Ola: ವರವಾದ ವಿಜಯದಶಮಿ.. ಗಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಓಲಾ ಇ-ಸ್ಕೂಟರ್‌ಗಳು ಮಾರಾಟ!

ಬೆಂಗಳೂರು (Bengaluru) ಮೂಲದ ಓಲಾ ಎಲೆಕ್ಟ್ರಿಕ್ (Ola Electric), ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ವಿವಿಧ ಎಸ್1 ಸರಣಿ (S1 Series) ಎಲೆಕ್ಟ್ರಿಕ್ ಸ್ಕೂಟರ್‌ಗಳು ಖರೀದಿಗೆ ಲಭ್ಯವಿವೆ. ಈ ವಿಜಯದಶಮಿ ಓಲಾಗೆ ವರವಾಗಿದ್ದು, ದಾಖಲೆ ಸಂಖ್ಯೆಯಲ್ಲಿ 'ಎಸ್1' ಇ-ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆಯಲ್ಲಿ ಕಂಪನಿಯು ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಸರ್ಕಾರಿ ಸ್ವಾಮ್ಯದ ವಾಹನ ಪೋರ್ಟಲ್ (Vahan portal) ಪ್ರಕಾರ, ಈ ಅಕ್ಟೋಬರ್ 14 ರವರೆಗೆ ಓಲಾ ಕಂಪನಿಯು ಬರೋಬ್ಬರಿ 15,672 ಯುನಿಟ್ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಶೇಕಡ 34% ಮಾರುಕಟ್ಟೆ ಪಾಲವನ್ನು ಹೊಂದಿದೆ. ಕಳೆದ ತಿಂಗಳ (ಸೆಪ್ಟೆಂಬರ್‌ - 2024) ಮಾರಾಟಕ್ಕೆ ಹೋಲಿಸಿದರೆ, ಇದು ಉತ್ತಮವಾದ ಬೆಳವಣಿಗೆಯಾಗಿದೆ.

Ola Electric Sales 15 672 Unit E-Scooters Upto October 14 Market Share Growth 34 Percent

ಸೆಪ್ಟೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ 23,965 ಯುನಿಟ್ ಎಸ್1 ಸರಣಿ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿತ್ತು. ಈ ಮೂಲಕ ಶೇಕಡ 27% ಮಾರುಕಟ್ಟೆ ಪಾಲನ್ನು ಮಾತ್ರ ಹೊಂದಿತ್ತು. ಓಲಾ ಕಂಪನಿಯು ಜಾರಿಗೊಳಿಸಿದ ಹಲವು ಗ್ರಾಹಕ ಸ್ನೇಹಿ ಕ್ರಮಗಳಿಂದ ಅಕ್ಟೋಬರ್ ಮೊದಲರ್ಧದಲ್ಲಿಯೇ ಈ ಪರಿಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ತಿಂಗಳಾರಂಭದಲ್ಲಿ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಅಧಿಕಗೊಳಿಸಲು ಓಲಾ ಎಲೆಕ್ಟ್ರಿಕ್, 'ಬಿಗ್ಗೆಸ್ಟ್ ಓಲಾ ಸೀಸನ್ ಸೇಲ್‌' ಎಂಬ ಯೋಜನೆ ಪ್ರಾರಂಭಿಸಿತ್ತು. ಇದರಡಿ ವಿವಿಧ ಹಣಕಾಸು ಪ್ರಯೋಜನಗಳನ್ನು ಒದಗಿಸಲಾಗಿತ್ತು. ಜೊತೆಗೆ 'ಹೈಪರ್ ಸರ್ವಿಸ್' ಹೆಸರಿನ ಅಭಿಯಾನವು ಓಲಾ ಕಂಪನಿ ಮೇಲೆ ಗ್ರಾಹಕರ ವಿಶ್ವಾಸವನ್ನು ಇಮ್ಮಡಿಗೊಳ್ಳಿಸಿದೆ.

ಹೈಪರ್ ಸರ್ವಿಸ್ ಅಭಿಯಾನದಡಿ ಓಲಾ ಎಲೆಕ್ಟ್ರಿಕ್, 2024ರ ಡಿಸೆಂಬರ್ ಅಂತ್ಯದೊಳಗೆ ಸರ್ವಿಸ್ ಸೆಂಟರ್‌ಗಳ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ನೆಟ್‌ವರ್ಕ್‌ ಪಾರ್ಟ್ನರ್ ಪ್ರೋಗ್ರಾಮ್ ಭಾಗವಾಗಿ 2025ರೊಳಗೆ 10,000 ಸೇಲ್ಸ್ (ಮಾರಾಟ) ಹಾಗೂ ಸರ್ವಿಸ್ ಪಾರ್ಟ್ನರ್‌ಗಳನ್ನು (ಸೇವಾ ಪಾಲುದಾರ) ಹೊಂದಲು ಬಯಸಿದೆ. ಅಲ್ಲದೆ, ದೇಶಾದ್ಯಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡಲು 1 ಲಕ್ಷ ಥರ್ಡ್-ಪಾರ್ಟಿ ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡಲು ಸಹ ಉದ್ದೇಶಿಸಿದೆ.

ಪ್ರಸ್ತುತ ದೇಶೀಯವಾಗಿ ಖರೀದಿಗೆ ಲಭ್ಯವಿರುವ ಓಲಾ ಎಸ್1ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ರೂ.87,999 ರಿಂದ ರೂ.96,999 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಓಲಾ ಎಸ್1 ಏರ್ ರೂ.1.07 ಲಕ್ಷ ಬೆಲೆಯನ್ನು ಹೊಂದಿದ್ದರೆ, ಓಲಾ ಎಸ್1 ಪ್ರೊ ರೂ.1.35 ಲಕ್ಷ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಕಳೆದ ಆಗಸ್ಟ್‌ನಲ್ಲಿ ಓಲಾ ಎಲೆಕ್ಟ್ರಿಕ್ ರೋಡ್‌ಸ್ಟರ್ (Roadster) ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಬೈಕ್‌ನ್ನು ಮಾರಾಟಕ್ಕೆ ತಂದಿತ್ತು. ಇದು ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್ ಹಾಗೂ ರೋಡ್‌ಸ್ಟರ್ ಪ್ರೊ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ. ರೂ.74,999 ರಿಂದ ರೂ.2,49,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, October 15, 2024, 11:37 [IST]
English summary
Ola electric 15672 unit electric scooter sales in upto october 14 market share growth 34 percent
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+