ಅಗ್ಗದ ಬೆಲೆಯ ಹೊಸ ಪ್ರಾಣ 2.0 ಎಲೆಕ್ಟ್ರಿಕ್ ಬೈಕ್ ವಿಶೇಷತೆಗಳು!

ತಮಿಳುನಾಡು ಮೂಲದ ಶ್ರೀವಾರು ಮೋಟಾರ್ಸ್ ಇತ್ತೀಚೆಗೆ ಪ್ರಾಣಾ 2.0 ಹಾಗೂ ಪ್ರಾಣಾ ಎಲೈಟ್ ಎಂಬ ಎರಡು ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಪ್ರಾಣಾ 2.0 ಎಲೆಕ್ಟ್ರಿಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2,55,150 (ಎಕ್ಸ್ ಶೋರೂಂ ಚೆನ್ನೈ) ಗಳಾಗಿದೆ. ಪ್ರಾಣಾ ಎಲೈಟ್ ಬೆಲೆಯು 3,20,250 ರೂ.(ಎಕ್ಸ್ ಶೋರೂಂ ಚೆನ್ನೈ) ಗಳಾಗಿದೆ. ಈ ಎರಡೂ ಮೋಟಾರ್‌ಸೈಕಲ್‌ಗಳ ವೈಶಿಷ್ಟ್ಯಗಳು ಸೇರಿದಂತೆ ಕಂಪನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಕಂಪನಿಯ ಪ್ರಕಾರ ಪ್ರಾಣಾ ಎಲೈಟ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಪ್ರಾಣಾ 2.0 ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ವರೆಗೆ ಪ್ರಯಾಣಿಸಬಹುದು. ಎರಡು ವರ್ಷಗಳ ಕಾಲ ತಮ್ಮ ಉತ್ಪನ್ನಗಳ ಸರಣಿ ಪರೀಕ್ಷೆಗಳನ್ನು ನಡೆಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

prana-2-0-and-prana-elite-electric-motorcycles-price-features-details

ಪ್ರಾಣಾ 2.0 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಸುಲೂರಿನ (ಕೊಯಮತ್ತೂರು ಬಳಿ) ನಮ್ಮ ಉತ್ಪಾದನಾ ಸೌಲಭ್ಯದಲ್ಲಿ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿ ತಿಂಗಳಿಗೆ ಸುಮಾರು 2,000 ಬೈಕ್‌ಗಳನ್ನು ಉತ್ಪಾದಿಸಲಾಗುತ್ತದೆ. ಕಂಪನಿಯು ಒಟ್ಟಾರೆ ಸುಮಾರು 10,000 ಬೈಕ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ದೇಶದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಲ್ಲಿ ತಮಿಳುನಾಡು ಶೇ.40ರಷ್ಟು ಪಾಲು ಹೊಂದಿರುವುದರಿಂದ ಸ್ಥಳಿಯವಾಗಿ ಉತ್ತಮ ಬೇಡಿಕೆ ಪಡೆಯಲಿದೆ. ಭಾರತದಲ್ಲಿ ಸುಮಾರು 10,000 ಬೈಕ್‌ಗಳನ್ನು ಮಾರಾಟ ಮಾಡಿದ ಬಳಿಕ ನಮ್ಮ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಆಸಿಯಾನ್ ದೇಶಗಳಲ್ಲಿ ಸಹ ಮಾರಾಟ ಮಾಡುತ್ತೇವೆ. ಮಲೇಷ್ಯಾ ಮತ್ತು ಸಿಂಗಾಪುರದಿಂದ ಮಾರಾಟವನ್ನು ಪ್ರಾರಂಭಿಸುತ್ತೇವೆ ಎಂದು ಕಂಪನಿ ತಿಳಿಸಿದೆ.

prana-2-0-and-prana-elite-electric-motorcycles-price-features-details

2030ರ ವೇಳೆಗೆ, ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮಾರುಕಟ್ಟೆ ಪಾಲಿನಲ್ಲಿ ಶೇ50 ರಷ್ಟು ಪಾಲನ್ನು ಹೊಂದಿರುತ್ತವೆ. ಈಗಾಗಲೇ 2023 ರಲ್ಲಿ, ಭಾರತದ ಮೋಟಾರ್‌ಸೈಕಲ್ ಮಾರುಕಟ್ಟೆ 25.6 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಆದಾಯವನ್ನು ಸಾಧಿಸಿದೆ. 2027ರ ವೇಳೆಗೆ ಬೆಳವಣಿಗೆಯನ್ನು 36.1 ಬಿಲಿಯನ್ ಡಾಲರ್‌ಗೆ ಅಂದಾಜಿಸಲಾಗಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಆರಂಭದಲ್ಲಿ ಕಂಪನಿಯು ಮೆಟ್ರೋ ನಗರಗಳಲ್ಲಿ ಗಮನ ಹರಿಸುತ್ತಿದೆ, ಸದ್ಯ 100 ಕ್ಕಿಂತ ಕಡಿಮೆ" ಶಾಖೆಗಳನ್ನು ಹೊಂದಲು ಉದ್ದೇಶಿಸಿದೆ. ಕಂಪನಿಯ ಒಡೆತನದ ಚಿಲ್ಲರೆ ಮಳಿಗೆಗಳು ಮತ್ತು ಫ್ರ್ಯಾಂಚೈಸ್ ಮಾದರಿಗಳನ್ನು ಒಳಗೊಂಡಿರುತ್ತದೆ. ಇದು ಒಂದು ಅಥವಾ ಎರಡು ವರ್ಷಗಳಲ್ಲಿ ಸಂಭವಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

prana-2-0-and-prana-elite-electric-motorcycles-price-features-details

ದೇಶದಲ್ಲಿ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಇವಿ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ. ಶ್ರೀವಾರು ಮೋಟಾರ್ಸ್ ಬಿಡುಗಡೆ ಮಾಡಿರುವ ಪ್ರಾಣಾ 2.0 ನ ನವೀಕರಿಸಿದ ಆವೃತ್ತಿ ಹಾಗೂ ಪ್ರಾಣಾ ಎಲೈಟ್ ಮೋಟಾರ್‌ ಸೈಕಲ್‌ಗಳು ಭಾರತದಲ್ಲಿ ಎಷ್ಟರಮಟ್ಟಿಗೆ ಗ್ರಾಹಕರನ್ನು ಆಕರ್ಷಿಸಲಿವೆ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 12, 2024, 19:57 [IST]
English summary
Prana 2 0 and prana elite electric motorcycles price features details
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+