Nexzu: ಬೆಲೆ ಕೇವಲ 30 ಸಾವಿರ... ಒಮ್ಮೆ ಚಾರ್ಜ್‌ ಮಾಡಿ 100 ಕಿ.ಮೀ ಓಡಾಡಬಹುದು

Nexzu ಮೊಬಿಲಿಟಿ, ತನ್ನ Bazinga ಮತ್ತು Roadlark ಶ್ರೇಣಿಯ ಉತ್ಪನ್ನಗಳ ಅಡಿಯಲ್ಲಿ ನಾಲ್ಕು ಹೊಸ ರೂಪಾಂತರಗಳನ್ನು ಅನಾವರಣಗೊಳಿಸಿದೆ. ಎರಡೂ ಎಲೆಕ್ಟ್ರಿಕ್-ಸೈಕಲ್‌ಗಳು ಈಗ 5.2 Ah ನಿಂದ 14.5Ah ವರೆಗಿನ ಬ್ಯಾಟರಿ ಸಾಮರ್ಥ್ಯಗಳೊಂದಿಗೆ ಬಂದಿದ್ದು, ಇವು ವಿನಿಮಯ ಮಾಡಬಹುದಾದ ಬ್ಯಾಟರಿಗಳೊಂದಿಗೆ ಲಭ್ಯವಿರುವುದಾಗಿ ಕಂಪನಿ ತಿಳಿಸಿದೆ.

Nexzu ಕಂಪನಿಯ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ತಮ್ಮ ಪ್ರವೇಶ ಮಟ್ಟದ 'Rompus Plus' ಶ್ರೇಣಿಯಿಂದ ಪ್ರಾರಂಭಿಸಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿಸಲಾಗಿದೆ. 'Rompus Plus' ಮಾದರಿಯು ಕಂಪನಿಯ ಪ್ರವೇಶ ಮಟ್ಟದ ಉತ್ಪನ್ನವಾಗಿದೆ, ಇದು ದೈನಂದಿನ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. Bazinga ಎಂಬುದು ಲಿಂಗ-ತಟಸ್ಥ ಉತ್ಪನ್ನವಾಗಿದ್ದು, ಆಧುನಿಕ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

nexzu-mobility-rolls-out-four-new-electric-cycles

Roadlark ಮಾದರಿಯು ಅಥ್ಲೀಷರ್ ಚಟುವಟಿಕೆಗಳಿಗಾಗಿ ನಗರ ಪ್ರದೇಶದ ಪುರುಷ ಗ್ರಾಹಕರನ್ನು ಗುರಿಯಾಗಿಸಿಕೊಂಡ ಪ್ರಮುಖ ಉತ್ಪನ್ನವಾಗಿದೆ. ರೋಡ್‌ಲಾರ್ಕ್ ಮತ್ತು ಬಜಿಂಗಾ ಶ್ರೇಣಿಯ EV-ಸೈಕಲ್‌ಗಳು ಈಗ 5.2Ah, 8.7Ah ಮತ್ತು 14.5 Ah ನ 3 ವಿಭಿನ್ನ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯಲ್ಲಿ ಲಭ್ಯವಿವೆ. ಇವು ಒಮ್ಮೆ ಚಾರ್ಜ್‌ ಮಾಡಿದ್ರೆ ಕ್ರಮವಾಗಿ 30 ಕಿ.ಮೀ, 45 ಕಿ.ಮೀ ಮತ್ತು 100 ಕಿ.ಮೀ ರೇಂಜ್ ನೀಡುತ್ತವೆ.

ವಿವರವಾಗಿ ಹೇಳುವುದಾದ್ರೆ, 5.2Ah ಬ್ಯಾಟರಿ ಸಾಮರ್ಥ್ಯದ EV-ಸೈಕಲ್‌ ಒಮ್ಮೆ ಚಾರ್ಜ್‌ ಮಾಡಿದ್ರೆ 30 ಕಿ.ಮೀ ರೇಂಜ್ ನೀಡುತ್ತದೆ. 8.7Ah ಬ್ಯಾಟರಿ ಸಾಮರ್ಥ್ಯದ ಇವಿ ಸೈಕಲ್ 45 ಕಿ.ಮೀ ರೇಂಜ್ ನೀಡುತ್ತದೆ. ಕೊನೆಯದಾಗಿ 14.5 Ah ಬ್ಯಾಟರಿ ಸಾಮರ್ಥ್ಯದ ಇವಿ ಸೈಕಲ್ ಸಂಪೂರ್ಣ ಚಾರ್ಜ್‌ನಲ್ಲಿ 100 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

