Ola: ಗುಡ್‌ನ್ಯೂಸ್... ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.25,000 ರಿಯಾಯಿತಿ, ರೂ.84,999ದಿಂದ ಆರಂಭ
ಬೆಂಗಳೂರು (Bengaluru) ಮೂಲದ ಓಲಾ (Ola) ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಫೆಬ್ರವರಿಯಲ್ಲಿ ತನ್ನ ಎಸ್1 (S1) ಸರಣಿ ಸ್ಕೂಟರ್‌ಗಳಿಗೆ ನೀಡಿದ್ದ ರಿಯಾಯತಿ ಕೊಡುಗೆಯನ್ನು ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಓಲಾ ಎಲೆಕ್ಟ್ರಿಕ್ (Ola Electric) ಮಾರಾಟಗೊಳಿಸುವ ಎಸ್1 ಎಕ್ಸ್ ಪ್ಲಸ್, ಎಸ್1 ಏರ್ ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.25,000 ವರೆಗೆ ಡಿಸ್ಕೌಂಟ್ ಆಫರ್ ಲಭ್ಯವಿದೆ. ಟಾಪ್ ಎಂಡ್ (ಗರಿಷ್ಠ ಶ್ರೇಣಿ) ಮಾದರಿ ಓಲಾ ಎಸ್1 ಪ್ರೊ ಇ-ಸ್ಕೂಟರ್, ರೂ.17,500 ಡಿಸ್ಕೌಂಟ್‌ನೊಂದಿಗೆ ರೂ.1,29,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಹಿಂದೆ, ರೂ.1,47,499 ದರವನ್ನು ಪಡೆದಿತ್ತು.

ಓಲಾದ ಮಿಡ್ ರೇಂಜ್ (ಮಧ್ಯಮ ಶ್ರೇಣಿ) ಸ್ಕೂಟರ್ ಎಸ್1 ಏರ್ (S1 Air)ಗೂ ರಿಯಾಯಿತಿ ಸೌಲಭ್ಯವನ್ನು ಮುಂದುವರಿಸಲಾಗಿದ್ದು, ಫೆಬ್ರವರಿ ರೀತಿಯಲ್ಲಿಯೇ ರೂ.15,000 ಡಿಸ್ಕೌಂಟ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1,04,999 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಮೊದಲು ದೇಶೀಯ ಗ್ರಾಹಕರಿಗೆ ರೂ.1,19,999 ದರಕ್ಕೆ ಖರೀದಿಗೆ ಸಿಗುತ್ತಿತ್ತು.
ಎಂಟ್ರಿ ಲೆವೆಲ್ (ಆರಂಭಿಕ) ಮಾದರಿಯಾಗಿರುವ ಓಲಾ ಎಸ್1 ಎಕ್ಸ್ ಪ್ಲಸ್ (Ola S1 X+) ಎಲೆಕ್ಟ್ರಿಕ್ ಸ್ಕೂಟರ್ ಕೂಡ ದೊಡ್ಡಮಟ್ಟದಲ್ಲಿ ರಿಯಾಯಿತಿ ಕೊಡುಗೆಯನ್ನು ಹೊಂದಿದ್ದು, ರೂ.25,000 ಡಿಸ್ಕೌಂಟ್ ಪಡೆದಿದೆ. ಇದರಿಂದಾಗಿ ರೂ.1,09,999 ಬೆಲೆಗೆ ಮಾರಾಟವಾಗುತ್ತಿದ್ದ ಈ ಸ್ಕೂಟರ್ ದರ ಕೇವಲ ರೂ.84,999 (ಎಕ್ಸ್ ಶೋರೂಂ) ಆಗಿದೆ.

ಈ ಓಲಾ ಎಸ್1 ಸರಣಿಯ ಒಂದೊಂದೆ ಸ್ಕೂಟರ್ ವಿಶೇಷತೆಗಳ ಬಗ್ಗೆ ಮಾತನಾಡುವದಾದರೆ, ಎಸ್1 ಎಕ್ಸ್ ಪ್ಲಸ್ (S1 X +) ಇ-ಸ್ಕೂಟರ್ 3 ಕೆಡಬ್ಲ್ಯೂಹೆಚ್ (Kwh) ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ಕ್ರಮಿಸುತ್ತದೆ. ಗಂಟೆಗೆ ಗರಿಷ್ಠ 90 ಕಿ.ಮೀ ವೇಗವನ್ನು ಪಡೆಯಲಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್, 3 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಪಡೆದಿದೆ. ಭರ್ತಿ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿರುವ ಹಬ್ ಮೋಟಾರ್ 6 ಕೆಡಬ್ಲ್ಯೂ (Kw) ಪವರ್ (ಶಕ್ತಿ) ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 90 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಪಡೆಯಲಿದೆ.

ಓಲಾ ಎಸ್1 ಪ್ರೊ (Ola S1 Pro) ಶಕ್ತಿಯುತ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, 4 ಕೆಡಬ್ಲ್ಯೂಹೆಚ್ (Kwh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಪೂರ್ತಿ ಚಾರ್ಜ್ ನಲ್ಲಿ 195 ಕಿಲೋಮೀಟರ್ ಓಡುತ್ತದೆ. 120 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಹೊಂದಲಿದ್ದು, ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್ 11 ಕೆಡಬ್ಲ್ಯೂ (kW) ಪವರ್ ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








