Ola: ಸಿಹಿಸುದ್ದಿ.. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಭಾರೀ ಇಳಿಕೆ, ರೂ.84,999ದಿಂದ ಶುರು
ಬೆಂಗಳೂರು ಮೂಲದ ಓಲಾ (Ola) ಪ್ರಸಿದ್ಧ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಶುಕ್ರವಾರ ತನ್ನ ಎಸ್1 (S1) ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ದರವನ್ನು ದೊಡ್ಡಮಟ್ಟದಲ್ಲಿ ಇಳಿಕೆ ಮಾಡಲಾಗಿದೆ ಎಂದು ಘೋಷಿಸಿದೆ. ಪರಿಷ್ಕೃತ ಬೆಲೆಗಳು ಈ ಫೆಬ್ರವರಿಯಲ್ಲಿ ಮಾತ್ರ ಮಾನ್ಯವಾಗಿರಲಿದೆ ಎಂದು ವರದಿಯಾಗಿದೆ.
ಓಲಾ ಎಸ್1 ಎಕ್ಸ್ ಪ್ಲಸ್, ಎಸ್1 ಏರ್ ಹಾಗೂ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ರೂ.25,000 ವರೆಗೆ ಕಡಿಮೆಗೊಳಿಸಲಾಗಿದೆ. ಈ ಹಿಂದೆ ರೂ.1,09,999 ಇದ್ದ ಓಲಾ ಎಸ್1 ಎಕ್ಸ್ ಪ್ಲಸ್ ಸ್ಕೂಟರ್ ದರ ರೂ.25,000 ಇಳಿಕೆಯಾಗಿ ರೂ.84,999 (ಎಕ್ಸ್ ಶೋರೂಂ) ಆಗಿದೆ. ಓಲಾ ಎಸ್1 ಏರ್ ಬೆಲೆ ರೂ.15,000 ಕಡಿತಗೊಂಡು ರೂ.1,19,999 ರಿಂದ 1,04,999 ಬಂದಿದೆ.

ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ದರ ರೂ.17,500 ಇಳಿದು, ರೂ.1,47,499 ರಿಂದ ರೂ.1,29,999 ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಬೆಲೆಯನ್ನು ಪರಿಷ್ಕರಿಸುತ್ತಿವೆ. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನೆಯಲ್ಲಿ ಬ್ಯಾಟರಿಗಾಗಿ ಸುಮಾರು 40% ವ್ಯಯಿಸಬೇಕಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಭವಿಷ್ಯದಲ್ಲಿ ಬ್ಯಾಟರಿ ಸೆಲ್ ದರಗಳು ಮತ್ತಷ್ಟು ಇಳಿಕೆಯಾಗಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಓಲಾ ಮಾರಾಟದ ಅಂಕಿ ಅಂಶದ ಕುರಿತು ಗಮನ ಹರಿಸುವುದಾದರೆ ಕಳೆದ ಜನವರಿಯಲ್ಲಿ ಕಂಪನಿಯು 32,252 ಯುನಿಟ್ ಸ್ಕೂಟರ್‌ಗಳನ್ನು ಮಾರಾಟಗೊಳಿಸಿ, 2023ರ ಇದೇ ಅವಧಿಗೆ ಹೋಲಿಸಿದರೆ (18,353) ವರ್ಷದಿಂದ ವರ್ಷಕ್ಕೆ ಶೇಕಡ 75.73% ಬೆಳವಣಿಗೆ ಸಾಧಿಸಿದೆ.

ಓಲಾ ಎಸ್1 ಎಕ್ಸ್ ಪ್ಲಸ್ (Ola S1 X +) ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದರಲ್ಲಿ 3 ಕೆಡಬ್ಲ್ಯೂಹೆಚ್ (Kwh) ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಪೂರ್ತಿ ಚಾರ್ಜ್ ನಲ್ಲಿ 151 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ ಗರಿಷ್ಠ 90 ಕಿ.ಮೀ ವೇಗವನ್ನು ಪಡೆಯಲಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಫಂಕ್, ಲಿಕ್ವಿಡ್ ಸಿಲ್ವರ್, ಮಿಡ್‌ನೈಟ್, ವೈಟ್, ರೆಡ್ ವೆಲಾಸಿಟಿ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಲಭ್ಯವಿದೆ.
ಹೊಸ ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್, 3 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ಕ್ರಮಿಸುತ್ತದೆ. ಇದರಲ್ಲಿ ಉಪಯೋಗಿಸಿರುವ ಹಬ್ ಮೋಟಾರ್ 6 ಕೆಡಬ್ಲ್ಯೂ ಪವರ್ (ಶಕ್ತಿ) ಉತ್ಪಾದಿಸುತ್ತದೆ. ಜೊತೆಗೆ 90 ಕೆಎಂಪಿಹೆಚ್ ಟಾಪ್ ಸ್ವೀಡ್ ಹೊಂದಿದ್ದು, ಕೇವಲ 5.7 ಸೆಕೆಂಡುಗಳಲ್ಲಿ 0 - 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಓಲಾ ಎಸ್1 ಪ್ರೊ (Ola S1 Pro) ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡುವುದಾದರೆ, ಇದು 4 ಕೆಡಬ್ಲ್ಯೂಹೆಚ್ (Kwh) ಬ್ಯಾಟರಿ ಪ್ಯಾಕ್ ಪಡೆದಿದೆ. ಭರ್ತಿ ಚಾರ್ಜ್ ನಲ್ಲಿ 195 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 120 ಕೆಎಂಪಿಹೆಚ್ ಟಾಪ್ ಸ್ವೀಡ್ ಹೊಂದಲಿದ್ದು, ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 11 ಕೆಡಬ್ಲ್ಯೂ (kW) ಪವರ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








