Royal Enfield: ರಾಯಲ್ ಎನ್‌ಫೀಲ್ಡ್‌ನಿಂದ ನೂತನ ಬೈಕ್ ಬಿಡುಗಡೆ.. ಯಾವುದು, ಬೆಲೆ ಎಷ್ಟು.. ವಿಶೇಷತೆಗಳೇನು?

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್‌ (Royal Enfield) ಪ್ರೀಮಿಯಂ ಮೋಟಾರ್‌ಸೈಕಲ್‌ ತಯಾರಿಕೆಗೆ ಹೆಸರುವಾಸಿಯಾಗಿದೆ. ಇಟಲಿಯಲ್ಲಿ ಜರುಗುತ್ತಿರುವ 'ಮಿಲನ್ ಮೋಟಾರ್‌ಸೈಕಲ್ ಶೋ'ನಲ್ಲಿ ಸೋಮವಾರ ತನ್ನ ಮೊದಲ 'ಫ್ಲೈಯಿಂಗ್ ಫ್ಲಿಯಾ ಸಿ6' ಎಲೆಕ್ಟ್ರಿಕ್ ಬೈಕನ್ನು ಆದ್ದೂರಿಯಾಗಿ ಅನಾವರಣಗೊಳಿಸಿತ್ತು. ಸದ್ಯ, ಹೊಚ್ಚ ಹೊಸ 'ಬೇರ್ 650' (Bear 650) ಮೋಟಾರ್‌ಸೈಕಲ್‌ ಬಿಡುಗಡೆಗೊಳಿಸಿದೆ. ಇದು ಕೊಂಚ ದುಬಾರಿ ದರವನ್ನು ಹೊಂದಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ.. ಈ ನೂತನ ಬೈಕ್‌ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿಯೋಣ.

ಬೆಲೆ (Price): ಹೊಸ ರಾಯಲ್ ಎನ್‌ಫೀಲ್ಡ್‌ ಬೇರ್ 650 (Royal Enfield Bear 650) ಬೈಕ್, ರೂ.3.39 ಲಕ್ಷ ಎಕ್ಸ್ ಶೋರೂಂ (ನವದೆಹಲಿ) ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಬ್ರಾಡ್‌ವಾಕ್ ವೈಟ್, ಪೆಟ್ರೋಲ್ ಗ್ರೀನ್ ಮತ್ತು ಗೋಲ್ಡನ್ ಶ್ಯಾಡೋ ಸೇರಿದಂತೆ 5 ಅತ್ಯಾಧುನಿಕ ಬಣ್ಣಗಳ (ಕಲರ್) ಆಯ್ಕೆಯನ್ನು ಹೊಂದಿದೆ.

Royal Enfield Bear 650 Bike Launched Rs 3 39 Lakh Price Details

ಕಾರ್ಯಕ್ಷಮತೆ (Performance): ಈ ನೂತನ ಮೋಟಾರ್‌ಸೈಕಲ್‌ 650 ಸಿಸಿ ಟ್ವಿನ್-ಸಿಲಿಂಡರ್ ಆಯಿಲ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 7,250 ಆರ್‌ಪಿಎಂನಲ್ಲಿ 46 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5,150 ಆರ್‌ಪಿಎಂನಲ್ಲಿ 56.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ವಿನ್ಯಾಸ (Design): ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್‌ ಬೇರ್ 650 ಬೈಕ್ ಅತ್ಯಾಧುನಿಕವಾಗಿರುವ ವಿನ್ಯಾಸ ಹೊಂದಿದೆ. ಒಂದಷ್ಟು ಅಂಶಗಳು ಇಂಟರ್‌ಸೆಪ್ಟರ್ 650 ಹಾಗೂ ಸ್ಕ್ರಾಂಬ್ಲರ್ ಮೋಟಾರ್‌ಸೈಕಲ್‌ಗೂ ಹೋಲಿಕೆಯಾಗುತ್ತವೆ. ಆದರೆ, ಅವುಗಳಿಂದಂತೆ ಭಿನ್ನ ಎಂದು ತೋರಿಸಲು ಉತ್ತಮವಾಗಿರುವ ಸರ್ಕ್ಯುಲರ್ ಎಲ್ಇಡಿ ಹೆಡ್‌ಲೈಟ್, ಟೈಲ್‌ಲ್ಯಾಂಪ್ ಮತ್ತು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ವೈಶಿಷ್ಟ್ಯಗಳು (Features): ಈ ಬೇರ್ 650 ಮೋಟಾರ್‌ಸೈಕಲ್‌ ಹಲವು ವಿನೂತನವಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಟ್ಟಿಗೆ ಮುಂಭಾಗ (ಫ್ರಂಟ್) 19-ಇಂಚು ಹಾಗೂ ಹಿಂಭಾಗ (ರೇರ್) 17-ಇಂಚಿನ ಸ್ಪೋಕ್ ವೀಲ್‌ಗಳನ್ನು ಪಡೆದಿದ್ದು, ಎಂಆರ್‌ಎಫ್‌ ಕಂಪನಿಯ ನೈಲೋರೆಕ್ಸ್ ಟೈರ್‌ಗಳನ್ನು ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup And Brake Systems): ನೂತನ ಬೈಕ್ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದ್ದು, ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಒಟ್ಟಾರೆಯಾಗಿ ಹೊಸ ರಾಯಲ್ ಎನ್‌ಫೀಲ್ಡ್‌ ಬೇರ್ 650 ಬೈಕ್ ಸಾಕಷ್ಟು ಅತ್ಯಾಧುನಿಕವಾಗಿದೆ. ಇದು ಪ್ರೀಮಿಯಂ ಮೋಟಾರ್‌ಸೈಕಲ್‌ ಕೊಂಡುಕೊಳ್ಳಬೇಕೆಂದು ಆಸೆಪಡುವ ಗ್ರಾಹಕರಿಗೆ ಹೆಚ್ಚು ಸೂಕ್ತವಾಗಲಿದ್ದು, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 5, 2024, 17:23 [IST]
English summary
Royal enfield bear 650 bike launched rs 3 39 lakh price details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+