ಓಲಾದ ಮೊದಲ ರೋಡ್‌ಸ್ಟರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: ಯಾರು ಊಹಿಸಲಾಗದಷ್ಟು ಕಡಿಮೆ ಬೆಲೆ.. ವಿಶೇಷತೆಗಳೇನು?

ದೇಶದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ 'ಎಸ್1' ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಸದ್ಯ ಮೋಟಾರ್‌ಸೈಕಲ್ ವಿಭಾಗವನ್ನು ಪ್ರವೇಶಿಸಿದ್ದು, ಇಂದು (ಗುರುವಾರ) ಓಲಾ ಕಂಪನಿ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ 'ಸಂಕಲ್ಪ್-2024' ಕಾರ್ಯಕ್ರಮ ಏರ್ಪಡಿಸಿದೆ. ಅದರ ಭಾಗವಾಗಿ ಹೊಚ್ಚ ಹೊಸ ರೋಡ್‌ಸ್ಟರ್ (Roadster) ಸರಣಿಯ ಮೂರು ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್‌ಗಳು ಯಾರು ಊಹಿಸಲಾಗದಷ್ಟು ಕಡಿಮೆ ಬೆಲೆಯನ್ನು ಹೊಂದಿವೆ.

ನೂತನ ಓಲಾ ರೋಡ್‌ಸ್ಟರ್ (Ola Roadster) ಎಲೆಕ್ಟ್ರಿಕ್ ಬೈಕ್ ಮೂರು ರೂಪಾಂತರ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟಕ್ಕೆ ಬಂದಿದೆ. ಅವುಗಳೆಂದರೆ, ರೋಡ್‌ಸ್ಟರ್ (Roadster), ರೋಡ್‌ಸ್ಟರ್ ಎಕ್ಸ್ (Roadster X) ಹಾಗೂ ರೋಡ್‌ಸ್ಟರ್ ಪ್ರೊ (Roadster Pro). ಇವು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ರೋಡ್‌ಸ್ಟರ್ ಪ್ರೊ ರೂಪಾಂತರದ ವಿತರಣೆಯು ಮುಂದಿನ ವರ್ಷ ದೀಪಾವಳಿಯಲ್ಲಿ ಶುರುವಾಗಲಿದೆ. ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ರೂಪಾಂತರಗಳು ಜನವರಿ 2025ರಿಂದ ಗ್ರಾಹಕರಿಗೆ ಲಭ್ಯವಾಗಲಿವೆ.

Ola First Electric Bike Roadster Series Launched In India Rs 74 999 Price Range Features details

ಹೊಸ ಓಲಾ ರೋಡ್‌ಸ್ಟರ್ ಎಕ್ಸ್ (Ola Roadster X) ರೂಪಾಂತರ ಹಲವು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯುತ್ತದೆ. ಅದಕ್ಕೆ ತಕ್ಕಂತೆ ಬೆಲೆಯನ್ನು ಕೂಡ ಹೊಂದಿದೆ. 2.5 ಕೆಡಬ್ಲ್ಯೂಹೆಚ್ ಬ್ಯಾಟರಿ ಹೊಂದಿರುವ ಮೋಟಾರ್‌ಸೈಕಲ್ ರೂ.74,999, 3.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಬೈಕ್ ರೂ.84,999 ಮತ್ತು 4.5 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಒಳಗೊಂಡಿರುವ ಮೋಟಾರ್‌ಸೈಕಲ್ ರೂ.99,999 ಎಕ್ಸ್ ಶೋರೂಂ ದರವನ್ನು ಹೊಂದಿದೆ.

ಈ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸಾಕಷ್ಟು ಅತ್ಯಾಧುನಿಕವಾಗಿದೆ. ಸಂಪೂರ್ಣ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 124 ಕೆಎಂ/ಹೆಚ್ ಟಾಪ್ ಸ್ಪೀಡ್ ಹೊಂದಿದೆ. ಕೇವಲ 2.8 ಸೆಕೆಂಡುಗಳಲ್ಲಿ 0-40 ಕೆಎಂ/ಹೆಚ್ ವೇಗವನ್ನು ಪಡೆಯಲಿದೆ. 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 4.3-ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Ola First Electric Bike Roadster Series Launched In India Rs 74 999 Price Range Features details

ಹೊಚ್ಚ ಹೊಸ ಓಲಾ ರೋಡ್‌ಸ್ಟರ್ (Ola Roadster) ರೂಪಾಂತರದ 3.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪಡೆದಿರುವ ಬೈಕ್ ರೂ.1,04,999, 4.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮೋಟಾರ್‌ಸೈಕಲ್ ರೂ.1,19,999 ಮತ್ತು 6 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಬೈಕ್ ರೂ.1,39,999 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಓಲಾ ರೋಡ್‌ಸ್ಟರ್ ರೋಡ್‌ಸ್ಟರ್ ಎಲೆಕ್ಟ್ರಿಕ್ ಬೈಕ್ ಸಹ ಹಲವು ವಿಶೇಷತೆಗಳನ್ನು ಹೊಂದಿದೆ. ಇದು ಭರ್ತಿ ಚಾರ್ಜ್‌ನಲ್ಲಿ 248 ಕಿಲೋಮೀಟರ್‌ವರೆಗೆ ಓಡುತ್ತದೆ. 126 ಕೆಎಂ/ಹೆಚ್ ಟಾಪ್ ಸ್ಪೀಡ್ ಪಡೆದಿದೆ. 2.2 ಸೆಕೆಂಡುಗಳಲ್ಲಿ 0-40 ಕೆಎಂ/ಹೆಚ್ ವೇಗವನ್ನು ಹೊಂದಲಿದೆ. ಹೈಪರ್, ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳಂತಹ ಹಲವು ವೈಶಿಷ್ಟ್ಯಗಳಿವೆ.

Ola First Electric Bike Roadster Series Launched In India Rs 74 999 Price Range Features details

ಓಲಾ ರೋಡ್‌ಸ್ಟರ್ ಪ್ರೊ (Ola Roadster Pro) ರೂಪಾಂತರದ 8 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮೋಟಾರ್‌ಸೈಕಲ್ ರೂ.1,99,999 ಹಾಗೂ ಶಕ್ತಿಯುತ 16 ಕೆಡಬ್ಲ್ಯೂಹೆಚ್ ಬ್ಯಾಟರಿ ಪಡೆದಿರುವ ಬೈಕ್ ರೂ.2,49,999 ಎಕ್ಸ್ ಶೋರೂಂ (Ex - Showroom) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಓಲಾ ರೋಡ್‌ಸ್ಟರ್ ಪ್ರೊ ಪ್ರೀಮಿಯಂ ಬೈಕ್ ಆಗಿದ್ದು, ಬಹಳಷ್ಟು ಅತ್ಯಾಧುನಿಕವಾಗಿದೆ. ಪೂರ್ತಿ ಚಾರ್ಜ್‌ನಲ್ಲಿ 579 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 194 ಕೆಎಂ/ಹೆಚ್ ಟಾಪ್ ಸ್ಪೀಡ್ ಹೊಂದಿದೆ. ಕೇವಲ 1.2 ಸೆಕೆಂಡುಗಳಲ್ಲಿ 0-40 ಕೆಎಂ/ಹೆಚ್ ವೇಗವನ್ನು ಹೊಂದಲಿದೆ. ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 10-ಇಂಚಿನ ಟಚ್‌ಸ್ಕ್ರೀನ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 15, 2024, 14:55 [IST]
English summary
Ola first electric bike roadster series launched in india rs 74999 price range features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+