160 Km ರೇಂಜ್, ಕೈಗೆಟುಕುವ ಬೆಲೆಯಲ್ಲಿ ಹೊಸ ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಭಾರತದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ರಿವೋಲ್ಟ್ ಮೋಟಾರ್ಸ್ (Revolt Motors) ತನ್ನ ಹೊಸ ರಿವೋಲ್ಟ್ ಆರ್‌ವಿ1 ಎಲೆಕ್ತ್ರಿಕ್ ಬೈಕ್ ಬಿಡುಗಡೆಯಾಗಿದೆ. ಈ ಹೊಸ ರಿವೋಲ್ಟ್ ಆರ್‌ವಿ1 (Revolt RV1) ಬೈಕ್ ನೊಂದಿಗೆ ಎಲೆಕ್ತ್ರಿಕ್ ದ್ವಿಚಕ್ರ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಮಾರಾಟದಲ್ಲಿ 70% ರಷ್ಟಿದೆ.ಈ ವಿಶಾಲವಾದ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಿಭಾಗವು ಅತಿದೊಡ್ಡ ಪಾಲನ್ನು ಹೊಂದಿದೆ. ಒಟ್ಟು 1.25 ಕೋಟಿಯಲ್ಲಿ ವಾರ್ಷಿಕವಾಗಿ 80 ಲಕ್ಷಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳು ಮಾರಾಟವಾಗುತ್ತವೆ.

ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯು ರೂ.84,990 ಆಗಿದೆ. ಇನ್ನು ಈ ಬೈಕಿನ ಪ್ರೀಮಿಯಂ ಆವೃತ್ತಿ RV1+ ಮಾದರಿಯ ಬೆಲೆಯು ರೂ.99,990 ಆಗಿದೆ. ಈ ಮಾದರಿಗಳು ಒಂದೇ ವರ್ಗದಲ್ಲಿ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗಿಂತ ಮೂರು ಪಟ್ಟು ಕಡಿಮೆ ಮಾಲೀಕತ್ವದ ವೆಚ್ಚವನ್ನು ನೀಡುವ ಮೂಲಕ ಹೆಚ್ಚಿನ ಜನರನ್ನು ಎಲೆಕ್ಟ್ರಿಕ್ ಬೈಕಿನ ಕಡೆ ಸೆಳೆಯುವಂತೆ ಮಾಡುತ್ತದೆ. ರಿವೋಲ್ಟ್ ಆರ್‌ವಿ1 ಓಲಾ ರೋಡ್ಟರ್ ಎಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.

Revolt RV1

ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕ್ ಮಿಡ್-ಮೋಟರ್ ಮತ್ತು ಚೈನ್ ಡ್ರೈವ್ ಸಿಸ್ಟಮ್‌ನಿಂದ ಚಾಲಿತವಾಗಿರುವ RV1 ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಇವುಗಳಲ್ಲಿ 2.2 kWh ಬ್ಯಾಟರಿಯ ಪ್ಯಾಕ್ 100 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು 3.24 kWh ಬ್ಯಾಟರಿಯು 160 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಇನ್ನು ಈ ಎರಡೂ ಬ್ಯಾಟರಿ ಆಯ್ಕೆಗಳು ನೀರಿನ ಪ್ರತಿರೋಧಕ್ಕಾಗಿ IP67-ರೇಟೆಡ್ ಎಂದು ಕಂಪನಿ ಹೇಳಿಕೊಂಡಿದೆ. ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿಯೂ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು RV1+ ಅನ್ನು ಕೇವಲ 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಇದರಿಂದ ಗ್ರಾಹಕರ ಹೆಚ್ಚಿನ ಸಮಯವನ್ನು ಉಳಿಸುತ್ತದೆ.

Revolt RV1

ರಿವೋಲ್ಟ್ RV1 250kgs ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ರಿವೋಲ್ಟ್ RV1 ಎಲ್ಇಡಿ ಹೆಡ್ ಲೈಟ್ ಗಳು, ಆರು ಇಂಚಿನ ಡಿಜಿಟಲ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್ಗಳು, ಮಲ್ಟಿಪಲ್ ಸ್ಪೀಡ್ ಮೋಡ್ಗಳು ಮತ್ತು ರಿವರ್ಸ್ ಮೋಡ್ ಅನ್ನು ಪಡೆಯುತ್ತದೆ.

ಬೈಕ್ ಮತ್ತಷ್ಟು ವಿಶಾಲವಾದ ಟೈರ್‌ಗಳನ್ನು ಹೊಂದಿದೆ, ಇದು ಬೈಕ್‌ಗೆ ಹೆಚ್ಚು ಸ್ಥಿರವಾದ ಸವಾರಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಡ್ಯುಯಲ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ, ಇತರ ಪ್ರಯಾಣಿಕರ ಮೋಟಾರ್‌ಸೈಕಲ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಉನ್ನತ ನಿಲುಗಡೆ ಶಕ್ತಿಯನ್ನು ಒದಗಿಸುತ್ತದೆ. ಬೈಕು ಬಹುಮುಖ ಸವಾರಿ ಅನುಭವಗಳಿಗಾಗಿ ಮಲ್ಟಿಪಲ್ ಸ್ಫೀಡ್ ಮೋಡ್‌ಗಳನ್ನು ಸಹ ನೀಡುತ್ತದೆ ಮತ್ತು ರಿವರ್ಸ್ ಮೋಡ್ ಅನ್ನು ಪರಿಚಯಿಸುತ್ತದೆ.

ಹೊಸ ಬೈಕ್‌ನ ಬಿಡುಗಡೆಯ ಜೊತೆಗೆ, ರಿವೋಲ್ಟ್ ತನ್ನ ಪ್ರಮುಖ ಮಾದರಿಯಾದ RV400 ಗೆ ಕೆಲವು ನವೀಕರಣಗಳನ್ನು ಮಾಡಿದೆ. ಇದು ಈಗ ಫಾಸ್ಟ್ ಚಾರ್ಜರ್ ಅನ್ನು ಪಡೆಯುತ್ತದೆ, ಅದು 90 ನಿಮಿಷಗಳಲ್ಲಿ ಬೈಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ರಿವೋಲ್ಟ್ RV400 ರಿವರ್ಸ್ ಮೋಡ್, ವರ್ಧಿತ ಡಿಜಿಟಲ್ ಡಿಸ್ಪ್ಲೇ ಮತ್ತು 160 ಕಿಮೀಗಳ ವಿಸ್ತೃತ ರೇಂಜ್ ಸಹ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, September 17, 2024, 19:52 [IST]
English summary
Revolt rv1 electric motorcycle launched price details
Read more on revolt india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+