Quantum Plasma: ಸಿಹಿಸುದ್ದಿ.. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಭಾರೀ ಇಳಿಕೆ
ತೆಲಂಗಾಣ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್‌ಅಪ್ ಕ್ವಾಂಟಮ್ ಎನರ್ಜಿ (Quantum Energy) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸೀಮಿತ ಅವಧಿಗೆ ಪ್ಲಾಸ್ಮಾ ಎಕ್ಸ್ ಮತ್ತು ಎಕ್ಸ್‌ಆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ದೊಡ್ಡಮಟ್ಟದಲ್ಲಿ ಇಳಿಕೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕ್ವಾಂಟಮ್ ಎನರ್ಜಿ ಶೇಕಡ 10% ದರವನ್ನು ಕಡಿತಗೊಳಿಸಿದೆ. ಈ ಕೊಡುಗೆ ಮಾರ್ಚ್ 31, 2024 ರವರೆಗೆ ಮಾತ್ರ ಲಭ್ಯವಿರುತ್ತದೆ. ರೂ.1.20 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಮಾರಾಟವಾಗುತ್ತಿದ್ದ ಪ್ಲಾಸ್ಮಾ ಎಕ್ಸ್ (Plasma X) ಮಾದರಿಯು ಸದ್ಯ ರೂ.1.09 ಲಕ್ಷಕ್ಕೆ ಸಿಗಲಿದೆ. ರೂ.1 ಲಕ್ಷ ದರವನ್ನು ಪಡೆದಿದ್ದ ಪ್ಲಾಸ್ಮಾ ಎಕ್ಸ್‌ಆರ್ (Plasma XR) ರೂಪಾಂತರ ರೂ.89,000ಕ್ಕೆ ದೊರೆಯಲಿದೆ.

ಕ್ವಾಂಟಮ್ ಪ್ಲಾಸ್ಮಾಎಕ್ಸ್ ಮತ್ತು ಎಕ್ಸ್‌ಆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು 1500ಡಬ್ಲ್ಯೂ ಮೋಟಾರ್ ಹಾಗೂ 50ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿವೆ. ವಿಶೇಷವಾಗಿ ಪ್ಲಾಸ್ಮಾ ಎಕ್ಸ್ ಮಾದರಿಯು ಕೇವಲ 7.5 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, ಗಂಟೆಗೆ 65 ಕಿ.ಮೀ ಗರಿಷ್ಠ ವೇಗವನ್ನು ಹೊಂದಲಿದೆ. ಭರ್ತಿ ಚಾರ್ಜ್ ನಲ್ಲಿ 110 ಕಿಲೋಮಿಟರ್ ರೇಂಜ್ (ಮೈಲೇಜ್) ಕೊಡುತ್ತದೆ.
ಕ್ವಾಂಟಮ್ ಪ್ಲಾಸ್ಮಾ ಎಕ್ಸ್‌ಆರ್ (Quantum Plasma XR) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ಕ್ರಮಿಸುವ ಶಕ್ತಿಯನ್ನು ಹೊಂದಿದೆ. 60 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಅನ್ನು ಪಡೆಯಲಿದೆ. ಜೊತೆಗೆ ಇಕೋ (Eco) ಹಾಗೂ ಸ್ಪೋರ್ಟ್ಸ್ (Sports) ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ.

ಈ ಕ್ವಾಂಟಮ್ ಪ್ಲಾಸ್ಮಾ ಎಕ್ಸ್ ಹಾಗೂ ಎಕ್ಸ್‌ಆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಪ್ರಮುಖವಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಎಲ್ಇಡಿ ಲೈಟ್ ಸೆಟಪ್, BMS (ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್), ಆನ್ ಬೋರ್ಡ್ ಯುಎಸ್‌ಬಿ ಚಾರ್ಜಿಂಗ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿವೆ.
ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೊಂಡುಕೊಳ್ಳುವ ಖರೀದಿದಾರರಿಗೆ ಕ್ವಾಂಟಮ್ ಎನರ್ಜಿಯು 5 ವರ್ಷ ಅಥವಾ 5,000 ಕಿ.ಮೀ ಗಳ ವಾರಂಟಿಯನ್ನು ನೀಡುತ್ತದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟೆಸ್ಟ್ ರೈಡ್ ಮಾಡಲು ದಿನಾಂಕವನ್ನು ನಿಗದಿಪಡಿಸಬಹುದು. ಅದು ಸಾಧ್ಯವಾಗದಿದ್ದರೆ ದೇಶಾದ್ಯಂತವಿರುವ ಯಾವುದೇ ಶೋರೂಂಗೆ ಭೇಟಿ ನೀಡಬಹುದು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸೆಲ್ ದರಗಳು ದೊಡ್ಡಮಟ್ಟದಲ್ಲಿ ಇಳಿಕೆಯಾಗಿರುವುದರಿಂದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಬೆಲೆಯನ್ನು ಪರಿಷ್ಕರಿಸುತ್ತಿವೆ ಎಂದು ವರದಿಯಾಗಿದೆ. ಈ ಹಿಂದೆ ಟಾಟಾ, ಓಲಾ ಕಂಪನಿಗಳು ಸಹ ದರವನ್ನು ಕಡಿಮೆ ಮಾಡಿದ್ದವು. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನೆಯಲ್ಲಿ ಬ್ಯಾಟರಿಗಾಗಿಯೇ ಸುಮಾರು 40% ಹಣವನ್ನು ಖರ್ಚು ಮಾಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








