RE ಅಭಿಮಾನಿಗಳಿಗೆ ಸಿಹಿಸುದ್ದಿ: ಶೀಘ್ರದಲ್ಲೇ ರಾಯಲ್ ಎನ್‌ಫೀಲ್ಡ್ 750 ಟ್ವಿನ್ ಬೈಕುಗಳು ಬರಲಿವೆ!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕಂಪನಿಯು ತಮ್ಮ ಬೇಡಿಕೆಯನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚಾಗುತ್ತಿರುವ ಪ್ರತಿಸ್ಪರ್ಧಿಗಳ ಪೈಪೋಟಿಗೆ ಅನುಗುಣವಾಗಿ ತಮ್ಮ ಬೈಕ್‌ಗಳನ್ನು ದೊಡ್ಡ ಸಿಸಿ ವಿಭಾಗದಲ್ಲಿ ಬಿಡುಗಡೆ ಮಾಡುವ ಅನಿವಾರ್ಯತೆ ಇತ್ತು. ಹಾಗಾಗಿಯೇ 650 ಟ್ವಿನ್ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು.

650 ಟ್ವಿನ್ ಬೈಕುಗಳು ಭಾರತದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಸದ್ದು ಮಾಡಿದವು. ಹಾಗೆಯೇ ಆಟೋ ಉದ್ಯಮಕ್ಕೆ ಮಾತ್ರವಲ್ಲ, ವಾಹನ ತಯಾರಕರಿಗೂ ಗೇಮ್ ಚೇಂಜರ್ ಆಗಿದ್ದವು. ವಾಸ್ತವವಾಗಿ, ಪ್ರಪಂಚದಾದ್ಯಂತದ ಅನೇಕ ಆಟೋಮೊಬೈಲ್ ಉತ್ಸಾಹಿಗಳು ರಾಯಲ್ ಎನ್ ಫೀಲ್ಡ್ 650 ಟ್ವಿನ್ ಬೈಕುಗಳನ್ನು ಅವುಗಳ ಮೆಟಲ್ ಬಾಡಿ ಮತ್ತು ಆಕರ್ಷಕ ಪವರ್‌ಗಾಗಿ ಇಷ್ಟಪಟ್ಟರು. ಅನೇಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಟ್ರಯಂಫ್ ಸ್ಪೀಡ್ ಟ್ವಿನ್ 900 ಬೈಕಿಗೆ ಹೋಲಿಸಿದರೆ ರಾಯಲ್ ಎನ್ ಫೀಲ್ಡ್ ಟ್ವಿನ್ಸ್ ಬೈಕ್‌ಗಳು ಬಲವಾದ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ನಿರಂತರವಾಗಿ ಟ್ರಯಂಫ್ ಸ್ಪೀಡ್ ಟ್ವಿನ್ 900ಗೆ ಪೈಪೋಟಿ ನೀಡುವಂತಾದವು.

royal-enfield-750-twin-bikes-coming-soon-know-all-details

ಆದರೆ ರಾಯಲ್ ಎನ್ ಫೀಲ್ಡ್ 650 ಬೈಕ್‌ಗಳು ಪವರ್‌ಟ್ರೇನ್ ವಿಷಯದಲ್ಲಿ ಟ್ರಯಂಫ್ ಗಿಂತ ಹಿಂದುಳಿದಿವೆ. ಟ್ರಯಂಫ್ ಸ್ಪೀಡ್ ಟ್ವಿನ್ 900 ಬೈಕ್ 900 ಸಿಸಿ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಎಸ್ಒಹೆಚ್‌ಸಿ ಎಂಜಿನ್ ಹೊಂದಿದ್ದು, 64.1 ಬಿಹೆಚ್‌ಪಿ ಪವರ್ ಮತ್ತು 80 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಅದೇ ರಾಯಲ್ ಎನ್ ಫೀಲ್ಡ್ 650 ಬೈಕ್‌ಗಳ ಪವರ್‌ಟ್ರೇನ್ ವಿಷಯಕ್ಕೆ ಬಂದರೆ, 648 cc ಸಮಾನಾಂತರ, ಅವಳಿ-ಸಿಲಿಂಡರ್ ಎಂಜಿನ್ 47.65 hp ಪವರ್ ಮತ್ತು 52 Nm ಟಾರ್ಕ್ ಉತ್ಪಾದಿಸುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ರಾಯಲ್ ಎನ್ ಫೀಲ್ಡ್ ಹೆಚ್ಚು ಶಕ್ತಿಶಾಲಿ 750 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ನೊಂದಿಗೆ ಬರುವ ಸಾಧ್ಯತೆಯಿದೆ.

