ಇತಿಹಾಸ ಸೃಷ್ಟಿ..! ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 19 ವರ್ಷದ ಯುವ ರೈಡರ್ ಭಾಗಿ: ನೀವೆ ನೋಡಿ

ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಬೈಕ್ ರೇಸಿಂಗ್ ದೊಡ್ಡಮಟ್ಟದಲ್ಲಿ ಜನಪ್ರಿಯವಾಗುತ್ತಿದ್ದು, ಹಲವು ಯುವಕರು ಕೂಡ ಈ ಕ್ರೀಡೆಯತ್ತ ಆಸಕ್ತಿ ಬೆಳಸಿಕೊಳ್ಳುತ್ತಿದ್ದಾರೆ. ಸದ್ಯ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಭಾರತ ಯುವ ರೈಡರ್ ಕವಿನ್ ಕ್ವಿಂಟಲ್ (Kavin Quintal) ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಂದು (ಶುಕ್ರವಾರ) ಝೆಕ್ ರಿಪಬ್ಲಿಕ್‌ನ ಮೋಸ್ಟ್‌ನಲ್ಲಿ ನಡೆಯುತ್ತಿರುವ 'ವಿಶ್ವ ಎಸ್‌ಬಿಕೆ ಎಸ್‌ಎಸ್‌ಪಿ300' ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಬಾರಿಗೆ ಟ್ರ್ಯಾಕ್‌ಗೆ ಇಳಿಯುತ್ತಿದ್ದಾರೆ.

ಭಾರತದ 19 ವರ್ಷದ ಕವಿನ್ ಕ್ವಿಂಟಲ್ ಅವರು, ಗಾಯಾಳು ಸ್ಪೇನ್‌ನ ಡೇನಿಯಲ್ ಮೊಗೆಡಾ ಬದಲಾಗಿ ಈ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ ಐರಿಶ್ ತಂಡವಾದ ರೆಟ್ರೋ ಟ್ರಾಫಿಕ್ ಕವಾಸಕಿ ಮತ್ತು ಅದರ ಮಾಲೀಕತ್ವ ಹೊಂದಿರುವ ಗಾಮನ್ ರೇಸಿಂಗ್ ಗ್ಲೋಬಲ್ ಸರ್ವಿಸ್‌ ಆಡಳಿತಕ್ಕೂ ಧನ್ಯವಾದ ಅರ್ಪಿಸಿದ್ದಾರೆ.

Rider Kavin Quintal First Indian To Participate In World Superbike Championship

ಈ ಹಿಂದಿನ ರೇಸ್‌ನಲ್ಲಿ ಡೇನಿಯಲ್ ಮೊಗೆಡಾ ಅವರು ಗಾಯಗೊಂಡಿದ್ದರು. ಇದರಿಂದಾಗಿ ಪ್ರತಿಭಾವಂತ ಯುವ ರೇಸರ್ ಆಗಿರುವ ಚೆನ್ನೈ ಮೂಲದ ಕವಿನ್ ಕ್ವಿಂಟಲ್‌ರನ್ನು ಐರಿಶ್ ತಂಡ ಆಯ್ಕೆ ಮಾಡಿದೆ. ಶ್ರೇಷ್ಠ ರೇಸರ್ ಎನಿಸಿಕೊಂಡಿರುವ ಕ್ವಿಂಟಾಲ್, ಪ್ರಸ್ತುತ ವಿವಿಧ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸುತ್ತಿದ್ದು, ಭರವಸೆಯ ರೇಸರ್ ಆಗಿ ಹೊರಹೊಮ್ಮುತ್ತಿದ್ದಾರೆ.

ಕೇವಲ 13ನೇ ವಯಸ್ಸಿನಲ್ಲಿಯೇ ಬೈಕ್ ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಶುರು ಮಾಡಿದ ಕ್ವಿಂಟಾಲ್, ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತದಲ್ಲಿ ಜರುಗಿದ್ದ ರೇಸ್‌ನಲ್ಲಿ ಟ್ರ್ಯಾಕ್‌ಗೆ ಇಳಿದಿದ್ದ ಅವರು, 2021 ಹಾಗೂ 2023ರಲ್ಲಿ 'ಟ್ಯಾಲೆಂಟ್ ಕಪ್'ನ್ನು ಜಯಿಸಿದ್ದರು. ನಂತರ, ಏಷ್ಯಾ ಟ್ಯಾಲೆಂಟ್ ಕಪ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು.

Rider Kavin Quintal First Indian To Participate In World Superbike Championship

ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವ ರೈಡರ್ ಕವಿನ್ ಕ್ವಿಂಟಲ್, 'ನಾನು ಕಲಿಯಲು ಪ್ರಯತ್ನಿಸುತ್ತೇನೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳುತ್ತೇನೆ. ಜೊತೆಗೆ ರೇಸ್‌ನಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟ ಐರಿಶ್ ತಂಡಕ್ಕೂ ಕೃತಜ್ಞತೆಗಳು' ಎಂದು ಹೇಳಿದ್ದಾರೆ. ಅಭ್ಯಾಸ ಸ್ಪರ್ಧೆಗಳು (ಪ್ರಾಕ್ಟಿಸ್ ಸೆಷನ್‌) ಇಂದು ನಡೆಯಲಿದ್ದು, ಶನಿವಾರ, ಭಾನುವಾರದಂದು ರೇಸ್ ನಡೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 19, 2024, 11:49 [IST]
English summary
Rider kavin quintal first indian participate world superbike championship
Read more on motorsport india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+