Nissan: 5 ಮಂದಿ ಪ್ರಯಾಣಕ್ಕೆ ಅತ್ಯಂತ ಸುರಕ್ಷಿತ ಕಾರು: 6 ಏರ್ ಬ್ಯಾಗ್, ಬೆಲೆ ಕೇವಲ 5.99 ಲಕ್ಷ
ನಿಸ್ಸಾನ್ ಕಂಪನಿಯು ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜನಪ್ರಿಯತೆ ಪಡೆದಿದೆ. ಇಲ್ಲಿನ ಪರಿಸ್ಥಿತಿಗಳು ಹಾಗೂ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಪ್ರಮುಖ ಕಾರಾಗಿರುವ ಹಾಗೂ ಹೆಚ್ಚು ಮಾರಾಟ ಕಾಣುತ್ತಿರುವ ನಿಸ್ಸಾನ್ ಮ್ಯಾಗ್ನೈಟ್ (Nissan magnite) ಬಗ್ಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ. ನಿಸ್ಸಾನ್ ಇತ್ತೀಚೆಗೆ ಫೇಸ್‌ಲಿಫ್ಟ್ ಮ್ಯಾಗ್ನೈಟ್ ಅನ್ನು ಬಿಡುಗಡೆ ಮಾಡಿದೆ, ಇದರ ಬೆಲೆಗಳು 5.99 ಲಕ್ಷ ರೂ.ಗಳಿಂದ 11.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಮೈಲೇಜ್ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಮ್ಯಾಗ್ನೈಟ್ ಫೇಸ್ ಲಿಫ್ಟ್ ಕಾರು, ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎಂಬ ಆರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹಾಗೆಯೇ ಎರಡು ಎಂಜಿನ್ ಆಯ್ಕೆಗಳಿದ್ದು, 1-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್ (ಎಎಂಟಿ) ನೊಂದಿಗೆ ಬರುತ್ತದೆ.

ಮತ್ತೊಂದು ಆಯ್ಕೆಯಲ್ಲಿ 1 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿದೊಂದಿಗೆ ಬರುತ್ತದೆ. 1-ಲೀಟರ್ ಮ್ಯಾನುವಲ್‌ನಲ್ಲಿ 19.4 ಕಿ.ಮೀ ಮೈಲೇಜ್, 1-ಲೀಟರ್ ಆಟೋಮ್ಯಾಟಿಕ್‌ನಲ್ಲಿ 19.7 ಕಿ.ಮೀ, 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುವಲ್‌ನಲ್ಲಿ 19.9 ಕಿ.ಮೀ ಹಾಗೂ 1-ಲೀಟರ್ ಟರ್ಬೊ - ಪೆಟ್ರೋಲ್ ಸಿವಿಟಿನಲ್ಲಿ 17.9 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಫೀಚರ್ಸ್: ಇದು ಕೂಲ್ಡ್ ಗ್ಲೋವ್ ಬಾಕ್ಸ್, ಅದರ ಕೆಳಗೆ ಸ್ಟೋರೇಜ್ ಸ್ಪೇಸ್ ಹೊಂದಿರುವ ಫ್ರಂಟ್ ಆರ್ಮ್ರೆಸ್ಟ್ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಅನ್ನು ಪಡೆದಿದೆ. 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆಟೋ-ಡಿಮ್ಮಿಂಗ್ ಐಆರ್‌ವಿಎಂ ಮತ್ತು ನಾಲ್ಕು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ. ಜೊತೆಗೆ ರಿಮೋಟ್ ಎಂಜಿನ್ ಸ್ಟಾರ್ಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ.

ಸುರಕ್ಷತೆ: 2024ರ ಹೊಸ ಮ್ಯಾಗ್ನೈಟ್ 6 ಏರ್ ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ಹಿಲ್ - ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ) ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್, ಬ್ಲೈಂಡ್ ಸ್ಪಾಟ್ ಮಾನಿಟರ್ ಹೊಂದಿರುವ 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ನೊಂದಿಗೆ ಬರುತ್ತದೆ. 2022 ರಲ್ಲಿ ಗ್ಲೋಬಲ್ ಎನ್‌ಸಿಎಪಿಯಿಂದ 4-ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಗಳಿಸಿದೆ.
ಬಣ್ಣಗಳು: ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್ ಕಾರು, ಸನ್ ರೈಸ್ ಕಾಪರ್ ಆರೆಂಜ್, ಸ್ಟಾರ್ಮ್ ವೈಟ್, ಬ್ಲೇಡ್ ಸಿಲ್ವರ್, ಒನಿಕ್ಸ್ ಬ್ಲಾಕ್, ಪರ್ಲ್ ವೈಟ್, ಫ್ಲೇರ್ ಗಾರ್ನೆಟ್ ರೆಡ್, ವಿವಿಡ್ ಬ್ಲೂ ಎಂಬ ಬಣ್ಣಗಳಲ್ಲಿ ಇದು ಖರೀದಿಗೆ ಲಭ್ಯವಿದೆ. ಇವು ನಿಮಗೆ ಡ್ಯುಯಲ್ ಟೋನ್‌ನಲ್ಲೂ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಡೀಲರ್ ಸಂಪರ್ಕಿಸಿ.

ಪರ್ಯಾಯ ಆಯ್ಕೆ: 2024ರ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಬೆಲೆಯಲ್ಲಿ ಪರ್ಯಾಯ ಆಯ್ಕೆಗಳಾಗಿ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್ ಯುವಿ 3ಎಕ್ಸ್‌ಒ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್‌ನಂತಹ ಸಬ್ -4 ಮೀ. ಕಾರುಗಳನ್ನು ಖರೀದಿಸಬಹುದಾಗಿದೆ. ಮ್ಯಾಗ್ನೈಟ್ ಟಾಪ್ ವೇರಿಯೆಂಟ್ ಬೆಲೆ ರೂ.11.50 ಲಕ್ಷ (ಎಕ್ಸ್ ಶೋರೂಂ) ಎಂಬುದನ್ನು ಗಮನಿಸಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








