ಅಗ್ಗದ ಬೆಲೆ, ಒಂದೇ ವಾರದಲ್ಲಿ 16,000 ಬುಕಿಂಗ್ಸ್: ನಿತ್ಯ 160 ಕಿ.ಮೀ ಓಡುವ ಬೈಕ್‌ಗೆ ಫುಲ್ ಡಿಮ್ಯಾಂಡ್!

ಭಾರತೀಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ರಿವೋಲ್ಟ್ ಮೋಟಾರ್ಸ್, ಹೊಸದಾಗಿ ಬಿಡುಗಡೆ ಮಾಡಿರುವ ತನ್ನ RV1 ಮತ್ತು RV1+ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದು ಬಿಡುಗಡೆಯಾದ ಮೊದಲ ವಾರದಲ್ಲಿ 16,000 ಬುಕಿಂಗ್‌ಗಳನ್ನು ಸಾಧಿಸಿದೆ ಎಂದು ರಿವೋಲ್ಟ್ ಮೋಟಾರ್ಸ್ ತಿಳಿಸಿದೆ. ಈ ಅಗಾಧ ಬೇಡಿಕೆಯು ಭಾರತದ ಮೊದಲ ಪ್ರಯಾಣಿಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಭಾರಿ ಸ್ವೀಕಾರಾರ್ಹತೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ, RV1 ಇವಿ ಬೈಕ್ ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಗೇಮ್-ಚೇಂಜರ್ ಆಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿಯವರು ಸೆಪ್ಟೆಂಬರ್ 17 ರಂದು RV1 ಮತ್ತು ಅದರ ಪ್ರೀಮಿಯಂ ರೂಪಾಂತರವಾದ RV1+ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದ್ದರು. RV1 ಬೆಲೆಯು ರೂ. 84,990 ಮತ್ತು RV1+ ಗೆ ರೂ. 99,990 (ಎಕ್ಸ್‌ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ನೀಡಲಾಗುತ್ತಿದೆ.

revolt-rv1-electric-motorcycle-receives-16k-bookings-in-first-week

ಇದೇ ವರ್ಗದಲ್ಲಿರುವ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಮೂರು ಪಟ್ಟು ಕಡಿಮೆ ನಿರ್ವಹಣಾ ವೆಚ್ಚವನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ. ಮೋಟರ್‌ಸೈಕಲ್ ಉತ್ಸಾಹಿಗಳು ಈಗ ರಿವೋಲ್ಟ್ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಅವರ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡಿ RV1 ಮತ್ತು RV1+ ಅನ್ನು ಬುಕ್‌ ಮಾಡಿಕೊಳ್ಳಬಹುದು.

ಬೈಕ್ ವಿಶೇಷತೆಗಳು: RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ದೃಢವಾದ 250 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇತರ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಲ್ಲಿ ಕಂಡುಬರುವ 150 ಕೆ.ಜಿ ಸರಾಸರಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸುಧಾರಿತ ಹಿಡಿತ ಮತ್ತು ಸ್ಥಿರತೆಗಾಗಿ ವಿಶಾಲವಾದ ಟೈರ್‌ಗಳನ್ನು ಹೊಂದಿದೆ. ಮಿಡ್-ಮೋಟರ್ ಮತ್ತು ಪ್ರೀಮಿಯಂ ಚೈನ್ ಡ್ರೈವ್ ಸಿಸ್ಟಮ್‌ ಹೊಂದಿದೆ.

revolt-rv1-electric-motorcycle-receives-16k-bookings-in-first-week

ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, RV1+ ಅನ್ನು ಕೇವಲ 1.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಮೋಟಾರ್‌ಸೈಕಲ್ 6-ಇಂಚಿನ ಡಿಜಿಟಲ್ LCD ಡಿಸ್ಪ್ಲೇಯನ್ನು ಹೊಂದಿದ್ದು, ರಿಯಲ್ ಟೈಮ್ ರೈಡ್ ಡೇಟಾ ಸೇರಿದಂತೆ ವಾಹನದಲ್ಲಿ ಯಾವುದಾದರು ದೋಷವಿದಲ್ಲಿ ಅವುಳ ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ನೀಡಲಾಗಿದೆ.

ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಒರಟಾದ ಭೂಪ್ರದೇಶಗಳಲ್ಲಿಯೂ ಸಹ ಸುಗಮ ಮತ್ತು ಆರಾಮದಾಯಕ ಸವಾರಿಯನ್ನು ಒದಗಿಸುತ್ತದೆ, ಆಧುನಿಕ ರೈಡರ್‌ಗಳಿಗೆ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿ ತಿಳಿಸಿದೆ. ಉದ್ದವಾದ ಆಸನ ಮತ್ತು ಬಹು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ ಚೌಕಟ್ಟಿನೊಂದಿಗೆ, ಇದು ಕುಟುಂಬಗಳಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿರುತ್ತದೆ.

ಈ ಎಲೆಕ್ಟ್ರಿಕ್ ಬೈಕ್ ಬಹುಮುಖ ಸವಾರಿಗಾಗಿ ಬಹು ವೇಗದ ಮೋಡ್‌ಗಳ ಜೊತೆಗೆ ರಿವರ್ಸ್ ಮೋಡ್ ಅನ್ನು ಹೊಂದಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ರಿವರ್ಸ್ ಗೇರ್ ಬಹು ಉಪಯುಕ್ತವಾಗಿರುತ್ತದೆ. ಹಾಗೆಯೇ ಮೋಟಾರ್‌ಸೈಕಲ್‌ನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ಇತರ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಿಗಿಂತ ಉನ್ನತ ನಿಲುಗಡೆ ಪವರ್ ಹೊಂದಿವೆ.

RV1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 2.2 kWh ಬ್ಯಾಟರಿಯೊಂದಿಗೆ 100 ಕಿ.ಮೀ ರೇಂಜ್ ನೀಡಿದರೆ, ಎರಡನೆಯದು 3.24 kWh ಬ್ಯಾಟರಿಯೊಂದಿಗೆ 160 ಕಿ.ಮೀ ರೇಂಜ್ ನೀಡುತ್ತದೆ. ಎರಡೂ ಬ್ಯಾಟರಿಗಳು ನೀರಿನ ಪ್ರತಿರೋಧಕ್ಕಾಗಿ IP67-ರೇಟೆಡ್ ಆಗಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ವಿಶ್ವಾಸಾರ್ಹ ಕಾರ್ಯಕ್ಷಮತೆ ಒದಗಿಸುತ್ತವೆ.

More from DriveSpark

Article Published On: Tuesday, September 24, 2024, 11:41 [IST]
English summary
Revolt rv1 electric motorcycle receives 16k bookings in first week
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+