ಒಬೆನ್ ಎಲೆಕ್ಟ್ರಿಕ್ 12 ಪ್ರಮುಖ ನಗರಗಳಲ್ಲಿ 50 ಶೋರೂಮ್‌ಗಳನ್ನು ಪ್ರಾರಂಭಿಸಲಿದೆ

ತನ್ನ ರಾಷ್ಟ್ರವ್ಯಾಪಿ ವಿಸ್ತರಣೆಯೊಂದಿಗೆ ಮುಂದಕ್ಕೆ ಸಾಗುತ್ತಿರುವ ದೇಶೀಯ ಇವಿ ಬೈಕ್ ತಯರಕಾ ಕಂಪನಿಯಾದ ಒಬೆನ್ ಎಲೆಕ್ಟ್ರಿಕ್, ದೆಹಲಿ, ಪುಣೆ, ಕೇರಳ, ಬೆಂಗಳೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ 12 ಪ್ರಮುಖ ಭಾರತೀಯ ನಗರಗಳಲ್ಲಿ 50 ಹೊಸ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಇದೀಗ ಹೊಸದಾಗಿ ಓಬೆನ್ ಎಲೆಕ್ಟ್ರಿಕ್, ದೆಹಲಿಯ ಪಿತಾಂಪುರ ಮತ್ತು ಪುಣೆಯ ವಕಾಡ್ ಪ್ರದೇಶದಲ್ಲಿ ಹೊಸ ಶೋರೂಮ್‌ಗಳೊಂದಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ.

ಕೇರಳದ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಡೀಲರ್‌ಶಿಪ್ ಶೋರೂಮ್‌ಗಳನ್ನು ಅನಾವರಣಗೊಳಿಸಲಾಗಿದ್ದು, ದಕ್ಷಿಣ ವಲಯದಲ್ಲಿ ಬ್ರ್ಯಾಂಡ್‌ನ ಒಳಹೊಕ್ಕು ಹೆಚ್ಚಿಸಿದೆ. ಇದಲ್ಲದೆ, ಬೆಂಗಳೂರಿನ HSR ಲೇಔಟ್‌ನಲ್ಲಿ ಅಸ್ತಿತ್ವದಲ್ಲಿರುವ ಅನುಭವ ಕೇಂದ್ರ(Experience Center)ದ ಜೊತೆಗೆ, ಬನಶಂಕರಿ, ರಾಜಾಜಿನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನಲ್ಲಿ ಪ್ರೈಮ್ ಶೋರೂಮ್ ಸ್ಥಳಗಳು ಇತ್ತೀಚೆಗೆ ಪ್ರಾರಂಭಗೊಂಡಿವೆ.

oben-electric-set-to-launch-50-showrooms-across-12-major-indian-cities

ಈ ವಿಸ್ತರಣೆಯೊಂದಿಗೆ, ಒಬೆನ್ ಎಲೆಕ್ಟ್ರಿಕ್ ಈಗ ಈ ಪ್ರಮುಖ ಸ್ಥಳಗಳಲ್ಲಿ ಒಟ್ಟು 8 ಶೋರೂಮ್‌ಗಳನ್ನು ಹೊಂದಿದೆ. ಓಬೆನ್ ಎಲೆಕ್ಟ್ರಿಕ್‌ನ ಕ್ಷಿಪ್ರ ವಿಸ್ತರಣೆಯು ಅದರ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಒಬೆನ್ ರೋರ್‌ನಿಂದ ಉತ್ತೇಜಿಸಲ್ಪಟ್ಟಿದೆ. ಭಾರತದ ಸುರಕ್ಷಿತ ಎಲೆಕ್ಟ್ರಿಕ್ ಮೋಟಾರ್‌ಬೈಕ್‌ಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವುದು ನಮಗೆ ಖುಷಿ ತಂದಿದೆ ಎಂದು ಕಂಪನಿ ಹೇಳಿದೆ.

ಈ ಓಬೆನ್ ರೋರ್ 8 kW IPMSM ಮೋಟರ್ ಅನ್ನು ಹೊಂದಿದ್ದು, 3 ಸೆಕೆಂಡುಗಳಲ್ಲಿ 40 kmph ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 100 kmph ಗರಿಷ್ಟ ವೇಗವನ್ನು ಹೊಂದಿದೆ. 187 ಕಿ.ಮೀ (IDC) ಪ್ರಮಾಣೀಕೃತ ರೇಂಜ್ ಮತ್ತು ವಿಸ್ತೃತ ಬ್ಯಾಟರಿ ಬಾಳಿಕೆ ಮತ್ತು ವರ್ಧಿತ ಶಾಖ ನಿರೋಧಕತೆಗಾಗಿ ನವೀನ LFP ಸೆಲ್ ತಂತ್ರಜ್ಞಾನವನ್ನು ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

