ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
ವಿಶ್ವದ ಅತ್ಯಂತ ಹಳೆಯ ವಾಹನ ತಯಾರಕಾ ಕಂಪನಿಯಾಗಿ ಗುರ್ತಿಸಿಕೊಂಡಿರುವ ಪಿಯಾಜಿಯೊ ತನ್ನ ಬ್ರಾಂಡ್‌ನ ಅಂಗಸಂಸ್ಥೆಯಾದ ವೆಸ್ಪಾ (Vespa)ದ ವಿಶೇಷ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಶೇಷ ಆವೃತ್ತಿಯನ್ನು ತರಲು ಪ್ರಮುಖ ಕಾರಣವಿದ್ದು, ಇದು ಇದುವರೆಗೆ ತಯಾರಿಸಿದ ಅತ್ಯಂತ ವಿಶೇಷವಾದ ವೆಸ್ಪಾ ಸ್ಕೂಟರ್ ಆಗಿರಲಿದೆ ಎಂದು ಕಂಪನಿ ತಿಳಿಸಿದೆ.
ಇಟಾಲಿಯನ್ ವಾಹನ ತಯಾರಕ ಕಂಪನಿ ಪಿಯಾಜಿಯೊವನ್ನು 1884 ರಲ್ಲಿ ಸ್ಥಾಪಿಸಲಾಯಿತು. ಇದೀಗ ಕಂಪನಿಯು ತನ್ನ 140ನೇ ವರ್ಷದ ಓಟವನ್ನು ಮುಂದುವರೆಸುತ್ತಿರುವ ಸಲುವಾಗಿ ವೆಸ್ಪಾವನ್ನು ವಿಶೇಷ ಆವೃತ್ತಿಯಲ್ಲಿ ತಯಾರಿಸಲು ನಿರ್ದೇಶಿಸಲಾಗಿದೆ. ಈ ದ್ವಿಚಕ್ರ ವಾಹನವು ವಿಶೇಷ ಮಾದರಿಯಾಗಿರಲಿದ್ದು, ಕೇವಲ 140 ಘಟಕಗಳನ್ನು ಮಾತ್ರ ನಿರ್ಮಿಸುವುದಾಗಿ ಕಂಪನಿ ತಿಳಿಸಿದೆ. ಈ ವೆಸ್ಪಾವನ್ನು ಬಿಳಿ ದೇಹದ ಮೇಲೆ ನೀಲಿ ಬಣ್ಣದಿಂದ ಚಿತ್ರಿಸಲಾಗಿದ್ದು, ಇವು ಪಿಯಾಜಿಯೊ ಗ್ರೂಪ್‌ನ ಸಾಂಸ್ಥಿಕ ಬಣ್ಣಗಳಾಗಿವೆ. ವಾಹನದ ಮೇಲೆ ಕ್ಲಾಸಿಕ್ ಗ್ರಾಫಿಕ್ಸ್ ಮತ್ತು ವೆಸ್ಪಾ ಮೊನೊಗ್ರಾಮ್‌ನೊಂದಿಗೆ ಡಿಸೈನ್ ಮಾಡಲಾಗಿದೆ. ಬ್ರ್ಯಾಂಡ್ 140 ವರ್ಷಗಳ ಸಂಭ್ರಮಾಚರಣೆಯ ಲೋಗೋವನ್ನು ಕೂಡ ಸೇರಿಸಿದೆ.

ಇದು ಇದುವರೆಗೆ ತಯಾರಿಸಿದ ಅತ್ಯಂತ ವಿಶೇಷವಾದ ವೆಸ್ಪಾ ಆಗಿದೆ. ಹೆಚ್ಚುವರಿಯಾಗಿ, ದ್ವಿಚಕ್ರ ವಾಹನವು ಏಪ್ರಿಲ್ 18 - 21 ರ ನಡುವೆ ಆರ್ಡರ್ ಮಾಡಲು ಮಾತ್ರ ಲಭ್ಯವಿರುತ್ತದೆ. ವಿಶೇಷ ಆವೃತ್ತಿಯ ವೆಸ್ಪಾ 300 HPE (ಹೈ ಪರ್ಫಾರ್ಮೆನ್ಸ್ ಇಂಜಿನ್) ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿರಲಿದೆ. ಇದು 23 bhp ಪವರ್ ಉತ್ಪಾದಿಸುತ್ತದೆ.
ಈ ವಿಶೇಷ ಆವೃತ್ತಿಯಲ್ಲಿ ಬಳಸಲಾಗಿರುವ ಎಂಜಿನ್ ಇದುವರೆಗೆ ಬಳಸಿದ ಅತ್ಯಧಿಕ ಪರ್ಫಾಮೆನ್ಸ ನೀಡುವ ಎಂಜಿನ್ ಆಗಿದೆ. ಇನ್ನು ಡಿಸೈನ್ ವಿಷಯಕ್ಕೆ ಬಂದರೆ ಸ್ಕೂಟರ್‌ನ ವಿನ್ಯಾಸವು ಅದರ ಪರಂಪರೆಯನ್ನು ಪ್ರತಿನಿಧಿಸುತ್ತದೆ, ವಾಹನವು LED ಲೈಟ್‌ಗಳು ಮತ್ತು ವೆಸ್ಪಾ MIA ಸಂಪರ್ಕ ವ್ಯವಸ್ಥೆಯಂತಹ ವೈಶಿಷ್ಟ್ಯಗಳನ್ನು ಹೊಂದಿರುವ ರೌಂಡ್ ಡಿಜಿಟಲ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ.

