Ola: ಬಿಗ್ ಗುಡ್‌ನ್ಯೂಸ್.. ರೂ.49,999ಕ್ಕೆ ಹೊಸ ಓಲಾ ಸ್ಕೂಟರ್, ಬೇಗ ಮನೆಗೆ ತನ್ನಿ.. ಸ್ಟಾಕ್ ಖಾಲಿಯಾದ್ರೆ ಸಿಗಲ್ಲ!
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಓಲಾ ಎಲೆಕ್ಟ್ರಿಕ್ (Ola Electric), ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಈ ಸೆಪ್ಟೆಂಬರ್‌ನಲ್ಲಿ 23,965 ಯುನಿಟ್ ಎಸ್1 ಸರಣಿ (S1 Series) ಇ-ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದ್ದು, ಶೇಕಡ 27% ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೂ ಹಿಂದಿನ ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ಒಂದಷ್ಟು ಮಟ್ಟಿಗೆ ಕುಸಿತವಾಗಿದೆ. ಈ ಹಿನ್ನೆಲೆ, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಓಲಾ ಕಂಪನಿಯು ದೊಡ್ಡಮಟ್ಟದ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, 'ಎಕ್ಸ್'ನಲ್ಲಿ ಕೂಡ ಪೋಸ್ಟ್ ಮಾಡಿದೆ.
ಇಂದಿನಿಂದ ದೇಶೀಯ ಗ್ರಾಹಕರಿಗಾಗಿ ಓಲಾ ಎಲೆಕ್ಟ್ರಿಕ್ ಆರಂಭಿಸಿರುವ 'ಬಿಗ್ಗೆಸ್ಟ್ ಓಲಾ ಸೀಸನ್ ಸೇಲ್' ಹತ್ತಾರು ಹಣಕಾಸಿನ ಪ್ರಯೋಜನಗಳನ್ನು ಹೊಂದಿದೆ. ಪ್ರಮುಖವಾಗಿ ಆರಂಭಿಕ ಶ್ರೇಣಿ ಮಾದರಿ (ಎಂಟ್ರಿ ಲೆವೆಲ್ ಮಾಡೆಲ್) ಓಲಾ ಎಸ್1ಎಕ್ಸ್ (2 ಕೆಡಬ್ಲ್ಯೂಹೆಚ್) ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರೂ.49,999ಕ್ಕೆ ಖರೀದಿಗೆ ದೊರೆಯಲಿದೆ.

ಇದರೊಟ್ಟಿಗೆ ಎಲ್ಲ ಎಸ್1 ಸರಣಿ ಸ್ಕೂಟರ್‌ಗಳ ಮೇಲೆ ರೂ.10,000ವರೆಗೆ ರಿಯಾಯಿತಿಗಳು ಲಭ್ಯವಿದೆ. ಹೆಚ್ಚುವರಿಯಾಗಿ ರೂ.21,000ವರೆಗೂ ವಿವಿಧ ಹಣಕಾಸಿನ ಪ್ರಯೋಜನಗಳನ್ನು ಖರೀದಿದಾರರಿಗೆ ನೀಡಲಾಗುತ್ತಿದೆ. ಅದರಲ್ಲಿ ರೂ.5,000ವರೆಗಿನ ವಿನಿಮಯ ಬೋನಸ್ (Exchange Bonus) ಹಾಗೂ ರೂ.7,000 ವೆಚ್ಚದ 8 ವರ್ಷವರೆಗಿನ ಬ್ಯಾಟರಿ ವಾರಂಟಿ (Battery Warranty) ಕೂಡ ಸೇರಿದೆ.
ಈ ಹಣಕಾಸಿನ ಪ್ರಯೋಜನಗಳು ನಾಳೆಯಿಂದ (ಅ.3) ಎಲ್ಲ ಗ್ರಾಹಕರಿಗೆ ಸಿಗಲಿದೆ. ವಿಶೇಷವಾಗಿ ಇಂದು (ಅ.2) ಓಲಾದ ಕಮ್ಯುನಿಟಿ ಮೆಂಬರ್‌ಗಳಿಗೆ ಅಂದರೆ, ಪ್ರಸ್ತುತ ಓಲಾ ಇ-ಸ್ಕೂಟರ್‌ನ ಮಾಲೀಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಆದರೆ, ಓಲಾ ಎಸ್1ಎಕ್ಸ್ (2 ಕೆಡಬ್ಲ್ಯೂಹೆಚ್) ಸ್ಕೂಟರ್‌ಗಾಗಿ ಸ್ಟಾಕ್ ಮುಗಿಯುವವರೆಗೂ ಮಾತ್ರ ಕಂಪನಿ ಬುಕ್ಕಿಂಗ್‌ನ್ನು ತೆಗೆದುಕೊಳ್ಳಲಿದೆ. ಈ ಸಂಬಂಧ ಯಾವುದೇ ಗೊಂದಲವಿದ್ದರೂ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಭಾರಿ ರಿಯಾಯಿತಿ ಪ್ರಯೋಜನ ಹೊಂದಿರುವ ಓಲಾ ಎಸ್1ಎಕ್ಸ್ (2 ಕೆಡಬ್ಲ್ಯೂಹೆಚ್) ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ಸಂಪೂರ್ಣ ಚಾರ್ಜ್‌ನಲ್ಲಿ 95 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಕೇವಲ 8.1 ಸೆಕೆಂಡುಗಳಲ್ಲಿ 0-60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಓಲಾ ಎಸ್1ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ 3 ಕೆಡಬ್ಲ್ಯೂಹೆಚ್ ಮತ್ತು 4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿಯೂ ಸಿಗುತ್ತದೆ. ಕ್ರಮವಾಗಿ 87,999 ರಿಂದ 96,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 151 ರಿಂದ 190 ಕಿಲೋಮೀಟರ್‌ಗೂ ಕ್ರಮಿಸುತ್ತವೆ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸಿವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ರೂ.1.07 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 151 ಕಿಲೋಮೀಟರ್‌ವರೆಗೆ ಓಡುತ್ತದೆ. ಕಡೆಯದಾಗಿ ಗರಿಷ್ಠ ಶ್ರೇಣಿ ಮಾದರಿಯಾಗಿರುವ (ಟಾಪ್ ಎಂಡ್ ಮಾಡೆಲ್) ಓಲಾ ಎಸ್1 ಪ್ರೊ ರೂ.1.35 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 195 ಕಿಲೋಮೀಟರ್‌ಗೂ ಕ್ರಮಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