royal-enfield-750-twin-bikes-coming-soon-know-all-details

ಹೌದು 750 ಸಿಸಿ ಹೊಂದಿರುವ ಹೊಸ ಬೈಕ್‌ನೊಂದಿಗೆ 60 ಬಿಹೆಚ್‌ಪಿ ಪವರ್ ಮತ್ತು 55 ಎನ್‌ಎಂ ಟಾರ್ಕ್ ಉತ್ಪಾದಿಸುವ ಎಂಜಿನ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ರಾಯಲ್ ಎನ್‌ಫೀಲ್ಡ್‌ನ ಮುಂಬರುವ 750 ಸಿಸಿ ಎಂಜಿನ್ ತನ್ನ ಈಗಿರುವ 650 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಆಧರಿಸಿದೆ. ಇದು ವಾಹನ ತಯಾರಕರಿಗೆ ಸಾಕಷ್ಟು ಅಭಿವೃದ್ಧಿ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ದೊಡ್ಡ ಬೋರ್ ಮುಂಬರುವ 750 ಸಿಸಿ ರಾಯಲ್ ಎನ್ ಫೀಲ್ಡ್ ಎಂಜಿನ್ ದೊಡ್ಡ ಬೋರ್ ಹೆಚ್ಚಿನ ಆರ್‌ಪಿಎಂನಲ್ಲಿ ಹೆಚ್ಚಿನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಯಲ್ ಎನ್‌ಫೀಲ್ಡ್ ಟ್ವಿನ್ಸ್ ಬೈಕ್‌ಗಳನ್ನು ಇತ್ತೀಚೆಗೆ ಕೆಲವು ರೂಪಾಂತರಗಳಲ್ಲಿ ಎಲ್‌ಇಡಿ ಹೆಡ್‌ಲೈಟ್ ಗಳು ಮತ್ತು ಅಲಾಯ್ ವ್ಹೀಲ್ ಗಳಂತಹ ಕೆಲವು ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಟ್ವಿನ್ ಗಳ ಬೆಲೆಗಳು ಪ್ರಸ್ತುತ 3.03 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತವೆ.

royal-enfield-750-twin-bikes-coming-soon-know-all-details

ರಾಯಲ್ ಎನ್‌ಫೀಲ್ಡ್ 750 ಟ್ವಿನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ರಾಯಲ್ ಎನ್ ಫೀಲ್ಡ್ 650 ಟ್ವಿನ್ ಬೈಕುಗಳನ್ನು ಬದಲಿಸುವ ಸಾಧ್ಯತೆಯಿದೆ. ಇದಲ್ಲದೆ, 750 ಟ್ವಿನ್ ಬೈಕುಗಳು ಟ್ರಯಂಫ್ ಸ್ಪೀಡ್ ಟ್ವಿನ್ 900 ಬೈಕಿಗೆ ಹೆಚ್ಚು ಸ್ಪೋರ್ಟಿಯರ್ ಮತ್ತು ಹೆಚ್ಚು ನೇರ ಪ್ರತಿಸ್ಪರ್ಧಿಯಾಗಿಲಿವೆ ಎಂದು ನಾವು ನಿರೀಕ್ಷಿಸಿದ್ದೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, May 8, 2024, 12:29 [IST]
English summary
Royal enfield 750 twin bikes coming soon know all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+