nexzu-mobility-rolls-out-four-new-electric-cycles

ಇವುಗಳ ಬೆಲೆಯನ್ನು ನೋಡುವುದಾದ್ರೆ, Rompus Plus 5.2Ah ಬ್ಯಾಟರಿ ಸಾಮರ್ಥ್ಯದ EV-ಸೈಕಲ್‌ 29,900 ರೂ. ಬೆಲೆಯಿದೆ. Bazinga 5.2 Ah ಬ್ಯಾಟರಿ ಸಾಮರ್ಥ್ಯದ ಇವಿ ಸೈಕಲ್ ರೂ. 32,950 ರಿಂದ ಆರಂಭವಾಗಿ ರೂಪಾಂತರಗಳನ್ನು ಆಧರಿಸಿ 39,950 ರವರೆಗೆ ಬೆಲೆಯಿದೆ. Roadlark 5.2 Ah ಬ್ಯಾಟರಿ ಸಾಮರ್ಥ್ಯದ ಇವಿ ಸೈಕಲ್ ರೂ. 32,950 ರಿಂದ ಆರಂಭವಾಗಿ ರೂಪಾಂತರಗಳನ್ನು ಆಧರಿಸಿ 39,950 ರವರೆಗೆ ಬೆಲೆಯಿದೆ.

ಪರಿಷ್ಕೃತ ಬ್ಯಾಟರಿ ಆಯ್ಕೆಗಳೊಂದಿಗೆ, ಗ್ರಾಹಕರು ಈಗ ತಮ್ಮ ಅವಶ್ಯಕತೆಯ ಆಧಾರದ ಮೇಲೆ EV ಸೈಕಲ್‌ಗಳನ್ನು ಆಯ್ಕೆ ಮಾಡಬಹುದು. ಎಲ್ಲಾ ಮೂರು ಬ್ಯಾಟರಿಗಳ ಆಯ್ಕೆಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಬ್ಯಾಟರಿಗಳನ್ನು ಸುಲಭವಾಗಿ ಮನೆಗೆ ಕೊಂಡೊಯ್ಯಬಹುದಾಗಿದ್ದು, ಚಾರ್ಜ್ ಮಾಡಲು ಹೆಚ್ಚುವರಿ ಅನುಕೂಲತೆಯೊಂದಿಗೆ ಬರುತ್ತದೆ.

Nexzu ಮೊಬಿಲಿಟಿಯ ಬಿಸಿನೆಸ್ ಹೆಡ್ ಚಿಂತಾಮಣಿ ಸರ್ದೇಸಾಯಿ ಮಾತನಾಡಿ "ಆಕರ್ಷಕ ಬೆಲೆಯಲ್ಲಿ ಸ್ವಾಪ್ ಮಾಡಬಹುದಾದ ಬ್ಯಾಟರಿಗಳ ಪರಿಚಯದೊಂದಿಗೆ, EV ಸೈಕಲ್ ಪ್ರಸ್ತುತ EV ದ್ವಿಚಕ್ರ ಸೈಕಲ್ ಉದ್ಯಮದಲ್ಲಿ ಅತ್ಯಂತ ಲಾಭದಾಯಕ ಕೊಡುಗೆಯಾಗಿದೆ. ಪೆಡಲ್ ತುಳಿಯುವ ಆಯ್ಕೆಯೊಂದಿಗೆ ಕಡಿಮೆ ವೆಚ್ಚದ ಇವಿ ಸೈಕಲ್‌ಗಳು ವೈಯಕ್ತಿಕ ಬಳಕೆ ಮತ್ತು ವಾಣಿಜ್ಯ ಬಳಕೆಗಾಗಿ ಕಡಿಮೆ ದೂರದ ಪ್ರಯಾಣಕ್ಕೆ ಸೂಕ್ತವಾದ ಆಯ್ಕೆಯಾಗಿದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 22, 2024, 8:30 [IST]
English summary
Nexzu mobility rolls out four new electric cycles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+