ಭಾರತದ ಈ ಜನಪ್ರಿಯ ಕಂಪನಿ ಎಲೆಕ್ಟ್ರಿಕ್ ಬೈಕ್‌ಗಳು ವಿದೇಶದಲ್ಲಿಯೂ ಸಂಚರಿಸಲಿವೆ.. ನಮ್ಮಲ್ಲಿ ಬೆಲೆ ಇಷ್ಟೇನಾ?
ಭಾರತದ ನಂಬರ್ 1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ರಿವೋಲ್ಟ್ ಮೋಟಾರ್ಸ್ (Revolt Motors), ಶ್ರೀಲಂಕಾದ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಣೆ ಮಾಡಿದೆ. ಅಲ್ಲಿನ ಜನಪ್ರಿಯ ಆಟೋಮೊಬೈಲ್ ಕಂಪನಿ ಎವಲ್ಯೂಷನ್ ಆಟೋ ಪ್ರೈವೇಟ್ ಲಿಮಿಟೆಡ್ (Evolution Auto Pvt Ltd) ಪಾಲುದಾರಿಕೆಯಲ್ಲಿ ರಿವೋಲ್ಟ್ ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ. ಮೊದಲ ಹಂತದಲ್ಲಿ ಮುಂದಿನ 4 ತಿಂಗಳಲ್ಲಿ 15 ಹೊಸ ಡೀಲರ್‌ಶಿಪ್‌ಗಳನ್ನು ತೆರೆಯಲಿದ್ದು, 2029ರ ವೇಳೆಗೆ ಶ್ರೀಲಂಕಾದಾದ್ಯಂತ ಬರೊಬ್ಬರಿ 90 ಡೀಲರ್‌ಶಿಪ್‌ಗಳನ್ನು ಆರಂಭಿಸಲು ಯೋಜಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿವೋಲ್ಟ್ ಮೋಟಾರ್ಸ್‌ನ ಮಾತೃಸಂಸ್ಥೆ ರಟ್ಟನ್‌ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್ (RattanIndia Enterprises Limited) ಮುಖ್ಯಸ್ಥೆ ಅಂಜಲಿ ರತ್ತನ್ (Anjali Rattan), 'ನಾವು ಶ್ರೀಲಂಕಾ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಕೇವಲ ವ್ಯಾಪಾರ ಕಾರ್ಯತಂತ್ರದ ಭಾಗವಲ್ಲ. ಇದು ಸುಸ್ಥಿರ (ಹಸಿರು) ಚಲನಶೀಲತೆಯೆಡೆಗೆ ಜಗತ್ತನ್ನು ಪರಿವರ್ತಿಸುವುದಾಗಿದೆ. ನಮ್ಮ ದ್ವಿಚಕ್ರ ವಾಹನಗಳನ್ನು ಶ್ರೀಲಂಕಾ (Sri Lanka) ಜನರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ರಿವೋಲ್ಟ್ ಆರ್‌ವಿ400 (Revolt RV400) ಮತ್ತು ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ (Revolt RV400 BRZ) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಖರೀದಿಗೆ ಲಭ್ಯವಿವೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ರಿವೋಲ್ಟ್ ಆರ್‌ವಿ400 ರೂ.1,16,750 ಮತ್ತು ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ರೂ.1,02,250 ಬೆಲೆಯನ್ನು ಹೊಂದಿದೆ.
ರಿವೋಲ್ಟ್ ಆರ್‌ವಿ400 (Revolt RV400) ಎಲೆಕ್ಟ್ರಿಕ್ ಬೈಕ್, ಬಹಳಷ್ಟು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. 3.24 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಈ ನೂತನ ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4ಜಿ ಕನೆಕ್ಟಿವಿಟಿ, ಜಿಯೋಫೆನ್ಸಿಂಗ್, ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) 240 ಎಂಎಂ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.
ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ (Revolt RV400 BRZ) ಎಲೆಕ್ಟ್ರಿಕ್ ಬೈಕ್ ಬಗ್ಗೆ ಹೇಳುವುದಾದರೆ, ಇದು 3.24 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ವರೆಗೆ ಓಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರ ಬ್ಯಾಟರಿ ಪ್ಯಾಕ್ 0-100% ಚಾರ್ಜ್ ಆಗಲು 4.5 ಗಂಟೆ ತೆಗೆದುಕೊಳ್ಳುತ್ತದೆ.
ಹೊಸ ರಿವೋಲ್ಟ್ ಆರ್‌ವಿ400 ಬಿಆರ್‌ಝಡ್ ಮೋಟಾರ್‌ಸೈಕಲ್ ಕಾಂಬಿ ಬ್ರೇಕಿಂಗ್ ಸಿಸ್ಟಮ್, ಸೈಡ್-ಸ್ಟ್ಯಾಂಡ್ ಕಟ್-ಆಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಲೂನಾರ್ ಗ್ರೀನ್, ಪೆಸಿಫಿಕ್ ಬ್ಲೂ, ಡಾರ್ಕ್ ಸಿಲ್ವರ್, ರೆಬೆಲ್ ರೆಡ್ ಒಳಗೊಂಡಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