oben-electric-set-to-launch-50-showrooms-across-12-major-indian-cities

ವಿಸ್ತರಣೆಯ ನಿರೀಕ್ಷೆಗಳ ಕುರಿತು ಪ್ರತಿಕ್ರಿಯಿಸಿದ ಓಬೆನ್ ಎಲೆಕ್ಟ್ರಿಕ್‌ನ ಸಂಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರವಾಲ್, ನಮ್ಮ ವಿಸ್ತರಣಾ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ ನಗರಗಳಾದ್ಯಂತ ಹೊಸ ಶೋರೂಮ್‌ಗಳ ಪ್ರಾರಂಭವನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ದೆಹಲಿ, ಪುಣೆ ಮತ್ತು ಕೇರಳದ ರೋಮಾಂಚಕ ಮಾರುಕಟ್ಟೆಗಳಿಗೆ ನಮ್ಮ ಕಾರ್ಯತಂತ್ರದ ಪ್ರವೇಶದೊಂದಿಗೆ, ಬೆಂಗಳೂರಿನಲ್ಲಿ ನಮ್ಮ ಮುಂದುವರಿದ ಬೆಳವಣಿಗೆಯೊಂದಿಗೆ ನಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂದರು.

ಭಾರತಾದ್ಯಂತ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳ ಪ್ರಬಲ ನೆಟ್‌ವರ್ಕ್ ನಿರ್ಮಿಸಲು ನಾವು ಗಮನಹರಿಸುತ್ತಿರುವುದರಿಂದ EV ಕ್ರಾಂತಿಯನ್ನು ರಾಷ್ಟ್ರವ್ಯಾಪಿ ಮುನ್ನಡೆಸುವ ನಮ್ಮ ಬದ್ಧತೆ ಸ್ಪಷ್ಟವಾಗಿದೆ. ಸುಸ್ಥಿರತೆ ಮತ್ತು ನಾವೀನ್ಯತೆಗೆ ನಮ್ಮ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸುವ ಮೂಲಕ ಪರಿಸರ ಪ್ರಜ್ಞೆಯ ಗ್ರಾಹಕರಿಗೆ ಸಾಟಿಯಿಲ್ಲದ ಅನುಭವವನ್ನು ನೀಡಲು ನಾವು ಪ್ರಯತ್ನಿಸುತ್ತೇವೆ ಎಂದರು.

oben-electric-set-to-launch-50-showrooms-across-12-major-indian-cities

ಗ್ರಾಹಕರು ಪರಿಕರಗಳು ಮತ್ತು ಸರಕುಗಳ ಕ್ಯುರೇಟೆಡ್ ಆಯ್ಕೆಯ ಜೊತೆಗೆ ಒಬೆನ್ ರೋರ್ ಅನ್ನು ಹತ್ತಿರದಿಂದ ಅನ್ವೇಷಿಸಬಹುದು, ಮೇಲೆ ತಿಳಿಸಿದ ಸ್ಥಳಗಳು, ಒಬೆನ್ ಕೇರ್ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಬಿಡಿಭಾಗಗಳ ಬೆಂಬಲ ಮತ್ತು ಸಮೃದ್ಧವಾದ ಗ್ರಾಹಕ ಪ್ರಯಾಣವನ್ನು ಒದಗಿಸುತ್ತವೆ ಎಂದು ಕಂಪನಿ ಭರವಸೆ ನೀಡಿದೆ.

ವಿವರವಾದ ಉತ್ಪನ್ನ ಮಾಹಿತಿ ಮತ್ತು ತೊಡಗಿಸಿಕೊಳ್ಳುವ ಅನುಭವಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಈ ಶೋರೂಮ್‌ಗಳು ಒಬೆನ್ ಎಲೆಕ್ಟ್ರಿಕ್‌ನ ಅಸಾಧಾರಣ ಬೆಂಬಲ ಮತ್ತು ನಗರಗಳಾದ್ಯಂತ ಸೇವೆಗೆ ಬದ್ಧತೆಯನ್ನು ಒತ್ತಿಹೇಳುತ್ತವೆ. ಅದರ ನೆಟ್‌ವರ್ಕ್ ಮತ್ತು ಗ್ರಾಹಕರ ತೃಪ್ತಿಯನ್ನು ಬಲಪಡಿಸುತ್ತವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

More from DriveSpark

Article Published On: Friday, May 31, 2024, 8:30 [IST]
English summary
Oben electric set to launch 50 showrooms across 12 major indian cities
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+