ಫುಲ್ ಡಿಮ್ಯಾಂಡ್: ಸೂಪರ್ ಮೈಲೇಜ್... ಒಂದೇ ತಿಂಗಳಲ್ಲಿ 1,994 ವಾಹನಗಳ ಮಾರಾಟ!
ಭಾರತದ ಪ್ರಮುಖ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ರಿವೋಲ್ಟ್ ಮೋಟಾರ್ಸ್, ವಾಹನ ಮಾರಾಟದಲ್ಲಿ ವಾರ್ಷಿಕವಾಗಿ ಶೇ197 ರಷ್ಟು ಬೆಳವಣಿಗೆ ಸಾಧಿಸಿರುವುದಾಗಿ ತಿಳಿಸಿದೆ. ಕಂಪನಿಯ ಹೊಸ RV1 ಮತ್ತು RV1+ ಮೋಟಾರ್‌ಸೈಕಲ್‌ಗಳು ಮಾರಾಟದಲ್ಲಿನ ಈ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಕೈಗೆಟುಕುವ ಬೆಲೆಗೆ ಬಿಡುಗಡೆ ಮಾಡಿರುವುದರಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಈ ಬೈಕ್‌ಗಳು ಹೆಚ್ಚಿನ ಪ್ರಿ-ಬುಕಿಂಗ್‌ಗಳನ್ನು ಪಡೆದುಕೊಳ್ಳುವ ಮೂಲಕ ಮಾರಾಟವನ್ನು ಹೆಚ್ಚಿಸುತ್ತಿರುವುದಾಗಿ ಕಂಪನಿ ಹೇಳಿದೆ.
ವರ್ಷದಿಂದ ವರ್ಷಕ್ಕೆ ಕಂಪನಿಯ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷ 2023ರ ನವೆಂಬರ್‌ನಲ್ಲಿ ಕೇವಲ 671 ವಾಹನಗಳು ಮಾರಾಟವಾಗಿದ್ದವು. ಆದರೆ ನವೆಂಬರ್ 2024 ರಲ್ಲಿ ಬರೋಬ್ಬರಿ 1,994 ಯುನಿಟ್ ವಾಹನಗಳು ಮಾರಾಟವಾಗಿವೆ. ಹಾಗೆಯೇ ಕಳೆದ ಅಕ್ಟೋಬರ್‌ನಲ್ಲಿ 952 ಯುನಿಟ್ ವಾಹನಗಳು ಮಾರಾಟವಾಗಿವೆ ಎಂದು ಕಂಪನಿ ವರದಿ ನೀಡಿದೆ.

ಈ ಮಟ್ಟದ ಮಾರಾಟಕ್ಕೆ ಪ್ರಮುಖ ಆಧಾರವಾಗಿ ಹೊಸ RV1 ಮತ್ತು RV1+ ಮೋಟಾರ್‌ಸೈಕಲ್‌ಗಳು ನಿಲ್ಲುತ್ತವೆ. ಈ ಮಾಡೆಲ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೈಗೆಟುಕುವ ಬೆಲೆಯೊಂದಿಗೆ ಬರುತ್ತವೆ. ಸಾಂಪ್ರದಾಯಿಕ ICE (ಇಂಧನ ಚಾಲಿತ) ವಾಹನಗಳಿಗೆ ಹೋಲಿಸಿದರೆ ಹೊಸ RV1 ಮತ್ತು RV1+ ಮೋಟಾರ್‌ಸೈಕಲ್‌ಗಳು ಸವಾರರಿಗೆ ವಿಶ್ವಾಸಾರ್ಹ ಮತ್ತು ಸಮರ್ಥನೀಯ ಪರ್ಯಾಯ ಆಯ್ಕೆಯಾಗಿವೆ ಎಂದು ಕಂಪನಿ ಹೇಳಿದೆ.
ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯು ರೂ.84,990 ಆಗಿದೆ. ಇನ್ನು ಈ ಬೈಕಿನ ಪ್ರೀಮಿಯಂ ಆವೃತ್ತಿ RV1+ ಮಾದರಿಯ ಬೆಲೆಯು ರೂ.99,990 ಆಗಿದೆ. ಈ ಮಾದರಿಗಳು ಒಂದೇ ವರ್ಗದಲ್ಲಿ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗಿಂತ ಮೂರು ಪಟ್ಟು ಕಡಿಮೆ ಮಾಲೀಕತ್ವದ ವೆಚ್ಚವನ್ನು ನೀಡುವ ಮೂಲಕ ಹೆಚ್ಚಿನ ಜನರನ್ನು ಎಲೆಕ್ಟ್ರಿಕ್ ಬೈಕಿನ ಕಡೆ ಸೆಳೆಯುವಂತೆ ಮಾಡಿದೆ.

ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕ್ ಮಿಡ್-ಮೋಟರ್ ಮತ್ತು ಚೈನ್ ಡ್ರೈವ್ ಸಿಸ್ಟಮ್‌ನಿಂದ ಚಾಲಿತವಾಗಿದ್ದು, ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಇವುಗಳಲ್ಲಿ 2.2 kWh ಬ್ಯಾಟರಿ ಪ್ಯಾಕ್ 100 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು 3.24 kWh ಬ್ಯಾಟರಿಯು 160 ಕಿ.ಮೀ ರೇಂಜ್ ಅನ್ನು ನೀಡುತ್ತದೆ.
ರಿವೋಲ್ಟ್ RV1 ಮೋಟಾರ್‌ಸೈಕಲ್ 250kgs ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ರಿವೋಲ್ಟ್ RV1 ಎಲ್ಇಡಿ ಹೆಡ್ ಲೈಟ್ ಗಳು, ಆರು ಇಂಚಿನ ಡಿಜಿಟಲ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು, ಬಹು ಸ್ಪೀಡ್ ಮೋಡ್‌ಗಳು ಮತ್ತು ರಿವರ್ಸ್ ಮೋಡ್ ಅನ್ನು ಹೊಂದಿದೆ.

ದೇಶದಾದ್ಯಂತ 154 ಡೀಲರ್‌ಶಿಪ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ತನ್ನ ಅಸ್ತಿತ್ವವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಡಿಸೆಂಬರ್ 2024 ರ ಅಂತ್ಯದ ವೇಳೆಗೆ 14 ಹೊಸ ಡೀಲರ್‌ಶಿಪ್‌ಗಳನ್ನು ಪ್ರಾರಂಭಿಸುವುದರೊಂದಿಗೆ ನೆಟ್‌ವರ್ಕ್ ಮತ್ತಷ್ಟು ಬೆಳೆಸಲು ಸಿದ್ಧವಾಗಿದ್ದು, ನಗರ ಮತ್ತು ಅರೆ-ನಗರ ಮಾರುಕಟ್ಟೆಗಳಲ್ಲಿ ಹೊಸ ಶೋರೂಂಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದಾಗಿ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications