Ola: ಡಿಸೆಂಬರ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಓಲಾ ಇವಿ ಸ್ಕೂಟರ್ ನೋಂದಣಿಗಳು ದಾಖಲು

ಬೆಂಗಳೂರು ಮೂಲದ Ola ಎಲೆಕ್ಟ್ರಿಕ್ ಕಂಪನಿಯು ಕಳೆದ ಡಿಸೆಂಬರ್‌ನಲ್ಲಿ 30,219 ನೋಂದಣಿಗಳನ್ನು ದಾಖಲಿಸಿದೆ. EV ದ್ವಿಚಕ್ರ ವಾಹನ ವಿಭಾಗದಲ್ಲಿ ಶೇ40 ರಷ್ಟು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡು (ವಾಹನ್ ಪೋರ್ಟಲ್ ಪ್ರಕಾರ) ಕಂಪನಿಯು ತನ್ನ ಅತ್ಯಧಿಕ ಮಾಸಿಕ ನೋಂದಣಿಗಳನ್ನು ಸಾಧಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ74 ರಷ್ಟು ಬೆಳವಣಿಗೆಯಾಗಿದೆ. ಹೆಚ್ಚುವರಿಯಾಗಿ, ಇದು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 83,963 ನೋಂದಣಿಗಳೊಂದಿಗೆ ಶೇ48 ಬೆಳವಣಿಗೆಯನ್ನು ಮತ್ತು ಕಳೆದ ವರ್ಷದ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ68 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿರುವುದಾಗಿ ಪ್ರಕಟಿಸಿದೆ.

over-30-thousand-ola-ev-scooter-registrations-recorded-in-december

ಓಲಾ ಎಲೆಕ್ಟ್ರಿಕ್ ಕೇವಲ ಎರಡು ವರ್ಷಗಳ ಅವಧಿಯಲ್ಲಿ 4,00,000 ಸ್ಕೂಟರ್‌ಗಳ ಮಾರಾಟದ ಮೂಲಕ ಉದ್ಯಮದ ಮೊದಲ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ವರ್ಷದಲ್ಲಿ 2.65 ಲಕ್ಷ ನೋಂದಣಿಗಳನ್ನು (ವಾಹನ್ ಪೋರ್ಟಲ್ ಪ್ರಕಾರ) ದಾಖಲಿಸಿದ ಮೊದಲ EV ದ್ವಿಚಕ್ರ ವಾಹನ ತಯಾರಕರಾಗಿ ಓಲಾ ಎಲೆಕ್ಟ್ರಿಕ್ ಹೊರಹೊಮ್ಮಿದೆ.

ಓಲಾ ಮಾರ್ಕೆಟಿಂಗ್ ಅಧಿಕಾರಿ ಅಂಶುಲ್ ಖಂಡೇಲ್ವಾಲ್ ಮಾತನಾಡಿ, "S1 Pro, S1 Air ಮತ್ತು S1 X+ ಒಳಗೊಂಡಿರುವ ನಮ್ಮ ಬಲವಾದ ಉತ್ಪನ್ನ ಶ್ರೇಣಿಯ ಹಿನ್ನೆಲೆಯಲ್ಲಿ ನಾವು ನಮ್ಮ ಮಾರುಕಟ್ಟೆ ನಾಯಕತ್ವವನ್ನು ಇನ್ನೂ ತ್ರೈಮಾಸಿಕದಲ್ಲಿ ಮುಂದುವರಿಸಿದ್ದೇವೆ ಎಂದು ನಾವು ನಂಬುತ್ತೇವೆ. ನಮ್ಮ 'ಡಿಸೆಂಬರ್ ಟು ರಿಮೆಂಬರ್' ಅಭಿಯಾನವು ಭಾರೀ ಯಶಸ್ಸನ್ನು ಕಂಡಿದೆ, ಇನ್ನೂ ಸಾವಿರಾರು ಮಂದಿಯನ್ನು EV ವ್ಯಾಪ್ತಿಗೆ ತಂದಿದೆ ಎಂದರು.

over-30-thousand-ola-ev-scooter-registrations-recorded-in-december

ಓಲಾ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಐದು ಉತ್ಪನ್ನಗಳಿಗೆ ವಿಸ್ತರಿಸಿದೆ. ರೂ. 1,47,499 ಬೆಲೆಯ S1 Pro (2 ನೇ ಜನರೇಷನ್) ಕಂಪನಿಯ ಪ್ರಮುಖ ಪ್ರೀಮಿಯಂ EV ಸ್ಕೂಟರ್ ಆಗಿದ್ದು, S1 Air ರೂ. 1,19,999 ನಲ್ಲಿ ಖರೀದಿಗೆ ಲಭ್ಯವಿದೆ. ನಿಮ್ಮ ಬಳಿಯು ಓಲಾ ಇವಿ ಇದ್ದರೆ ಸ್ಕೂಟರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ನಲ್ಲಿ ತಿಳಿಸಿ.

ಹೆಚ್ಚುವರಿಯಾಗಿ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳೆಂದರೆ S1 X+, S1 X (3kWh), ಮತ್ತು S1 X (2kWh) ಗಳಾಗಿವೆ. ವೈವಿಧ್ಯಮಯ ಆದ್ಯತೆಗಳೊಂದಿಗೆ ಸವಾರರ ಅವಶ್ಯಕತೆಗಳನ್ನು ಪೂರೈಸಲು S1 X+ ಪ್ರಸ್ತುತ ರೂ. 1,09,999 ಎಕ್ಸ್ ಶೋರೂಂ ಬೆಲೆಯಲ್ಲಿ ಫ್ಲಾಟ್ ರೂ. 20,000 ಕಡಿತದೊಂದಿಗೆ ಕೇವಲ ರೂ. 89,999 ನಲ್ಲಿ ಲಭ್ಯವಿದೆ.

over-30-thousand-ola-ev-scooter-registrations-recorded-in-december

ಉಳಿದಂತೆ S1 X (3kWh) ಮತ್ತು S1 X (2kWh) ಗಾಗಿ ಕಾಯ್ದಿರಿಸುವಿಕೆಯು ರೂ. 999 ಕ್ಕೆ ಮಾತ್ರ ಇದೆ. ಕ್ರಮವಾಗಿ ಇವುಗಳ ಬೆಲೆಯು ರೂ. 99,999 ಮತ್ತು ರೂ. 89,999 ರ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿವೆ. ಈ ಸ್ಕೂಟರ್‌ಗಳು ಸದ್ಯ ಭಾರತದಲ್ಲಿ ಇವಿ ವಿಭಾಗವನ್ನು ಆಳುತ್ತಿರುವ ಪ್ರಮುಖ ಮಾದರಿಗಳಾಗಿವೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 4, 2024, 10:17 [IST]
English summary
Over 30 thousand ola ev scooter registrations recorded in december
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+