Ola: ಯಾರು ಊಹಿಸಿರಲಿಲ್ಲ.. ಭಾರೀ ಸಂಖ್ಯೆಯಲ್ಲಿ ಓಲಾ ಇ-ಸ್ಕೂಟರ್‌ಗಳು ಮಾರಾಟ, ಕ್ಯೂ ನಿಂತ ಗ್ರಾಹಕರು!
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ನಂಬರ್ 1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಕಂಪನಿ ಮಾರಾಟಗೊಳಿಸುವ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ದೇಶೀಯ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ 'ಓಲಾ' ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಪೈಪೋಟಿ ನೀಡುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕೇಂದ್ರ ಸರ್ಕಾರ ನಿರ್ವಹಿಸುವ ವಾಹನ್ ವೆಬ್‌ಸೈಟ್ ಪ್ರಕಾರ, ಓಲಾ ಎಲೆಕ್ಟ್ರಿಕ್ ಜನವರಿಯಿಂದ ಡಿಸೆಂಬರ್ 15, 2024 ರವರಿಗೆ ಬರೋಬ್ಬರಿ 4 ಲಕ್ಷ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. 2023ಕ್ಕೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 50% ಕ್ಕಿಂತ ಅಧಿಕ ಪ್ರಗತಿಯನ್ನು ಸಾಧಿಸಿದೆ.

2021 ರ ಡಿಸೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್, ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಆರಂಭಿಸಿತ್ತು. ಇಲ್ಲಿವರೆಗೂ 7.77 ಲಕ್ಷ ಯುನಿಟ್ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇಕಡ 30% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಪ್ರಬಲ ಪ್ರತಿಸ್ಪರ್ಧಿಗಳಾದ ಟಿವಿಎಸ್, ಬಜಾಜ್ ಹಾಗೂ ಎಥರ್ ಕಂಪನಿಗಳನ್ನು ಹಿಂದಿಕ್ಕಿದೆ.
ಆದರೂ, ಈ ವರ್ಷದ ಮಾರಾಟದಲ್ಲಿ ಓಲಾ ಎಲೆಕ್ಟ್ರಿಕ್ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಕಳೆದ ತಿಂಗಳು (ನವೆಂಬರ್-2024) ಓಲಾ ಮಾರಾಟ ತೀವ್ರತರವಾಗಿ ಕುಸಿತವಾಗಿದೆ. ಅದು ಶೇಕಡ 40% ಇಳಿಕೆಯಾಗಿದೆ. ಹಾಗೆಯೇ ಎದುರಾಳಿ ಕಂಪನಿಗಳಾದ ಟಿವಿಎಸ್ (ಶೇಕಡ 13.4%) ಹಾಗೂ ಬಜಾಜ್ (ಶೇಕಡ 12%) ಕೂಡ ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಿವೆ.

ಸದ್ಯ ಓಲಾ ಎಲೆಕ್ಟ್ರಿಕ್ ವಿವಿಧ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ 'ಎಸ್1 ಎಕ್ಸ್' ಭಾರಿ ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತದೆ. ಇದು ರೂ.74,999 ಆರಂಭಿಕ ದರವನ್ನು ಹೊಂದಿದ್ದು, ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 95 ರಿಂದ 193 ಕಿಲೋಮೀಟರ್‌ವರೆಗೂ ಓಡುತ್ತದೆ.
'ಓಲಾ ಎಸ್1 ಏರ್' ಮಿಡ್-ಲೆವೆಲ್ ಮಾಡೆಲ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.07 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 151 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ. 'ಓಲಾ ಎಸ್1 ಪ್ರೊ' ಟಾಪ್ ಎಂಡ್-ಲೆವೆಲ್ ಮಾಡೆಲ್ ಎಂದೇ ಹೆಸರುವಾಗಿದೆ. ಇದು ರೂ.1.14 ಲಕ್ಷ ದರವನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 195 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ.
ಇನ್ನು, ಓಲಾ ಎಲೆಕ್ಟ್ರಿಕ್ 'ಎಸ್1' ಸೀರೀಸ್ ಇ-ಸ್ಕೂಟರ್ ಮಾರಾಟದಲ್ಲಿಯೇ ಈ ಪರಿಪ್ರಮಾಣದಲ್ಲಿ ಯಶಸ್ಸು ಸಾಧಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಓಲಾ ಕಂಪನಿ ಆಗಸ್ಟ್‌ನಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೋಡ್‌ಸ್ಟರ್‌ನ್ನು ಮಾರಾಟಕ್ಕೆ ತಂದಿತ್ತು. ಈ ಬೈಕ್‌ಗಳ ವಿತರಣೆ ಶುರುವಾದ ಮೇಲೆ ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನೀರಿಕ್ಷೆಯಿದೆ. ಈ ಮೋಟಾರ್‌ಸೈಕಲ್ ರೂಪಾಂತರಗಳಿಗೆ ಅನುಗುಣವಾಗಿ ರೂ.74,999 ದಿಂದ ರೂ.99,999 (ಎಕ್ಸ್ ಶೋರೂಂ) ದರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