ಇತರ ವೈಶಿಷ್ಟ್ಯಗಳನ್ನು ನೋಡುವುದಾದ್ರೆ ಕೀಲೆಸ್ ಸಿಸ್ಟಮ್, ಎಎಸ್ಆರ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಕೂಡ ಇವೆ. ಬಿಳಿ ಮತ್ತು ನೀಲಿ ಬಣ್ಣಗಳನ್ನು ಕಾಪಾಡಿಕೊಳ್ಳಲು, ಬ್ರ್ಯಾಂಡ್ ಉದ್ದವಾದ ಸಿಂಗಲ್-ಪೀಸ್ ಸೀಟ್‌ಗಾಗಿ ಡಬಲ್ ಟೋನ್ ಆನ್ ಟೋನ್ ಸ್ಟಿಚಿಂಗ್‌ನೊಂದಿಗೆ ಸೀಟನ್ನು ನೀಲಿ ಬಣ್ಣದಲ್ಲಿ ನೀಡಿದೆ. ಬ್ರ್ಯಾಂಡ್ ಸಾಕಷ್ಟು ಆಸನದ ಸ್ಥಳಾವಕಾಶಕ್ಕಾಗಿ ವಿಶಾಲವಾಗಿ ನೀಡಿದೆ. ಇದಲ್ಲದೆ, ಪ್ರಮಾಣಿತ ವೈಶಿಷ್ಟ್ಯವಾಗಿ ಸೇರಿಸಲಾದ ಹಿಂಭಾಗದ ಸ್ಯಾಡಲ್ ಕವರ್ ಅನ್ನು ನೀಡಲಾಗಿದೆ. ಇದು ವಾಹನವನ್ನು ಹೆಚ್ಚು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ. ವೀಲ್ ರಿಮ್‌ಗಳು ನೀಲಿ ಬಣ್ಣವನ್ನು ಹೊಂದಿದ್ದು ಅದು ಸ್ಕೂಟರ್‌ನ ಒಟ್ಟಾರೆ ಡಿಸೈನ್‌ಗೆ ಹೊಂದಿಕೊಂಡಿದೆ.
ವೆಸ್ಪಾ ಮಿಕ್ಕಿ ಮೌಸ್ ಆವೃತ್ತಿ: ಕಳೆದ ವರ್ಷ ಡಿಸ್ನಿಯಿಂದ ಹೊರಬಂದ ಕಾರ್ಟೂನ್ ಚಿತ್ರವಾದ ಲುಕಾದಲ್ಲಿ, ಕೆಲ ಸಾಹಸ ಸನ್ನಿವೇಶಗಳಿಗಾಗಿ ವೆಸ್ಪಾವನ್ನು ಬಳಸಲಾಗಿತ್ತು. ಈ ಸಹಯೋಗವು ಮಿಕ್ಕಿ ಮೌಸ್ ಆವೃತ್ತಿಯನ್ನು ಡಿಸ್ನಿಯ 100 ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡಗಡೆ ಮಾಡಿತ್ತು. ಮಿಕ್ಕಿ ಮೌಸ್ ಕಾರ್ಟೂನ್ ಒಡೆತನವು ಡಿಸ್ನಿ ಅವರದ್ದಾಗಿದ್ದು, ಈ ಹಿಂದಿನಿಂದಲೂ ವೆಸ್ಪಾ ಹಾಗೂ ಡಿಸ್ನಿ ಉತ್ತಮ ಭಾಂದವ್ಯ ಹೊಂದಿವೆ.

ವೆಸ್ಪಾ ಜಸ್ಟಿನ್ ಬೈಬರ್ ಆವೃತ್ತಿ: "ಬೇಬಿ" ಹಾಡಿನ ಮೂಲಕ ಹೆಚ್ಚು ಜನಪ್ರಿಯವಾದ ಗಾಯಕ ಜಸ್ಟಿನ್ ಬೈಬರ್ ವೆಸ್ಪಾ ಸ್ಕೂಟರ್‌ಗಳ ಅಭಿಮಾನಿಯಾಗಿದ್ದು, ಜಸ್ಟಿನ್ ಬೈಬರ್ ಅವರ ಇಷ್ಟದಂತೆ ಕಂಪನಿ ಈ ಹಿಂದೆ ವೆಸ್ಪಾ ಸ್ಕೂಟರ್ ಅನ್ನು ನಿರ್ಮಿಸಿ ಅವರ ಸಹಿಯೊಂದಿಗೆ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತ್ತು. ಹೀಗೆಯೇ ಜಾರ್ಜಿಯೊ ಅರ್ಮಾನಿ, ಕ್ರಿಶ್ಚಿಯನ್ ಡಿಯರ್ ಮತ್ತು ಸೀನ್ ವೋಥರ್ಸ್ಪೂನ್ ನಂತಹ ಹಲವು ಸೆಲಬ್ರಿಟಿಗಳ ನೆನಪಿಗಾಗಿ ವಿಶೇಷ ಆವೃತ್ತಿಗಳನ್ನು ತಂದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications