ಓಲಾ ಸ್ಕೂಟರ್‌ಗಳ ಮೇಲೆ 15,000 ರೂ. ರಿಯಾಯಿತಿ: ಈಗ ಬಿಟ್ಟರೆ ಮತ್ತೆ ಸಿಗುವುದಿಲ್ಲ!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಇತ್ತೀಚಿನ ದಿನಗಳಲ್ಲಿ ಭಾರೀ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಈ ಯಶಸ್ಸಿಗೆ ಭಾಗಶಃ ಕಂಪನಿ ನೀಡುವ ಪ್ರತಿ ತಿಂಗಳ ರಿಯಾಯಿತಿ ಕಾರಣವಾಗಿದೆ ಎಂದು ಹೇಳಬಹುದು. ವಾಹನ್ ಪೋರ್ಟಲ್ ಪ್ರಕಾರ, ಓಲಾ ಎಲೆಕ್ಟ್ರಿಕ್ ಕಳೆದ ಮೇ ತಿಂಗಳಲ್ಲಿ ಬರೋಬ್ಬರಿ 37,191 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅದೇ 2023ರ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ (35,000 ಯುನಿಟ್) ಶೇಕಡ 6.26% ಬೆಳವಣಿಗೆ ಸಾಧಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಟ್ಟಾರೆ ಶೇ49 ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಇದೇ ಮಾರಾಟದ ಜೋರನ್ನು ಮುಂದುವರಿಸಿಲು ಓಲಾ ಎಲೆಕ್ಟ್ರಿಕ್ ಸೀಮಿತ ಅವಧಿಗೆ ಇದೀಗ 15,000 ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ. ಜೂನ್ 20 ರಿಂದ 26 ರ ನಡುವೆ ಮಾನ್ಯವಾಗಿರುವ ಈ ಆಫರ್‌ಗಳು ಓಲಾ ಎಸ್ 1 ಶ್ರೇಣಿಯ (ola s1 range) ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅನ್ವಯಿಸುತ್ತವೆ.

ರಿಯಾಯಿತಿ ವಿವರಗಳನ್ನು ನೋಡುವುದಾದ್ರೆ, ಓಲಾ ಎಸ್ 1 ಎಕ್ಸ್ + ಮೇಲೆ 5,000 ರೂ.ಗಳ ಫ್ಲಾಟ್ ರಿಯಾಯಿತಿಯೊಂದಿಗೆ ಖರೀದಿಸಬಹುದು. ಹಾಗೆಯೇ 5,000 ರೂ.ಗಳವರೆಗೆ ವಿನಿಮಯ ಬೋನಸ್ (exchange bonus) ಅನ್ನು ಸಹ ಪಡೆಯಬಹುದು. ಕಂಪನಿಯು ಜನಪ್ರಿಯ ಎಸ್ 1 ಏರ್ ಮತ್ತು ಇತ್ತೀಚಿನ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ 5,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿ ಮತ್ತು 2,999 ರೂ.ಗಳ ಮೌಲ್ಯದ ಉಚಿತ ಓಲಾ ಕೇರ್ + ಅನ್ನು ಸಹ ಒದಗಿಸುತ್ತಿದೆ.
ಇತ್ತೀಚೆಗೆ ಪರಿಚಯಿಸಲಾದ ಓಲಾ ಎಸ್ 1 ಎಕ್ಸ್ ಸ್ಕೂಟರ್ ವಿತರಣೆಗಳು ಕಳೆದ ತಿಂಗಳು ಪ್ರಾರಂಭವಾಗಿದೆ. ಇದನ್ನು 2 ಕಿಲೋವ್ಯಾಟ್, 3 ಕಿಲೋವ್ಯಾಟ್ ಮತ್ತು 4 ಕಿಲೋವ್ಯಾಟ್ ಎಂಬ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆಗಳು 2 ಕಿಲೋವ್ಯಾಟ್ ರೂಪಾಂತರಕ್ಕೆ 74,999 ರೂ. ((ಎಕ್ಸ್ ಶೋರೂಂ)) ಮತ್ತು ಟಾಪ್-ಸ್ಪೆಕ್ ಮಾದರಿಗೆ (ಎಕ್ಸ್ ಶೋರೂಂ) 99,999 ರೂ. ಬೆಲೆಯಿದೆ.

ಹೊಸ ತಲೆಮಾರಿನ ಓಲಾ ಎಸ್ 1 ಪ್ರೊ ಬೆಲೆ 1,29,999 ರೂ., ಎಸ್ 1 ಏರ್ ಬೆಲೆ 1,04,999 ರೂ., ಎಸ್ 1 ಎಕ್ಸ್ + ಬೆಲೆ 89,999 ರೂ (ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ). ಓಲಾ ಎಲೆಕ್ಟ್ರಿಕ್ ತನ್ನ ಸಂಪೂರ್ಣ ಸ್ಕೂಟರ್‌ಗಳ ಬ್ಯಾಟರಿಗಳ ಮೇಲೆ ಎಂಟು ವರ್ಷಗಳ ಅಥವಾ 80,000 ಕಿ.ಮೀ ವಾರಂಟಿಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತಿದೆ.
ಓಲಾ ಎಸ್ 1 ಶ್ರೇಣಿಯ ಗ್ರಾಹಕರು 4,999 ರೂ.ಗಳಿಗೆ ಒಂದು ಲಕ್ಷ ಕಿ.ಮೀ.ವರೆಗೆ ಮತ್ತು 12,999 ರೂ. ಪಾವತಿಸುವ ಮೂಲಕ 1.25 ಲಕ್ಷ ಕಿ.ಮೀ.ವರೆಗೆ ವಾರಂಟಿಯನ್ನು ವಿಸ್ತರಿಸಿಕೊಳ್ಳಬಹುದು. ಇದಲ್ಲದೆ, ಓಲಾ ಎಲೆಕ್ಟ್ರಿಕ್ 3 ಕಿಲೋವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ಅಕ್ಸೆಸೊರಿಯಾಗಿ ಮಾರಾಟ ಮಾಡುತ್ತದ್ದು, ಇದನ್ನು 29,999 ರೂ.ಗೆ ಖರೀದಿಸಬಹುದು.

ಓಲಾ ಎಸ್1 ಎಕ್ಸ್‌ನ 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪೂರ್ತಿ ಚಾರ್ಜ್ ನಲ್ಲಿ 151 ಕಿ.ಮೀ ಓಡಲಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. 4 ಕೆಡಬ್ಲ್ಯೂಹೆಚ್ ಬ್ಯಾಟರಿ ಒಳಗೊಂಡಿರುವ ಆವೃತ್ತಿಯು ಪೂರ್ತಿ ಚಾರ್ಜ್‌ನಲ್ಲಿ 190 ಕಿಲೋಮೀಟರ್ ಕ್ರಮಿಸುತ್ತದೆ.
3 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಹೊಂದಿರುವ ಮಿಡ್ ಲೆವೆಲ್ ಮಾಡೆಲ್ (ಮಧ್ಯಮ ಆವೃತ್ತಿ) ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 151 ಕಿ.ಮೀ ರೇಂಜ್ ನೀಡುತ್ತದೆ. 90 ಕಿ.ಮೀ ಟಾಪ್ ಸ್ವೀಡ್ (ಗರಿಷ್ಠ ವೇಗ) ಹೊಂದಿದೆ.


Click it and Unblock the Notifications








