ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಆಗಲಿದೆ. ಕಂಪನಿಯು ಈಗ ತನ್ನ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಮಾರ್ಚ್ ನಲ್ಲಿ ಕಂಪನಿಗೆ 1,000 ಕೋಟಿ ರೂ. ಮೊತ್ತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ತಿಳಿಸಿದೆ.
ಘೌಟಾ ಕೈಗಾರಿಕಾ ಕೇಂದ್ರ ಅಥವಾ ಕಾಶ್ಮೀರ ಕಣಿವೆ ಪ್ರದೇಶದಲ್ಲಿ 100 ಎಕರೆ ಭೂಮಿಯನ್ನು ಮಂಜೂರು ಮಾಡಲು ಇದು ಪ್ರಸ್ತುತ ಜೆಮ್ಮು - ಕಾಶ್ಮೀರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡತೆ ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.
ಈ ಇ-ಮೊಬಿಲಿಟಿ ಆದಷ್ಟು ಬೇಗ ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಭಾರತದ ವಾಹನ ಉದ್ಯಮದಲ್ಲಿ ಕ್ರಾಂತಿಯಾಗಲಿದೆ. ಆದರೆ ಸದ್ಯ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅಭಿಪ್ರಾಯಗಳು ಬದಲಾಗಬೇಕಿದೆ. ವಿಶ್ವಾಸಾರ್ಹ ಎಲೆಕ್ಟ್ರಿಕ್ ವಾಹನಗಳನ್ನು ಕಂಪನಿಗಳು ನೀಡುವುದರ ಜೊತೆಗೆ ಚಾರ್ಜಿಂಗ್ ಸ್ಟೇಷನ್‌ಗಳು ಹೆಚ್ಚಾಗಿ ಸ್ಥಾಪಿಸಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








