55 ಲೀಟರ್ ಶೇಕರಣಾ ಸ್ಥಳ... ಚೈನ್ ಡ್ರೈವ್ ಸಿಸ್ಟಮ್... ಹೊಸ ರಿವರ್ ಇಂಡೀ ವಿಶೇಷತೆಗಳು!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ರಿವರ್ ತನ್ನ ಇಂಡೀ ಸ್ಕೂಟರ್‌ಗೆ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಹೊಸ ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೇರವಾಗಿ ಟೆಸ್ಟ್ ರೈಡ್ ಪಡೆಯಲು, ನಿಮ್ಮ ಹತ್ತಿರದ ರಿವರ್ ಸ್ಟೋರ್‌ಗೆ ಭೇಟಿ ನೀಡಿ ಅಥವಾ ಕಂಪನಿಯ ರಿವರ್ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು. ನ್ಯೂ ಇಂಡೀ ಈಗ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಟೆಸ್ಟ್ ರೈಡ್ ಮತ್ತು ಖರೀದಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.
ರಿವರ್ ಇಂಡೀ ನವೀಕೃತ ಸ್ಕೂಟರ್ ಬೆಲೆಯು ರೂ. 1,42,999 (ಎಕ್ಸ್ ಶೋ ರೂಂ)ಇದೆ. ಮಾನ್ಸೂನ್ ಬ್ಲೂ, ಸಮ್ಮರ್ ರೆಡ್ ಮತ್ತು ಸ್ಪ್ರಿಂಗ್ ಯೆಲ್ಲೋ ಜೊತೆಗೆ ಇಂಡೀ ಈಗ ವಿಂಟರ್ ವೈಟ್ ಮತ್ತು ಸ್ಟಾರ್ಮ್ ಗ್ರೇ ಎಂಬ ಎರಡು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಚೈನ್ ಡ್ರೈವ್‌ನೊಂದಿಗೆ ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.

ವಿಶೇಷತೆಗಳು: ಹೊಸ ಸ್ಕೂಟರ್‌ನಲ್ಲಿ 14 ಇಂಚಿನ ವೀಲ್‌ಗಳನ್ನು ಹೊಂದಿದ್ದು, ಲಾಕ್ ಮತ್ತು ಲೋಡ್ ಪ್ಯಾನಿಯರ್ - ಸ್ಟೇಗಳು ಕಸ್ಟಮೈಸೇಶನ್‌ಗಳ ಒಂದು ಶ್ರೇಣಿಯನ್ನು ಅನುಮತಿಸುತ್ತದೆ. 55 ಲೀಟರ್ ಲಾಕ್ ಮಾಡಬಹುದಾದ ಶೇಕರಣಾ ಸ್ಥಳವನ್ನು ನೀಡಲಾಗಿದ್ದು, ಗ್ಲೋವ್‌ಬಾಕ್ಸ್‌ನಲ್ಲಿ 12 ಲೀಟರ್ ಮತ್ತು 43 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ ಎಂದು ಕಂಪನಿ ಹೇಳಿದೆ.
ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 110 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದ್ದು, ಅದರ ಹಳೆಯ ಮಾಡಲ್‌ನಂತೆ ಹೊಸ ಇಂಡೀ ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಇಂಡೀ ತನ್ನ ಉಪಯುಕ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಬಿಡಿಭಾಗಗಳನ್ನು ಹೊಂದಿದೆ.

ರಿವರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಅರವಿಂದ್ ಮಣಿ ಪ್ರತಿಕ್ರಿಯಿಸಿ, ಮಾರ್ಚ್ 2025 ರ ವೇಳೆಗೆ ಭಾರತದಾದ್ಯಂತ 25 ರಿವರ್ ಸ್ಟೋರ್‌ಗಳನ್ನು ಹೊಂದುವ ಗುರಿಯನ್ನು ನಾವು ಹೊಂದಿದ್ದೇವೆ. ಮುಂದಿನ ಎರಡು ತಿಂಗಳ ಕಾಲ ಕೊಯಮತ್ತೂರು, ವೈಜಾಗ್, ಹುಬ್ಬಳ್ಳಿ, ಕೊಚ್ಚಿನ್, ಬೆಳಗಾವಿ, ವೆಲ್ಲೂರು, ಮೈಸೂರು ಮತ್ತು ಉಪ್ಪಲ್‌ನಲ್ಲಿ ಮಳಿಗೆಗಳನ್ನು ಪ್ರಾರಂಭಿಸುವುದು ನಮ್ಮ ಯೋಜನೆಯಾಗಿದೆ.
ಗ್ರಾಹಕರ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಆಲಿಸುತ್ತಿದ್ದೇವೆ, ಅವರ ಅಗತ್ಯಗಳಿಗೆ ತಕ್ಕಂತೆ ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ವಾಹನ ಬಿಡುಗಡೆ ಮಾಡಿದಾಗಿನಿಂದ 3,000 ಇಂಡೀ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದೇವೆ ಎಂದು ರಿವರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಅರವಿಂದ್ ಮಣಿ ಹೇಳಿದರು.

ರಿವರ್‌ನಲ್ಲಿ ಮೆಕ್ಯಾನಿಕಲ್ ಡಿಸೈನ್‌ನ ಮುಖ್ಯಸ್ಥರಾದ ಮಜರ್ ಅಲಿ ಬೇಗ್ ಮಿರ್ಜಾ ಮಾತನಾಡಿ, "ಸಿಂಗಲ್ ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಚೈನ್ ಡ್ರೈವ್ ಹಲವಾರು ವಿಶಿಷ್ಟ ಪ್ರಯೋಜನಗಳನ್ನು ಹೊಂದಿದೆ. ಇದು ಹೆಚ್ಚು ಬಾಳಿಕೆ ಬರುವದರ ಜೊತೆಗೆ ಈ ನವೀಕರಣದೊಂದಿಗೆ ಮಾಲೀಕತ್ವದ ದೀರ್ಘಾವಧಿಯ ವೆಚ್ಚವು ಕಡಿಮೆಯಾಗುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








