Ola: 20,000 ಡಿಸ್ಕೌಂಟ್‌ಗೆ ಭರ್ಜರಿ ಪ್ರತಿಕ್ರಿಯೆ: ಜನವರಿಯಲ್ಲಿ 31,000 ಇವಿಗಳ ನೋಂದಣಿ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಓಲಾ, ಎಥರ್, ಟಿವಿಎಸ್ ಕಂಪನಿಗಳ ಸ್ಕೂಟರ್‌ಗಳ ಮಾರಾಟವು ಭರ್ಜರಿಯಾಗಿದೆ. ಇದೇ 2024 ಜನವರಿ ತಿಂಗಳಲ್ಲೂ ದೇಶದ ಜನಪ್ರಿಯ ಎಲೆಕ್ಟ್ರಿ ದ್ವಿಚಕ್ರ ವಾಹನ ಮಾರಾಟಗಾರರಾದ ಓಲಾ ಎಲೆಕ್ಟ್ರಿಕ್, ಅದ್ಭುತ ವಾಹನ ನೋಂದಣಿಗಳನ್ನು ದಾಖಲು ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Ola ಎಲೆಕ್ಟ್ರಿಕ್ ಜನವರಿಯಲ್ಲಿ 31,000 ನೋಂದಣಿಗಳನ್ನು (ವಾಹನ್ ಪೋರ್ಟಲ್ ಪ್ರಕಾರ) ದಾಖಲಿಸಿ, EV ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನ ಅಗ್ರ ಸ್ಥಾನವನ್ನು ಮುಂದುವರೆಸಿದೆ. ಶೇ 40 ರಷ್ಟು ಪ್ರಭಾವಶಾಲಿ ಮಾರುಕಟ್ಟೆ ಪಾಲನ್ನು ಉಳಿಸಿಕೊಂಡಿದೆ. ಜೊತೆಗೆ ಕಂಪನಿಯು ತಿಂಗಳಿನಲ್ಲಿ ತನ್ನ ಅತ್ಯಧಿಕ ಮಾಸಿಕ ನೋಂದಣಿಗಳನ್ನು ಸಾಧಿಸಿದೆ.

ola-electric-records-highest-ever-monthly-registrations-in-january

ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ 70 ಕ್ಕಿಂತ ಹೆಚ್ಚು ವಾರ್ಷಿಕ ಪ್ರಭಾವಶಾಲಿ ಬೆಳವಣಿಗೆಯನ್ನು ಸಾಧಿಸಿದೆ. ಡಿಸೆಂಬರ್‌ನಲ್ಲಿ, Ola Electric ಒಂದು ತಿಂಗಳಲ್ಲಿ 30,000 ನೋಂದಣಿಗಳನ್ನು ದಾಖಲಿಸಿದ ಮೊದಲ EV ದ್ವಿಚಕ್ರ ವಾಹನ ತಯಾರಕರಾಗಿ ಹೊರಹೊಮ್ಮಿದೆ. ಅಲ್ಲದೇ ಇತರ ಇವಿ ತಯಾರಕರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಡದೆ ಮತ್ತೊಮ್ಮೆ ಮಾರುಕಟ್ಟೆಯ ಅಗ್ರಜನಾಗಿ ಓಲಾ ಗುರ್ತಿಸಿಕೊಂಡಿರುವುದಾಗಿ ಹೇಳಿಕೊಂಡಿದೆ.

ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅನ್ಶುಲ್ ಖಂಡೇಲ್ವಾಲ್ ಮಾತನಾಡಿ, "ನಮ್ಮ ನೋಂದಣಿಗಳು ಜನವರಿಯಲ್ಲಿ ಸಾರ್ವಕಾಲಿಕ ಎತ್ತರವನ್ನು ತಲುಪಿರುವುದರಿಂದ ಇದು 2024 ಕ್ಕೆ ಅಸಾಧಾರಣ ಆರಂಭವಾಗಿದೆ. S1 Pro, S1 Air ಮತ್ತು S1 X+ ಒಳಗೊಂಡಿರುವ ನಮ್ಮ ಬಲವಾದ ಉತ್ಪನ್ನ ಶ್ರೇಣಿಯು ವೇಗವನ್ನು ಮುಂದುವರಿಸಲಿವೆ. ಇವಿಗಳಿಗೆ ಪರಿವರ್ತನೆಗೊಳ್ಳಲು ಹೆಚ್ಚಿನ ಗ್ರಾಹಕರನ್ನು ಉತ್ತೇಜಿಸುತ್ತವೆ ಎಂದು ನಾವು ನಂಬುತ್ತೇವೆ ಎಂದರು.

ola-electric-records-highest-ever-monthly-registrations-in-january

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು ಐದು ಅತ್ಯುತ್ತಮ ದರ್ಜೆಯ ಉತ್ಪನ್ನಗಳಿಗೆ ವಿಸ್ತರಿಸಿದೆ. ಕಂಪನಿಯ ಪ್ರಮುಖ ಸ್ಕೂಟರ್ ಆಗಿರುವ ರೂ. 1,47,499 ಬೆಲೆಯ S1 Pro (2 ನೇ ಜನರೇಷನ್) ಸದ್ಯ ಹೆಚ್ಚಿನ ಬೇಡಿಕೆ ಕಂಪನಿಯ ಟಾಪ್ ಮಾಡಲ್ ಆಗಿದೆ. ಇದರ ಜೊತೆಗೆ ರೂ. 1,19,999 ಬೆಲೆಗೆ ಲಭ್ಯವಿರುವ S1 Air ಎರಡನೇ ಸ್ಥಾನದಲ್ಲಿ ಉತ್ತಮ ಗ್ರಾಹಕರನ್ನು ಸೆಳೆದಿದೆ.

ಮೇಲಿನ ಎರಡೂ ಸ್ಕೂಟರ್‌ಗಳ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಕಂಪನಿಯು S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳಲ್ಲಿ S1 X+, S1 X (3kWh), ಮತ್ತು S1 X (2kWh) ವೈವಿಧ್ಯಮಯ ಆದ್ಯತೆಗಳೊಂದಿಗೆ ಸವಾರರ ಅಗತ್ಯತೆಗಳನ್ನು ಪೂರೈಸುತ್ತಿವೆ. ಇವು ಕಂಪನಿಯಿಂದ ನೀಡಲಾಗುತ್ತಿರುವ ಅಗ್ಗದ ಸ್ಕೂಟರ್‌ಗಳಾಗಿದ್ದು, ಇವುಗಳ ಬೆಲೆಯು ಕೆಳಗಿನಂತಿವೆ.

ola-electric-records-highest-ever-monthly-registrations-in-january

S1 X+ ಪ್ರಸ್ತುತ ರೂ. 1,09,999 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದ್ದು, ಇದರ ಮೇಲೆ ಫ್ಲಾಟ್ ರೂ. 20,000 ಡಿಸ್ಕೌಂಟ್ ಆಗಿ ರೂ. 89,999 ನಲ್ಲಿ ಲಭ್ಯವಿದೆ. S1 X (3kWh) ಮತ್ತು S1 X (2kWh) ಬುಕಿಂಗ್ ಕೇವಲ ರೂ. 999 ಮಾತ್ರ, ಕ್ರಮವಾಗಿ ಈ ಎರಡು ಮಾದರಿಗಳು ರೂ. 99,999 ಮತ್ತು ರೂ 89,999 ರ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 31, 2024, 16:41 [IST]
English summary
Ola electric records highest ever monthly registrations in january
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+