ಮೂಗು ಮುರಿಯುತ್ತಿದ್ದವರಿಗೆ ಓಲಾದಿಂದ ತಕ್ಕ ಉತ್ತರ.. ದೇಶಾದ್ಯಂತ 4,000 ಸ್ಟೋರ್‌ಗಳು ಓಪನ್, ಭಾರೀ ಆಫರ್ ಘೋಷಣೆ!

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೂಂಡಿದೆ. ಅತಿ ಕಡಿಮೆ ಅವಧಿಯಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ (EVs) ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಮಾರಾಟ ಜಾಲವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡಿದೆ. 3,200ಕ್ಕೂ ಅಧಿಕ ಹೊಸ ಸ್ಟೋರ್‌ಗಳನ್ನು ತೆರೆದಿದೆ. ಇಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುವುದು ಮಾತ್ರವಲ್ಲದೆ, ಸರ್ವಿಸ್ ಕೂಡ ಮಾಡಲಾಗುತ್ತದೆ. ಬನ್ನಿ.. ಹೆಚ್ಚಿನ ವಿವರಗಳನ್ನು ತಿಳಿಯೋಣ.

ಡಿ.2 ರವರೆಗೆ ದೇಶಾದ್ಯಂತ ಓಲಾ ಕಂಪನಿ ಮಾಲೀಕತ್ವದ 800 ಸ್ಟೋರ್‌ಗಳಿದ್ದವು. ಕಂಪನಿ ಮುಖ್ಯಸ್ಥರಾದ ಭವಿಶ್ ಅಗರ್ವಾಲ್ ಅವರು, ಬರೋಬ್ಬರಿ ನಾಲ್ಕು ಪಟ್ಟು ಮಾರಾಟ ಜಾಲವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಘೋಷಣೆ ಮಾಡಿದ್ದರು. ಕೇವಲ 19 ದಿನಗಳಲ್ಲಿ ಅದು ಸಾಕಾರಗೊಂಡಿದೆ. ಪ್ರಸ್ತುತ ಓಲಾ ಎಲೆಕ್ಟ್ರಿಕ್ 4,000 ಸ್ಟೋರ್‌ಗಳನ್ನು ಹೊಂದಿದೆ. #ಸೇವಿಂಗ್ಸ್‌ವಾಲಾಸ್ಕೂಟರ್ (#SavingsWalaScooter) ಅಭಿಯಾನದಡಿ ಕಂಪನಿಯ ಮಾರಾಟ ಜಾಲ ವಿಸ್ತರಣೆಯ ಕನಸು ನನಸಾಗಿದೆ.

Ola Electric Open 4 000 Stores Announced Big Offer Upto Rs 25 000 Details

ಭಾರೀ ಆಫರ್ ಘೋಷಣೆ: ಓಲಾ ಎಲೆಕ್ಟ್ರಿಕ್ ಮಾರಾಟ ಜಾಲ ವಿಸ್ತರಣೆಯ ಭಾಗವಾಗಿ 'ಎಸ್1' ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರೂ.25,000 ವರೆಗೆ ಹಣಕಾಸಿನ ಪ್ರಯೋಜನವನ್ನು ಘೋಷಣೆ ಮಾಡಿದೆ. ಈ ಆಫರ್ ಇಂದು (ಡಿ.25) ಮಾತ್ರ ಲಭ್ಯವಾಗಲಿದೆ. ಆಸಕ್ತ ಗ್ರಾಹಕರು, ಹತ್ತಿರದ ನೂತನ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಎಸ್1 ಪ್ರೊ ಸೋನಾ ಬಿಡುಗಡೆ: ಓಲಾ ಎಲೆಕ್ಟ್ರಿಕ್, ಹೊಚ್ಚ ಹೊಸ 'ಎಸ್1 ಪ್ರೊ ಸೋನಾ ಲಿಮಿಟೆಡ್ ಎಡಿಷನ್' ಇ-ಸ್ಕೂಟರ್‌ನ್ನು ಮಾರಾಟಕ್ಕೆ ತಂದಿದೆ. ಇದು ಐಷಾರಾಮಿ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಮೇಲೆ 24-ಕ್ಯಾರೆಟ್ ಚಿನ್ನದ ಲೇಪನ ಮಾಡಲಾಗಿದೆ. ಆದರೆ, 'ಎಸ್1 ಪ್ರೊ ಸೋನಾ' ಇ-ಸ್ಕೂಟರ್‌ನ್ನು ಖರೀದಿದಾರರು ಕೊಂಡುಕೊಳ್ಳಲು ಸಾಧ್ಯವಿಲ್ಲ. ಓಲಾ ಸ್ಪರ್ಧೆಯೊಂದನ್ನು ಏರ್ಪಡಿಸುವ ಮೂಲಕ ವಿಜೇತ ಗ್ರಾಹಕರಿಗೆ ಈ ಸ್ಕೂಟರ್‌ನ್ನು ವಿತರಣೆ ಮಾಡಲಿದೆ.

Ola Electric Open 4 000 Stores Announced Big Offer Upto Rs 25 000 Details

ಮೂವ್ಓಎಸ್ 5 ಪರಿಚಯ: ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗಾಗಿ ನೂತನ ಮೂವ್ಓಎಸ್ 5 (MoveOS 5) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮಾಡುವುದರೊಂದಿಗೆ ಈ ವೈಶಿಷ್ಟ್ಯವನ್ನು ಪಡೆಯಬಹುದು. ಇದು ಗ್ರೂಪ್ ನ್ಯಾವಿಗೇಶನ್, ಲೈವ್ ಲೊಕೇಶನ್ ಶೇರಿಂಗ್ ಮತ್ತು ರೋಡ್ ಟ್ರಿಪ್ ಮೋಡ್ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ.

ಇತ್ತೀಚೆಗೆ, ಓಲಾ ಎಲೆಕ್ಟ್ರಿಕ್ ಜಿಗ್ (Gig) ಹಾಗೂ ಎಸ್1 ಜಡ್ (S1 Z) ಸೀರೀಸ್ ಸ್ಕೂಟರ್‌ಗಳನ್ನು ಮಾರಾಟಕ್ಕೆ ತರುವುದಾಗಿಯೂ ಘೋಷಣೆ ಮಾಡಿತ್ತು. ಇವು ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತವೆ. ರೂ.499 ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. 2025ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಿತರಣೆಗಳು ಶುರುವಾಗದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಓಲಾದ ವಿವಿಧ ಎಸ್1 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಿವೆ. ಎಸ್1 ಎಕ್ಸ್ (2 ಕೆಡಬ್ಲ್ಯೂಹೆಚ್, 3 ಕೆಡಬ್ಲ್ಯೂಹೆಚ್ & 4 ಕೆಡಬ್ಲ್ಯೂಹೆಚ್) ರೂ.74,999 ರಿಂದ ರೂ.101,999 ಬೆಲೆಯನ್ನು ಹೊಂದಿದೆ. ಎಸ್1 ಪ್ರೊ ಮತ್ತು ಎಸ್1 ಏರ್ ಇ-ಸ್ಕೂಟರ್‌ಗಳು ಸಹ ಗ್ರಾಹಕರಿಗೆ ದೊರೆಯುತ್ತವೆ. ಇವುಗಳು ಕ್ರಮವಾಗಿ ರೂ.1,34,999 ಮತ್ತು ರೂ.1,07,499 (ಎಕ್ಸ್ ಶೋರೂಂ) ದರವನ್ನು ಪಡೆದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 25, 2024, 18:38 [IST]
English summary
Ola electric open 4000 stores announced big offer upto rs 25000 details
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+