Ola: ಸಂಕ್ರಾಂತಿ ಹಬ್ಬಕ್ಕೆ ರೂ. 15,000 ವರೆಗಿನ ಆಫರ್‌ಗಳನ್ನು ಘೋಷಿಸಿದ ಓಲಾ
ದೇಶದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕರಾದ ಓಲಾ ಎಲೆಕ್ಟ್ರಿಕ್ (Ola Electric) ಇಂದು ದೇಶಾದ್ಯಂತ ಸಂಕ್ರಾಂತಿ ಹಬ್ಬದ ಹಿನ್ನೆಲೆ ರೂ. 15,000 ವರೆಗಿನ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಜನವರಿ 15 ರವರೆಗೆ ಈ ಆಫರ್‌ಗಳು ಜಾರಿಯಲ್ಲಿರುತ್ತವೆ ಎಂದು ಓಲಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕೊಡುಗೆಗಳು ಓಲಾ S1 Pro ಮತ್ತು ಓಲಾ S1 Air ಖರೀದಿಯ ಮೇಲೆ ರೂ. 6,999 ವರೆಗಿನ ಉಚಿತ ವಿಸ್ತೃತ ಬ್ಯಾಟರಿ ವಾರಂಟಿ, ರೂ. 3,000 ವರೆಗಿನ ವಿನಿಮಯ ಬೋನಸ್ ಮತ್ತು ಆಕರ್ಷಕ ಹಣಕಾಸು ವ್ಯವಹಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಓಲಾ S1 X+ ಫ್ಲಾಟ್ ರೂ. 20,000 ರಿಯಾಯಿತಿಯೊಂದಿಗೆ ರೂ. 89,999 ಕ್ಕೆ ಗ್ರಾಹಕರಿಗೆ ಖರೀಗೆ ಲಭ್ಯವಿರುತ್ತದೆ.

ಖರೀದಿದಾರರು ಆಯ್ದ ಕ್ರೆಡಿಟ್ ಕಾರ್ಡ್ EMI ಗಳಲ್ಲಿ ರೂ. 5,000 ವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಉಳಿದಂತೆ ಇತರ ಹಣಕಾಸು ಕೊಡುಗೆಗಳಲ್ಲಿ ಶೂನ್ಯ (0) ಡೌನ್ ಪೇಮೆಂಟ್, ನೋ-ಕಾಸ್ಟ್ EMI, ಶೂನ್ಯ ಸಂಸ್ಕರಣಾ ಶುಲ್ಕ ಮತ್ತು 7.99% ರಷ್ಟು ಕಡಿಮೆ ಬಡ್ಡಿದರಗಳನ್ನು ಒಳಗೊಂಡಿರುತ್ತದೆ ಎಂದು ಓಲಾ ಹೇಳಿದೆ.
ಓಲಾ ಸ್ಕೂಟರ್‌ಗಳು: ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಸ್ಕೂಟರ್ ಪೋರ್ಟ್‌ಫೊಲಿಯೊವನ್ನು ಐದು ಉತ್ಪನ್ನಗಳಿಗೆ ವಿಸ್ತರಿಸಿದೆ. S1 Pro (2 ನೇ ತಲೆಮಾರಿನ) ಬೆಲೆ ರೂ. 1,47,499 ವಿದ್ದರೆ, S1 Air ರೂ. 1,19,999 ನಲ್ಲಿ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‌ಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

ಹೆಚ್ಚುವರಿಯಾಗಿ ವೈವಿಧ್ಯಮಯ ಆದ್ಯತೆಗಳೊಂದಿಗೆ ಸವಾರರ ಅವಶ್ಯಕತೆಗಳನ್ನು ಪೂರೈಸಲು ಓಲಾ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳೆಂದರೆ - S1 X+, S1 X (3kWh), ಮತ್ತು S1 X (2kWh) ಮಾದರಿಗಳಾಗಿವೆ. ಇವು ಕೂಡ ಇತ್ತೀಚೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ.
ಇನ್ನು S1 X (3kWh) ಮತ್ತು S1 X (2kWh) ಮಾದರಿಗಳನ್ನು ಬುಕ್ ಮಾಡಿಕೊಳ್ಳಲು ರೂ. 999 ಪಾವತಿಸಿದರೆ ಸಾಕೆಂದು ಓಲಾ ತಿಳಿಸಿದೆ. ಇನ್ನು ಈ ಎರಡೂ ಮಾದರಿಗಳ ಬೆಲೆಗಳನ್ನು ನೋಡುವುದಾದ್ರೆ ಕ್ರಮವಾಗಿ ರೂ. 99,999 ಮತ್ತು ರೂ. 89,999 ರ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುವುದಾಗಿ ಓಲಾ ಎಲೆಕ್ಟ್ರಿಕ ಹೇಳಿದೆ.

ಡಿಸೆಂಬರ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ನೋಂದಣಿಗಳು ದಾಖಲು: ಕಳೆದ ವರ್ಷ ಡಿಸೆಂಬರ್‌ನಲ್ಲಿ 30,219 ಓಲಾ ಇವಿ ಸ್ಕೂಟರ್‌ಗಳ ನೋಂದಣಿಗಳು ದಾಖಲಾಗಿರುವುದಾಗಿ ಓಲಾ ತಿಳಿಸಿದೆ. EV ದ್ವಿಚಕ್ರ ವಾಹನ ವಿಭಾಗದಲ್ಲಿ ಶೇ40 ರಷ್ಟು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡು (ವಾಹನ್ ಪೋರ್ಟಲ್ ಪ್ರಕಾರ) ಕಂಪನಿಯು ತನ್ನ ಅತ್ಯಧಿಕ ಮಾಸಿಕ ನೋಂದಣಿಗಳನ್ನು ಸಾಧಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ74 ರಷ್ಟು ಬೆಳವಣಿಗೆಯಾಗಿದೆ. ಹೆಚ್ಚುವರಿಯಾಗಿ, ಇದು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 83,963 ನೋಂದಣಿಗಳೊಂದಿಗೆ ಶೇ 48 ರಷ್ಟು ಬೆಳವಣಿಗೆಯನ್ನು ಮತ್ತು ಕಳೆದ ವರ್ಷದ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 68 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿರುವುದಾಗಿ ಓಲಾ ಪ್ರಕಟಿಸಿದೆ.

ಓಲಾ ಎಲೆಕ್ಟ್ರಿಕ್ ಕೇವಲ ಎರಡು ವರ್ಷಗಳ ಅವಧಿಯಲ್ಲಿ 4,00,000 ಸ್ಕೂಟರ್‌ಗಳ ಮಾರಾಟದ ಮೂಲಕ ಉದ್ಯಮದ ಮೊದಲ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ವರ್ಷದಲ್ಲಿ 2.65 ಲಕ್ಷ ನೋಂದಣಿಗಳನ್ನು (ವಾಹನ್ ಪೋರ್ಟಲ್ ಪ್ರಕಾರ) ದಾಖಲಿಸಿದ ಮೊದಲ EV ದ್ವಿಚಕ್ರ ವಾಹನ ತಯಾರಕರಾಗಿ ಓಲಾ ಎಲೆಕ್ಟ್ರಿಕ್ ಹೊರಹೊಮ್ಮಿದೆ.


Click it and Unblock the Notifications








